ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಮಕ್ಕಳಿಗೆ ಪೋಲಿಯೋ ಹನಿ ಜೊತೆ ಇಂಜೆಕ್ಷನ್

By Vanitha
|
Google Oneindia Kannada News

ನವದೆಹಲಿ, ಡಿಸೆಂಬರ್, 01: ಐದು ವರ್ಷದೊಳಗಿನ ಮಕ್ಕಳಿಗೆ ಪ್ರತಿವರ್ಷ ಎರಡು ಬಾರಿ ಪೋಲಿಯೋ ಹನಿ ಹಾಕಲಾಗುತ್ತದೆ. ಇನ್ನು ಮುಂದೆ ಪೋಲಿಯೋ ಹನಿ ಜೊತೆಗೆ ಇಂಜೆಕ್ಷನ್ ನೀಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದ್ದು, ಮಕ್ಕಳ ಸುರಕ್ಷತೆ ಕಡೆಗೆ ಹೆಚ್ಚಿನ ಕಾಳಜಿ ತೋರಿಸಿದೆ.

ಭಾರತ ಪೋಲಿಯೋ ಮುಕ್ತ ರಾಷ್ಟ್ರ ಎಂದೆನಿಸಿಕೊಂಡರೂ ಮತ್ತೊಮ್ಮೆ ಪೋಲಿಯೋ ವೈರಾಣು ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ. ಆದ ಕಾರಣ 'ಇನ್ ಆಕ್ಟಿವೇಟೆಡ್ ಪೋಲಿಯೋ ವ್ಯಾಕ್ಸಿನ್' ನ್ನು ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ತೀರ್ಮಾನ ತೆಗೆದುಕೊಂಡಿದೆ.[ನಗುತ್ತಾ,ನಗಿಸುತ್ತಿದ್ದರೆ ಹೃದಯ ಆರೋಗ್ಯ ನಿಮ್ಮಂತೆ ಹಸನ್ಮುಖಿ]

Union health Minister J.P. Nadda launch the Inactivated Polio Vaccine in New Delhi

ಇಂಜೆಕ್ಷನ್ ನೀಡುವ ವ್ಯವಸ್ಥೆಯನ್ನು ಮೊದಲು ಅಸ್ಸಾಂ, ಬಿಹಾರ, ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತದೆ. ಮಕ್ಕಳಿಗೆ ಈ ಇಂಜೆಕ್ಷನ್ ನ್ನು ಮೂರನೇ ವರ್ಷದಿಂದ ನೀಡಲು ಪ್ರಾರಂಭಿಸಿ ಐದನೇ ವರ್ಷದವರೆಗೂ ಮುಂದುವರೆಸಲಾಗುತ್ತದೆ.[ವಿಶ್ವ ಪಾರ್ಶ್ವವಾಯು ದಿನಾಚರಣೆ ನಿಮಿತ್ತ ವಿಶೇಷ ಲೇಖನ]

ಒಟ್ಟು ಸತತವಾಗಿ ಮೂರು, ನಾಲ್ಕು, ಐದನೇ ವರ್ಷದವರೆಗೂ ಮಕ್ಕಳು ಪೋಲಿಯೋ ಹನಿ ಜೊತೆಗೆ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ಪಾಕಿಸ್ತಾನ, ಅಫ್ಘಾನಿಸ್ತಾನದಂತಹ ನೆರೆರಾಷ್ಟ್ರಗಳಲ್ಲಿ ಪೋಲಿಯೋ ವೈರಾಣು ಕಾಣಿಸಿಕೊಂಡ ಪರಿಣಾಮ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

English summary
Union Minister for Health and Family Welfare J.P. Nadda launch the Inactivated Polio Vaccine (IPV), in New Delhi on Monday, November 30th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X