ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಮಾನ ಹುಟ್ಟಿಸಿದ ಇರಾನ್‌ಮೂಲದ ಹಡಗು

By Vanitha
|
Google Oneindia Kannada News

ನವದೆಹಲಿ, ಜು, 06 : ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಮೀನುಗಾರರು ಹಾಗೂ ಹಡಗನ್ನು ಭಾನುವಾರ ಕೇರಳದ ಅಲೆಪ್ಪಿ ಎಂಬಲ್ಲಿ ಕರಾವಳಿ ಕಾವಲುಪಡೆ ಮತ್ತು ಪೊಲೀಸರು ಸೆರೆಹಿಡಿದಿದ್ದಾರೆ.

ಮೀನುಗಾರರು ಹಡಗಿನಲ್ಲಿ ಇರಾನ್‌ನ ಕಲಾತ್‌ನಿಂದ ಮೇ 25ರಂದು ತನ್ನ ಪ್ರಯಾಣವನ್ನು ಆರಂಭಿಸಿದ್ದರು ಇವರನ್ನು ಸೆರೆ ಹಿಡಿದು ತನಿಖೆಗೆ ಒಳಪಡಿಸಿದಾಗ ಗುರುತಿನ ಚೀಟಿ ಮತ್ತು ಸ್ಯಾಟಲೈಟ್ ಫೋನ್‌ ದೊರೆತಿದ್ದು, ಹಡಗು ಇರಾನ್ ಮೂಲದ್ದು ಎಂಬ ಮಾಹಿತಿ ಲಭ್ಯವಾಗಿದೆ[ಪಾಕ್ ಬಲೆಯಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರರು ಮನೆಗೆ]

Two Pakistanis missing from Kerala boat intercepted on July 3

ಗುಪ್ತಚಾರ ಇಲಾಖೆಯಿಂದ ದೊರೆತ ಮಾಹಿತಿಗಳಿಗೂ ಹಾಗೂ ಹಡಗಿನಲ್ಲಿದ್ದವರ ವಿವರಗಳು ತಾಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರಿಗೆ ಕೆಲವು ಅನುಮಾನಗಳು ಮೂಡುತ್ತಿವೆ. ಹಾಗೆಯೇ ಹಡಗಿನ ಮೂಲಕ ಭಾರಿ ಪ್ರಮಾಣದ ಯಾವುದೋ ವಸ್ತುವನ್ನು ಕಳ್ಳಸಾಗಾಣಿಕೆ ನಡೆಸಿರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.

ತನಿಖೆ ಕೈಗೊಳ್ಳಬಹುದೆಂದು ಗೊತ್ತಾದ ಇಬ್ಬರು ಪಾಕಿಸ್ತಾನಿ ಮೂಲದ ಮೀನುಗಾರರು ಪ್ರಯಾಣದ ನಡುವೆಯೇ ಪರಾರಿಯಾಗಿದ್ದಾರೆ. ಆದರೆ ಇವರು ನಾಪತ್ತೆಯಾಗಿರುವುದರ ಕುರಿತಾಗಿನ ನಿಖರವಾದ ಮಾಹಿತಿ ಇಲ್ಲ ಹಾಗೂ ಹಡಗಿನಲ್ಲಿ ಮಾರಕ ಶಸ್ತ್ರಾಸ್ತ್ರ, ಮಾದಕ ವಸ್ತು ಹಾಗೂ ಸ್ಪೋಟಕಗಳಿರಲಿಲ್ಲ ಎಂಬುದಾಗಿ ತಿಳಿದು ಬಂದಿದೆ ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.

English summary
Pakistani nationals get off the suspicious fishing trawler that was intercepted at Kerala on Sunday. The boat began its journey from Kalat in Iran on May 25th. Investigation officers said that We have not found any weapons, drugs or other material on the boat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X