ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲೇಟು ತಿಂದ ಅಲಕಾ ವಿರುದ್ಧ ಪೊಲೀಸರಿಂದ ಎಫ್ಐಆರ್

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 10: ಆಮ್ ಆದ್ಮಿ ಪಕ್ಷದ ಶಾಸಕಿ ಅಲಕಾ ಲಂಬಾ ಅವರ ಕಲ್ಲೇಟು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಉತ್ತರ ದೆಹಲಿಯಲ್ಲಿ ಶಾಸಕಿ ಅಲಕಾ ಅವರು ಅಂಗಡಿ ಮಳಿಗೆಗೆ ನುಗ್ಗಿ ದುಂಡಾವರ್ತನೆ ಮಾಡಿದ ಆರೋಪ ಹೊತ್ತಿದ್ದು, ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.

ಸಿಎನ್ಎನ್ ಐಬಿಎನ್ ವರದಿ ಪ್ರಕಾರ, ಶಾಸಕಿ ಅಲಕಾ ಅವರು ಅಂಗಡಿ ಮಳಿಗೆಗೆ ಕಾಲಿಟ್ಟು ಅಲ್ಲಿದ್ದ ಬಿಲ್ ಕಟ್ಟುವ ಯಂತ್ರವನ್ನು ದೂಡುತ್ತಾರೆ. ನಂತರ ಇತರೆ ಕಾರ್ಯಕರ್ತರು ಒಳಗೆ ನುಗ್ಗಿ ದಾಂಧಲೆ ಮಾಡುತ್ತಾರೆ. ಈ ದೃಶ್ಯಗಳಿರುವ ಸಿಸಿಟಿವಿ ಕ್ಲಿಪ್ಪಿಂಗ್ ಗಳು ಬಿಡುಗಡೆಯಾದ ಬೆನ್ನಲ್ಲೇ ಪೊಲೀಸರು ಕ್ರಮ ಜರುಗಿಸಿದ್ದಾರೆ.[ಅಲಕಾ ಲಂಬಾ ತಲೆಗೆ ಗುನ್ನ, ಬಿಜೆಪಿಯೇ ಕಾರಣ: ಎಎಪಿ]

Trouble for Alka Lamba

ಭಾರತೀಯ ದಂಡ ಸಂಹಿತೆ ಸೆಕ್ಷನ್ 451,427,186, 353 ಅನ್ವಯ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಈ ಘಟನೆಯಲ್ಲಿ ಪ್ರಮುಖ ಸಾಕ್ಷಿಯಾಗಿದ್ದು, ಇದರ ಪರಿಶೀಲನೆ ಜಾರಿಯಲ್ಲಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ಶಾಸಕಿ ಅಲಕಾ ಅವರು ಉತ್ತರ ದೆಹಲಿಯ ರಾಜ್ ಘಾಟ್ ಪ್ರದೇಶದ ಕಾಶ್ಮೀರಿ ಗೇಟ್ ಬಳಿ ಮಾದಕ ವ್ಯಸನ ಕುರಿತಂತೆ ಭಾಷಣ ಆರಂಭಿಸುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲು ತೂರಾಟ ನಡೆಸಿದ ಘಟನೆ ಭಾನುವಾರ ನಡೆದಿತ್ತು. ಈ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಈ ಘಟನೆಗೆ ಬಿಜೆಪಿ ಓಂ ಪ್ರಕಾಶ್ ಅವರೆ ಕಾರಣ ಎಂದು ಎಎಪಿ ಮುಖಂಡ ಆಶುತೋಷ್ ಕಿಡಿಕಾರಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Hours after the CCTV footage showing AAP MLA Alka Lamba vandalising a shop in North Delhi's Kashmere Gate area, the police on Monday registered a case against her for alleged trespassing and assault.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X