ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಟಿಕೆಟ್ ಕನ್ಫರ್ಮ್ ಆಗದಿದ್ದರೇನಂತೆ ವಿಮಾನವಿದೆಯಲ್ಲ!

By Prasad
|
Google Oneindia Kannada News

ನವದೆಹಲಿ, ಮೇ. 14 : ರೈಲು ಟಿಕೆಟ್ ಬುಕ್ ಮಾಡಿರುತ್ತೀರಿ, ಕಡೆಯ ಘಳಿಗೆಯವರೆಗೂ ಕನ್ಫರ್ಮ್ ಆಗುವುದೇ ಇಲ್ಲ. ಥತ್ತೆರೀಕೆ ಎಲ್ಲಾ ಕೆಟ್ತು ಅಂತ ಜೋಲು ಮುಖ ಹಾಕಿಕೊಂಡು ಕುಳಿತುಕೊಳ್ಳಬೇಡಿ. ನಿಮ್ಮ ಪಯಣ ಮುಂದುವರಿಸಲು ಮತ್ತು ಸುಖಕರವಾಗಿಸಲು ರೈಲು ಇಲಾಖೆ ಒಂದು ಸೂಪರ್ ಪ್ಲಾನನ್ನು ಹಾಕಿಕೊಂಡಿದೆ.

ಅದೇನೆಂದರೆ, ನಿಮ್ಮ ಹೆಸರು ವೇಯ್ಟಿಂಗ್ ಲಿಸ್ಟಿನಲ್ಲಿದ್ದರೆ ಮತ್ತು ಇನ್ನೂ ಸ್ವಲ್ಪ ಹಣ ಹೊಂದಿಸಲು ನೀವು ತಯಾರಾಗಿದ್ದರೆ, ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್ ನೀಡಲು ರೈಲು ಇಲಾಖೆ ನಿರ್ಧರಿಸಿದೆ. ಇದನ್ನು ನೀವು ನಂಬಲೇಬೇಕು. ಹೇಗಿದೆ ಭರ್ಜರಿ ಆಫರ್?

ರೈಲ್ವೆ ಇಲಾಖೆ ಎರಡು ವಿಮಾನಯಾನ ಕಂಪನಿಗಳಾದ ಗೋಏರ್ ಮತ್ತು ಸ್ಪೈಸ್ ಜೆಟ್ ಜೊತೆ ಡೀಲ್ ಕುದುರಿಸಿದ್ದು, ರೈಲ್ವೆ ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್ ನೀಡಲು ಒಡಂಬಡಿಕೆ ಮಾಡಿಕೊಂಡಿದೆ.

Train ticket not confirmed, don't worry! IRCTC will provide you discounted flight ticket

ಸಂತೋಷದಿಂದ ಕುಣಿದಾಡುವ ಮುನ್ನ, ಇಲ್ಲಿ ಕೆಲವೊಂದು ನಿಬಂಧನೆಗಳಿವೆ ಅವನ್ನೂ ಓದಿಬಿಡಿ.

* ನಿಮ್ಮ ಹೆಸರು ವೇಯ್ಟಿಂಗ್ ಲಿಸ್ಟಿನಲ್ಲಿರಬೇಕು.
* ಟಿಕೆಟನ್ನು ಪ್ರಯಾಣದ ದಿನವೇ ಖರೀದಿಸಿರಬಾರದು.
* ಮೂರು ದಿನಗಳಿಗೆ ಮೊದಲೇ ಟಿಕೆಟನ್ನು ಬುಕ್ ಮಾಡಿರಬೇಕು.
* ಟಿಕೆಟನ್ನು ಐಆರ್‌ಸಿಟಿಸಿ ವೆಬ್ ಸೈಟ್ ಮುಖಾಂತರವೇ ಬುಕ್ ಮಾಡಿಸಿರಬೇಕು.

ಮುಂದೆ?

* ಕಾಯುತ್ತಿರುವ ಪ್ರಯಾಣಿಕರ ಅಧಿಕೃತ ಪಟ್ಟಿ ಸಿದ್ಧವಾಗುತ್ತಿದ್ದಂತೆ, ರೈಲ್ವೆ ಅಧಿಕಾರಿಗಳು ಪಟ್ಟಿಯಲ್ಲಿದ್ದವರಿಗೆ ವಿಮಾನ ಟಿಕೆಟ್ ಬುಕ್ ಮಾಡಬಹುದೆಂದು ಈಮೇಲ್ ಕಳುಹಿಸುತ್ತಾರೆ.
* ಇದಕ್ಕೆ ಶೇ.30ರಿಂದ 40ರಷ್ಟು ರಿಯಾಯಿತಿ ಸಿಗುತ್ತದೆ. ಉದಾಹರಣೆಗೆ, ವಿಮಾನ ದರ 5 ಸಾವಿರ ಇದ್ದರೆ, 3 ಸಾವಿರ ರು. ನೀಡಬೇಕಾಗುತ್ತದೆ.

ಮುಂದಿನದೂ ಓದಿಬಿಡಿ

* ವಿಮಾನ ಟಿಕೆಟ್ ಬುಕ್ ಮಾಡಿದ ಕೂಡಲೆ ರೈಲ್ವೆಗೆ ಬುಕ್ ಮಾಡಿದ ಹಣ ವಾಪಸ್ ಬರುವುದಿಲ್ಲ. ನಂತರ, ನಿಮ್ಮ ಬ್ಯಾಂಕ್ ಅಕೌಂಟಿಗೆ ಹಣ ಸಂದಾಯವಾಗುತ್ತದೆ.
* ಏನೋ ಗೊಂದಲವಾಗಿ ಕಡೆ ಘಳಿಗೆಯಲ್ಲಿ ವಿಮಾನ ಟಿಕೆಟ್ಟನ್ನೂ ಕ್ಯಾನಲ್ ಮಾಡುವ ಹಾಗಿಲ್ಲ. ಹಾಗೇನಾದರೂ ಮಾಡಿದರೆ ಹೆಚ್ಚುವರಿ ಚಾರ್ಜ್ ಕಟ್ಟಬೇಕಾಗುತ್ತದೆ.

ಇದನ್ನೆಲ್ಲಾ ಓದಿ ಮನನ ಮಾಡಿಕೊಂಡ ಮೇಲೆ, ರೈಲ್ವೆ ಟಿಕೆಟ್ ಕನ್ಫರ್ಮ್ ಆಗದಿದ್ದರೆ ವಿಮಾನ ಟಿಕೆಟ್ ಪಡೆಯುವುದು ಬಿಡುವುದು ಪ್ರಯಾಣಿಕರಿಗೆ ಬಿಟ್ಟಿದ್ದು.

English summary
Your train tickets are yet not confirmed, don't worry as Indian Railways has an alternative plan to make your ride comfortable. It will provide you discounted air tickets if you are in the list of waiting passengers. But before jumping with joy go through certain conditions to avail this facility of the Indian Railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X