ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಹಂತದಲ್ಲಿ ಒಬಾಮ ಸೇವಿಸುವ ಆಹಾರ, ನೀರಿನ ಪರೀಕ್ಷೆ!

By Kiran B Hegde
|
Google Oneindia Kannada News

ನವದೆಹಲಿ, ಜ. 22: ಇದನ್ನು ಅಮೆರಿಕ ತನ್ನ ಅಧ್ಯಕ್ಷರ ಸುರಕ್ಷೆಗೆ ವಹಿಸುತ್ತಿರುವ ಕಾಳಜಿ ಎನ್ನಬೇಕೋ ಅಥವಾ ಭಾರತೀಯ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯದ ಕುರಿತು ಜಗತ್ತಿನ ದೊಡ್ಡಣ್ಣ ಮಾಡಿದ ಪರೋಕ್ಷ ಅಣಕ ಎನ್ನಬೇಕೋ ತಿಳಿಯುತ್ತಿಲ್ಲ.

ಬರಾಕ್ ಒಬಾಮ ರಕ್ಷಣೆಗೆ ಅಮೆರಿಕವೇ ಸ್ವತಃ ಖುದ್ದು ಆಸಕ್ತಿ ವಹಿಸಿದ್ದು, ದಿನಕ್ಕೆ 900 ಕೋಟಿ ರು. ವೆಚ್ಚ ಮಾಡುತ್ತಿದೆ. ಜೊತೆಯಲ್ಲಿ ರಕ್ಷಣೆಗಾಗಿ ಅಮೆರಿಕದಿಂದಲೇ ದೊಡ್ಡದೊಂದು ತಂಡ ಬರುತ್ತಿದೆ. ಹೊಸ ವಿಷಯ ಏನೆಂದರೆ 'ಒಬಾಮ ದಂಪತಿ ಸೇವಿಸುವ ಆಹಾರ ಮೂರು ಹಂತದಲ್ಲಿ ಪರೀಕ್ಷೆಗೊಳಪಡುತ್ತದೆ' ಎಂಬುದು! [ಒಬಾಮರಿಂದ ಭಾರತದ ನಿರೀಕ್ಷೆಗಳು]

barack

ಹೌದು, ಬರಾಕ್ ಒಬಾಮ ಭಾರತದಲ್ಲಿರುವ ಸಂದರ್ಭ ಅವರು ಹಾಗೂ ಪತ್ನಿ ಮಿಷೆಲ್ ಸೇವಿಸುವ ಆಹಾರ ಹಾಗೂ ನೀರು ಅವರು ತಂಗಲಿರುವ ಹೋಟೆಲ್ ಐಟಿಸಿ ಮೌರ್ಯದಲ್ಲಿ ಮೂರು ಹಂತಗಳಲ್ಲಿ ರಕ್ಷಣಾ ಪಡೆಗಳಿಂದ ಪರೀಕ್ಷಿಸಲ್ಪಡುತ್ತದೆ. ಅವುಗಳಲ್ಲಿ ಒಂದು ತಂಡ ನವದೆಹಲಿ ಪೊಲೀಸರದ್ದಾಗಿದ್ದರೆ ಮತ್ತೊಂದು ತಂಡ ಖುದ್ದು ಅಮೆರಿಕ ಗುಪ್ತ ದಳದ ಏಜೆಂಟ್‌ಗಳದ್ದು! [ಬರಾಕ್ ಭೇಟಿ : 10 ಸಂಗತಿ ತಿಳಿಯಿರಿ]

3 ದಿನ ಹೋಟೆಲ್‌ನಲ್ಲಿ ಪೊಲೀಸರ ಮೇಲ್ವಿಚಾರಣೆ : ಜ. 25ರ ಬೆಳಗ್ಗೆಯೇ ಹೋಟೆಲ್‌ನಲ್ಲಿ ಮೊಕ್ಕಾಂ ಹೂಡಲಿರುವ ದೆಹಲಿ ಪೊಲೀಸರು, ಸಂಪೂರ್ಣ ಆಹಾರ ಪೂರೈಕೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಈ ಪ್ರಕ್ರಿಯೆ ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ. ಅಮೆರಿಕದ ಗುಪ್ತದಳದ ಏಜೆಂಟರು ಈಗಾಗಲೇ ಹೋಟೆಲ್ ಒಳಗೆ ಕಾಲಿಟ್ಟಿದ್ದಾರೆ! [ಒಬಾಮ ಭದ್ರತೆಗೆ 1 ಲಕ್ಷ ಪೊಲೀಸರು]

ಒಬಾಮ ಅವರಿಗೆ ಆಹಾರ ಪೂರೈಸುವ 15 ನಿಮಿಷಗಳ ಮೊದಲು ಆಹಾರ ಪರೀಕ್ಷೆ ಪ್ರಕ್ರಿಯೆ ಮುಗಿಯಲಿದೆ. ನಂತರ ಅವರಿಗಾಗಿ ಇಟ್ಟಿರುವ ಆಹಾರದ ಹತ್ತಿರ ಯಾರೂ ಹೋಗುವಂತಿಲ್ಲ. ಅವರು ಸೇವಿಸುವ ನೀರಿನ ಪರೀಕ್ಷೆಯೂ ಇದೇ ಮಾದರಿಯಲ್ಲಿ ನಡೆಯಲಿದೆ. [ಸೈನಿಕರ ತಾಲೀಮು, ನೋಡಿ ಹೆಮ್ಮೆಪಡಿ]

English summary
The food and drinking water to be served to US President Barack Obama and his wife Michelle during their stay at the ITC Maurya will pass through three layers checking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X