ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಮೋದಿಗಾಗಿ ಗಂಡನನ್ನೇ ಬಿಡ್ತೀನಿ ಎಂದ ಮಹಿಳೆ

ಅಧಿಕ ಮುಖಬೆಲೆಯ ನೋಟು ನಿಷೇಧಿಸಿ ಪ್ರಧಾನಿ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಬೆಂಬಲಿಸಿ ಮಹಿಳೆಯೊಬ್ಬರು ತಮ್ಮ ಮೋದಿ ವಿರೋಧಿ ಪತಿಗೆ ವಿಚ್ಛೇಧನ ನೀಡುವುದಕ್ಕೂ ಸಿದ್ದ ಎಂದು ಹೇಳಿಕೆ ನೀಡಿದ್ದಾರೆ.

By Prithviraj
|
Google Oneindia Kannada News

ನವದೆಹಲಿ, ನವೆಂಬರ್, 28: ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಮಂದಿ ಹಲವು ರೀತಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಮೋದಿ ಅವರ ನಿರ್ಧಾರವನ್ನು ಖಂಡಿಸುವವರೂ ಇದ್ದಾರೆ.

ಪ್ರಧಾನಿಯ ನಿರ್ಧಾರವನ್ನು ಬೆಂಬಲಿಸಿ ರಶ್ಮಿ ಜೈನ್ ಎಂಬ ವಿವಾಹಿತ ಮಹಿಳೆಯೊಬ್ಬರು ಸಂಚಲನಾತ್ಮಕ ಹೇಳಿಕೆ ನೀಡಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

This Woman Is Ready To Divorce Her Anti-Modi Husband

"ನನ್ನ ಗಂಡ ಪ್ರಧಾನಿ ಮೋದಿ ಅವರ ವಿರೋಧಿ, ನೋಟು ನಿಷೇಧಿಸಿ ಮೋದಿ ಅವರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ನಿರ್ಧಾರಕ್ಕೆ ನನ್ನ ಬೆಂಬಲ ಯಾವಾಗಲೂ ಇರುತ್ತದೆ. ನನ್ನ ಬೆಂಬಲಕ್ಕೆ ನನ್ನ ಪತಿ ಅಡ್ಡಿಯಾದರೆ ಗಂಡನಿಂದ ವಿಚ್ಚೇಧನ ಪಡೆಯುವುದಕ್ಕೂ ನಾನು ಸಿದ್ಧ ಎಂದು ಮಹಿಳೆ ಹೇಳಿದ್ದಾರೆ"

"ಮೋದಿ ಅವರು ಯಾವುದೇ ಪೂರ್ವಗ್ರಹವಿಲ್ಲದೆ, ದುರಾಸೆಯಿಲ್ಲದೆ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ನಿಮ್ಮಲ್ಲಿ ಎಷ್ಟು ಜನ ನಿಸ್ವಾರ್ಥ ಸೇವೆ ಮಾಡಲು ಸಿದ್ದರಿದ್ದೀರಿ? ಕ್ಯೂ ಲೈನ್ ನಲ್ಲಿ ನಿಲ್ಲಲು ಇಷ್ಟೊಂದು ಪರಿತಪಿಸುವುದೇಕೆ, ದೇಶಕ್ಕಾಗಿ ನೀವು ಏನು ಮಾಡಿದ್ದೀರಿ ಎಂದು ಮಹಿಳೆ ಸಾರ್ವಜನಿಕರನ್ನು ಪ್ರಶ್ನಿಸಿದ್ದಾರೆ".

ಮೋದಿ ಅವರು ಒಬ್ಬೊಂಟಿಯಾಗಿ ನಿಮ್ಮೆಲ್ಲರಿಗಾಗಿ ಹೋರಾಡುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಅಕ್ರಮ ಮಾಡುತ್ತಿರುವುದು ಕಂಡು ಬಂದರೆ ನೀವು ಸಹ ಅವರ ವಿರುದ್ಧ ಹೋರಾಡಿ ಎಂದು ಈ ಮಹಿಳೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ನೋಟು ನಿಷೇಧದ ಪರಿಣಾಮದಿಂದ ಕೆಲಸದ ಒತ್ತಡ ತಾಳಲಾರದೆ 11 ಮಂದಿ ಬ್ಯಾಂಕ್ ಅಧಿಕಾರಿಗಳು ಮೃತಪಟ್ಟಿದ್ದಾರೆ, 50ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಭಯದಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನೂ ಕೆಲವು ಕ್ಯೂ ಲೈನ್ ನಲ್ಲಿ ನಿಂತು ಜೀವ ತ್ಯಜಿಸಿದ್ದಾರೆ.

English summary
A video is doing the round on social media wherein a woman is willing to divorce her husband if he opposes the demonetisation move taken by Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X