ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯದ್ದು ರಾಷ್ಟ್ರನೀತಿ, ರಾಜನೀತಿಯಲ್ಲ: ಮೋದಿ

By Mahesh
|
Google Oneindia Kannada News

ನವದೆಹಲಿ,ಏ.19: ನಮ್ಮದು ರೈತ ಪರ ಸರ್ಕಾರ, ಭೂ ಸ್ವಾಧೀನ ಕಾಯ್ದೆ ಬಡವರ ವಿರೋಧಿಯಲ್ಲ, ನಾವು ರಾಷ್ಟ್ರ ನೀತಿಯಲ್ಲಿ ನಂಬಿಕೆ ಇಟ್ಟುರುವವರೇ ಹೊರತು ರಾಜನೀತಿಯಲ್ಲಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರನ್ನು ಉದ್ದೇಶಿಸಿ ಭಾನುವಾರ ಆರಂಭವಾದ ಕಾರ್ಯಾಗಾರದಲ್ಲಿ ಹೇಳಿದರು.

ನಮ್ಮ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಮಸೂದೆಯನ್ನು ರೈತರು ಮತ್ತು ಬಡವರ ವಿರೋಧಿ ಎಂದು ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ನಿಮ್ಮಲ್ಲಿ ಇದೆ. ಕೇವಲ ಮಾಧ್ಯಮಗಳಲ್ಲಿ ಹೈಲೆಟ್​​ ಆಗುವುದನ್ನು ಬಿಡಿ. ಜನರ ಮನಸಿನಲ್ಲಿ ಉಳಿಯುವಂಥ ಕೆಲಸ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು. ['ಮೋದಿಗೆ ಸಿಕ್ತು ಮೌಕಾ ಮಾಡಿದ್ದೆಲ್ಲ ದೋಖಾ']

ಕೇಂದ್ರ ಭೂಸ್ವಾಧೀನ ಕಾಯ್ದೆ ವಿರುದ್ದ ಕಾಂಗ್ರೆಸ್ ಹಮ್ಮಿಕೊಂಡಿರುವ ರೈತರ ಬೃಹತ್ ಪ್ರತಿಭಟನೆ ಆರಂಭಕ್ಕೆ ಮುನ್ನ ಅವರು ಇಂದು ಬಿಜೆಪಿ ಸಂಸದರನ್ನುದ್ದೇಶಿಸಿ ಮಾತನಾಡಿದರು. ಈ ಕಾರ್ಯಾಗಾರದಲ್ಲಿ ಬಿಜೆಪಿಯ ಹಿರಿಯ ನಾಯಕರು, ದೇಶದೆಲ್ಲೆಡೆಯಿಂದ ಬಂದ ಸಂಸದರು ಪಾಲ್ಗೊಂಡಿದ್ದಾರೆ.

ನಮ್ಮ ಸರ್ಕಾರದ ಏಕೈಕ ಉದ್ದೇಶ ಬಡತನ ನಿರ್ಮೂಲನೆ

ನಮ್ಮ ಸರ್ಕಾರದ ಏಕೈಕ ಉದ್ದೇಶ ಬಡತನ ನಿರ್ಮೂಲನೆ

ನಮ್ಮ ಸರ್ಕಾರದ ಏಕೈಕ ಉದ್ದೇಶ ಬಡತನ ನಿರ್ಮೂಲನೆ ಮತ್ತು ಬಡವರ ಉದ್ಧಾರ. ಮುಖ್ಯವಾಗಿ ಹಳ್ಳಿಗಳು ಮತ್ತು ಹಳ್ಳಿಗಳಲ್ಲಿನ ಜನಜೀವನ ಪರಿಸ್ಥಿತಿ ಬದಲಾಗಬೇಕಿದೆ. ಹಳ್ಳಿ ಜನರು ನಗರ ಪ್ರದೇಶದ ಜನರಂತೆಯೇ ಎಲ್ಲ ಅಗತ್ಯ ಸೌಲಭ್ಯಗಳನ್ನು ಪಡೆಯಬೇಕು.

ಸಂಸದರು ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಬೇಕು

ಸಂಸದರು ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಬೇಕು

ಬಡವರ ಉದ್ದಾರಕ್ಕಾಗಿ ಅವರಿಗೆ ಅನುಕೂಲವಾಗುವ ಯಾವುದೇ ಕೆಲಸಗಳನ್ನು ಸಚಿವರು, ಸಂಸದರು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಮಾಡಬೇಕು. ನಮ್ಮ ಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ವಿರೋಧ ಪಕ್ಷಗಳು ನೋಡಲು ಅಥವಾ ಕೇಳಲು ಇಷ್ಟಪಡುವುದಿಲ್ಲ. ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಾರೆ. ಅದಕ್ಕೆಲ್ಲ ನೀವು ಕಿವಿಗೊಡಬೇಡಿ

ಸಚಿವ ವಿ.ಕೆ.ಸಿಂಗ್‌ ಯೆಮನ್ ಕಾರ್ಯಾಚರಣೆ

ಸಚಿವ ವಿ.ಕೆ.ಸಿಂಗ್‌ ಯೆಮನ್ ಕಾರ್ಯಾಚರಣೆ

ವಿ.ಕೆ.ಸಿಂಗ್‌ಗೆ ಶಹಭಾಸ್‌ಗಿರಿ: ಯುದ್ಧ ಪೀಡಿತ ಯೆಮನ್‌ನಲ್ಲಿ ಸಿಲುಕಿಕೊಂಡಿದ್ದ ನಾಲ್ಕು ಸಾವಿರಕ್ಕೂ ಅಧಿಕ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಅವರನ್ನು ಮೋದಿ ಪ್ರಶಂಸಿಸಿದರು.

ಸೈನಿಕನಂತೆ ಕಾರ್ಯ ನಿರ್ವಹಿಸಿದ ವಿಕೆ ಸಿಂಗ್

ಸೈನಿಕನಂತೆ ಕಾರ್ಯ ನಿರ್ವಹಿಸಿದ ವಿಕೆ ಸಿಂಗ್

ಸಚಿವ ವಿ.ಕೆ.ಸಿಂಗ್ ಅವರು ಸೈನಿಕನಂತೆ ಅಲ್ಲಿ ನಿಂತು ಕಾರ್ಯ ನಿರ್ವಹಿಸಿದರು. ಭಾರತೀಯರನ್ನು ಅಲ್ಲಿಂದ ತೆರವುಗೊಳಿಸುವ ವೇಳೆ ಅವರು ಕೈಗೊಂಡ ಕಾಳಜಿ ಬಗ್ಗೆ ವಿವರಿಸಬೇಕಾಗಿಲ್ಲ. ಇದರಿಂದ ಭಾರತದ ಹಿರಿಮೆ ಹೆಚ್ಚಿದೆ ಎಂದು ಮೋದಿ ಕೊಂಡಾಡಿದರು.

9ದಿನಗಳ ಪ್ರವಾಸದ ಬಗ್ಗೆ ಮೋದಿ

9ದಿನಗಳ ಪ್ರವಾಸದ ಬಗ್ಗೆ ಮೋದಿ

9 ದಿನಗಳ ವಿದೇಶ ಪ್ರವಾಸದ ಬಗ್ಗೆ ಮಾತನಾಡಿದ ಮೋದಿ, ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ತ್ರಿರಾಷ್ಟ್ರ ಪ್ರವಾಸ ಅತ್ಯಂತ ಫಲಪ್ರದವಾಗಿದೆ. ಬಂಡವಾಳ ಹೂಡಿಕೆ ಜೊತೆಗೆ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದೆ ಎಂದರು.

ಮೋದಿಗೆ ಪ್ರತಿವಂದಿಸಿದ ವಿಕೆ ಸಿಂಗ್

ಮೋದಿಗೆ ಪ್ರತಿವಂದಿಸಿದ ವಿಕೆ ಸಿಂಗ್ ಅವರು ನನ್ನ ಕರ್ತವ್ಯ ನಿರ್ವಹಿಸಿದೆ. ನನ್ನ ಜೊತೆ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಈ ಗೌರವ ಸಲ್ಲಬೇಕು ಎಂದಿದ್ದಾರೆ.

ಬಡವರ ಕಲ್ಯಾಣ ಯೋಜನೆ ಕಾರ್ಯಾಗಾರ

ಬಡವರ ಕಲ್ಯಾಣ ಯೋಜನೆ ಕಾರ್ಯಾಗಾರ

ಬಡವರ ಕಲ್ಯಾಣ ಯೋಜನೆಯಲ್ಲಿ ಸಂಸದರ ಪಾತ್ರ ಎಂಬ ವಿಷಯವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮೋದಿ ಅಲ್ಲದೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹಾಗೂ ತಾವರ್‌ಚಂದ್ ಗೆಹ್ಲೋಟ್ ಮಾತನಾಡಿದರು.

English summary
Prime Minister Narendra Modi on Sunday(Apr.19) inaugurated the workshop 'Garib Kalyan Yojnaye: Its Effective Implementation and role of MP' and addressed party lawmakers and workers on pro-poor schemes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X