ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಯೋತ್ಪಾದನೆ ಪ್ರಾಯೋಜಿತ ದೇಶ ಪಾಕಿಸ್ತಾನ' ಮಸೂದೆ ಮಂಡಿಸಿದ ರಾಜೀವ್ ಚಂದ್ರಶೇಖರ್

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಫೆಬ್ರವರಿ 3: "ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರಗಳು ಘೋಷಣೆ ಮಸೂದೆ-2016" ಅನ್ನು ರಾಜ್ಯಸಭಾ ಸದಸ್ಯ ಮತ್ತು ಎನ್ ಡಿಎ ಕೇರಳದ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸಂಸತ್ ನಲ್ಲಿ ಶುಕ್ರವಾರ ಚರ್ಚೆಗೆ ಮಂಡಿಸಿದರು. ಇತ್ತೀಚೆಗಿನ ಉರಿ ಸೇನಾ ಕ್ಯಾಂಪ್ ಮೇಲಿನ ದಾಳಿಯ ಬಗ್ಗೆ ಅವರು ಮೇಲ್ಮನೆಯಲ್ಲಿ ಪ್ರಸ್ತಾಪಿಸಿದರು.

ಸೆಪ್ಟೆಂಬರ್ 18, 2016ರಲ್ಲಿ ಉರಿ ಮೇಲಿನ ಉಗ್ರರ ದಾಳಿಯಲ್ಲಿ ಹತ್ತೊಂಬತ್ತು ಯೋಧರು ಹುತಾತ್ಮರಾದರು. ಮತ್ತೊಂದು ದಾಳಿ ಭಾರತದ ಮೇಲೆ ನಡೆದು ಹಲವು ಭಾರತೀಯರು ಉಸಿರು ಚೆಲ್ಲಿದರು. ಆ ಘಟನೆ ಬದಲಾವಣೆಯ ಘಟ್ಟ. ಕನಿಷ್ಠ ನನ್ನ ಮನಸಿನಲ್ಲಿ ಮತ್ತು ಸಾರ್ವಜನಿಕವಾಗಿ ಪ್ರಮಾಣ ಮಾಡಿದೆ.[ಪಾಕಿಸ್ತಾನ ಸೇರಿದಂತೆ 5 ದೇಶಗಳ ಪ್ರಜೆಗಳಿಗೆ ಕುವೈತ್ ಪ್ರವೇಶವಿಲ್ಲ]

The declaration of countries as sponsor of terrorism bill discussed

ನನ್ನ ಮುಖ್ಯವಾದ ಜವಾಬ್ದಾರಿ ವಹಿಸುತ್ತೇನೆ. ಇಷ್ಟು ವರ್ಷ ಏನು ಮಾಡುತ್ತಾ ಬರುತ್ತಿದೆಯೋ ಮತ್ತು ಆ ದೇಶ ಏನೋ ಅಂದರೆ ಪಾಕಿಸ್ತಾನವನ್ನು ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರ ಎಂದು ಘೋಷಿಸಬೇಕು ಎಂಬುದಾಗಿ ರಾಜೀವ್ ಚಂದ್ರಶೇಖರ್ ಹೇಳಿದರು. ಹಲವು ದಶಕಗಳಿಂದ ಭಾರತವೂ ಸೇರಿದಂತೆ ಈ ಭಾಗದ ಹಲವು ದೇಶಗಳು ಉಗ್ರ ಸಂಘಟನೆಗಳ ದಾಳಿಗಳ ಬಲಿಪಶುಗಳಾಗಿವೆ ಎಂದರು.

ಆ ಉಗ್ರ ಸಂಘಟನೆಗಳ ಮುಖ್ಯ ವ್ಯಕ್ತಿಗಳು, ಬೆಂಬಲಿಗರು ಇರುವುದು ಪಾಕಿಸ್ತಾನದಲ್ಲೇ. ಆ ದೇಶ ಮುಖ್ಯವಾಹಿನಿಗೆ ಕರೆತರಲು ಎಲ್ಲ ಪ್ರಯತ್ನ ಮಾಡಿ ಆಯಿತು. ಮೂಲದಲ್ಲೇ ಅಪರಾಧಿ ಗುಣ ಅಲ್ಲಿದೆ. ಈ ರೀತಿ ಘೋಷಿತ ಅಪರಾಧಿಗಳು ತಮ್ಮ ಅಪರಾಧದ ಫಲಿತವನ್ನು ಉಣ್ಣಬೇಕು ಎಂದು ಹೇಳಿದರು.[ಅಮೆರಿಕದೊಳಗೆ ಭಯೋತ್ಪಾದನೆ, ಭಯೋತ್ಪಾದಕರು ತೂರುತ್ತಿರುವುದು ಎಲ್ಲಿಂದ?]

ಸಂಸತ್ ನಲ್ಲಿ ರಾಜೀವ್ ಚಂದ್ರಶೇಖರ್ ಪ್ರತಿಪಾದಿಸಿದ್ದರ ಸಾರಾಂಶ ಇಷ್ಟು. "ಜಗತ್ತಿನಲ್ಲಿ ಯಾವುದೇ ದೇಶ ಅಥವಾ ಗುಂಪು ಅಮಾಯಕ ಜನರ ಮೇಲೆ ನಡೆಸುವ ವಿಧ್ವಂಸಕ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ನಮ್ಮ ಜನರ ಇಚ್ಛಾಶಕ್ತಿಯನ್ನು ಸಂಸತ್ ನಲ್ಲಿರುವ ನಾವು ಈ ಮಸೂದೆ ಮೂಲಕ ತಿಳಿಸಬೇಕಿದೆ.

"ಭಯೋತ್ಪಾದನೆ ಪ್ರಾಯೋಜಿತ ದೇಶ ಪಾಕಿಸ್ತಾನ ಎಂಬುದನ್ನು ಈ ದೇಶದ ಯಾವುದೇ ಪುರುಷ-ಮಹಿಳೆ ಖಂಡಿತಾ ಒಪ್ಪುತ್ತಾರೆ" ಎಂದು ಹೇಳಿದರು. ದೇಶದ ಹಿತಾಸಕ್ತಿ ಎಂದರೆ ಏನು ಎಂಬುದನ್ನು ಪುನರ್ ವ್ಯಾಖ್ಯಾನಿಸಬೇಕಿದೆ. ಜಗತ್ತಿನ ಉಳಿದೆಲ್ಲ ರಾಷ್ಟ್ರಗಳು ತಮ್ಮ ಮಣ್ಣು ಹಾಗೂ ಜನರ ರಕ್ಷಣೆಗಾಗಿ ಏನು ಮಾಡಬೇಕೋ ಅವನ್ನು ಮಾಡುತ್ತಿವೆ. ನಾವು ಈ ಮಸೂದೆ ಅಂಗೀಕರಿಸುವ ಮೂಲಕ ದೇಶದ ಸಮಸ್ಯೆ ನಿವಾರಣೆಗೆ ಆಂತರಿಕವಾಗಿ-ಬಾಹ್ಯವಾಗಿ ಸಂದೇಶ ರವಾನಿಸೋಣ ಎಂದರು.[ಪಾಕ್ ವಲಸಿಗರಿಗೆ ಯುಎಸ್ ನಿಂದ ನಿಷೇಧ: ಭಾರತ ಸ್ವಾಗತ]

ಭವಿಷ್ಯದಲ್ಲಿ ಭಾರತವನ್ನು ಮತ್ತು ಭಾರತೀಯರನ್ನು ಭಯೋತ್ಪಾದನೆಯಿಂದ ರಕ್ಷಿಸುವ ವಿಚಾರದಲ್ಲಿ ಅರೆಮನಸ್ಸಿನ ಕ್ರಮಗಳು ತೆಗೆದುಕೊಳ್ಳುವ ಮಾತೇ ಇಲ್ಲ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

English summary
The Private Member Bill - “The Declaration of Countries as Sponsor Of Terrorism Bill, 2016” which was introduced by Rajya Sabha MP & Vice Chairman NDA Kerala Sh. Rajeev Chandrasekhar was called for discussion in the Parliament on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X