ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ವರ್ಷದ ಅತ್ಯಾಚಾರ ಸಂತ್ರಸ್ತೆ ಗರ್ಭಪಾತ ಮಾಡಿಸುವಂತಿಲ್ಲ: ಸುಪ್ರೀಂ

|
Google Oneindia Kannada News

ನವದೆಹಲಿ, ಜುಲೈ 28: ಹತ್ತು ವರ್ಷದ ಬಾಲಕಿ ಮೇಲೆ ಸಂಬಂಧಿಯೇ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಆಕೆಯ ಗರ್ಭಪಾತ ಮಾಡಿಸಕೂಡದು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ವಕೀಲರ ಅರ್ಜಿಯನ್ನು ತಿರಸ್ಕರಿಸಿದೆ.

ಲೈಂಗಿಕ ದೌರ್ಜನ್ಯ: 3 ವರ್ಷದ ಮಗುವಿನ ದೇಹದಲ್ಲಿ 7 ಸೂಜಿ ಪತ್ತೆ!ಲೈಂಗಿಕ ದೌರ್ಜನ್ಯ: 3 ವರ್ಷದ ಮಗುವಿನ ದೇಹದಲ್ಲಿ 7 ಸೂಜಿ ಪತ್ತೆ!

ಬಾಲಕಿ ಮೂವತ್ತೆರಡು ವಾರಗಳ ಗರ್ಭಿಣಿ. ಇಂಥ ಸನ್ನಿವೇಶದಲ್ಲಿ ಗರ್ಭಪಾತ ಮಾಡಿಸುವುದು ಆಕೆಗೂ ಮತ್ತು ಗರ್ಭಕ್ಕೂ ಸುರಕ್ಷಿತವಲ್ಲ ಎಂಬ ವೈದ್ಯರ ಹೇಳಿಕೆ ಅನ್ವಯ ಈ ತೀರ್ಮಾನ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Ten-Year-Old Rape Survivor Can't Have Abortion, Says Supreme Court Of India

ಬಾಲಕಿಗೆ ಗರ್ಭಪಾತ ಮಾಡುವುದು ಸುರಕ್ಷಿತವೇ ಎಂಬ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಕೋರ್ಟ್ ಈ ಮುಂಚೆ ಚಂಡೀಗಢದ ಪಿಜಿಐನ ಕೇಳಿತ್ತು. ಬಾಲಕಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲು ಆದೇಶ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ತಾಯಿಯ ಜೀವಕ್ಕೆ ಅಪಾಯ ಇರುವ ಸಂದರ್ಭಗಳಲ್ಲಿ ಹೊರತುಪಡಿಸಿ ಉಳಿದಂತೆ ಇಪ್ಪತ್ತು ವಾರದ ನಂತರ ಗರ್ಭಪಾತಕ್ಕೆ ಅವಕಾಶವಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿ ಇಪ್ಪತ್ತಾರು ವಾರಗಳ ಭ್ರೂಣ ತೆಗೆಸಲು ಅನುಮತಿ ನಿರಾಕರಿಸಿದ್ದರಿಂದ ವಕೀಲರಾದ ಅಲಕ್ ಅಲೋಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ತನಗೆ ಹೊಟ್ಟೆನೋವು ಎಂದು ಬಾಲಕಿ ಹೇಳಿಕೊಂಡಾಗ ಆಸ್ಪತ್ರೆಗೆ ಪೋಷಕರು ಕರೆದೊಯ್ದ ವೇಳೆ ಗರ್ಭಿಣಿ ಎಂಬ ಸಂಗತಿ ಈಚೆಗೆ ಗೊತ್ತಾಗಿತ್ತು. ಏಳು ತಿಂಗಳ ಕಾಲ ಆಕೆಯ ಸಂಬಂಧಿಯೇ ನಿರಂತರವಾಗಿ ಅತ್ಯಾಚಾರ ಎಸಗಿದ್ದ.

ಈ ವರ್ಷದ ಮೇನಲ್ಲಿ ಹರಿಯಾಣದ ಹತ್ತು ವರ್ಷದ ಅತ್ಯಾಚಾರ ಸಂತ್ರಸ್ತೆಯ ಇಪ್ಪತ್ತೊಂದು ವಾರದ ಭ್ರೂಣ ತೆಗೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

English summary
A Ten-year-old raped by her uncle will not be allowed to have an abortion, the Supreme Court ruled Friday, rejecting the petition by a Supreme Court lawyer. The court said it was basing its decision on the assessment of doctors who said that a medical termination was not safe either for the girl or the foetus. She is 32 weeks pregnant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X