ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಟೆಕ್ಕಿ ನಿಗೂಢ ಆತ್ಮಹತ್ಯೆ, ಪತ್ನಿ ಬಚಾವ್

By Mahesh
|
Google Oneindia Kannada News

ನವದೆಹಲಿ, ಜ.5: ಮದುವೆಯಾಗಿ ಎರಡು ತಿಂಗಳಲ್ಲೇ ಸಾಫ್ಟ್ ವೇರ್ ಇಂಜಿನಿಯರ್ ಪತಿಯೊಬ್ಬ ನೇಣಿಗೆ ಶರಣಾದ ಘಟನೆ ಇಲ್ಲಿನ ದ್ವಾರಕದ ಸೆಕ್ಟರ್ 18ನಲ್ಲಿ ನಡೆದಿದೆ.

ದ್ವಾರಕದ ಪ್ಲಾಟಿನಂ ಹೈಟ್ಸ್ ನಿವಾಸಿ ನೋಯ್ಡಾ ಮೂಲದ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾಗಿದ್ದ 32 ವರ್ಷ ವಯಸ್ಸಿನ ಅಮಿತ್ ಬಚ್ಚನ್ ಮೃತ ದುರ್ದೈವಿ. ಆತನ ಪತ್ನಿ ಶಿವಾನಿ ಪಾಟ್ನಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ದೆಹಲಿ ಪೊಲೀಸರು ಭಾನುವಾರ ಮುಂಜಾನೆ ಕಂಟ್ರೋಲ್ ರೂಮಿಗೆ ಬಂದ ಕರೆ ಮೇರೆಗೆ ಅಪಾರ್ಟ್ಮೆಂಟ್ ಗೆ ಬಂದು ನೋಡಿದಾಗ ಕೇಬಲ್ ವೈರ್ ಸುತ್ತಿಕೊಂಡು ಬಂದಿದ್ದ ಅಮಿತ್ ಶವ ಕಾಣಿಸಿದೆ. ಪಕ್ಕದ ಕೋಣೆಯಲ್ಲಿ ತಲೆ ಹಾಗೂ ದೇಹದ ಹಲವೆಡೆ ಗಾಯವಾಗಿ ನರಳುತ್ತಿದ್ದ ಶಿವಾನಿ ಇರುವುದು ಕಂಡು ಬಂದಿದೆ. ಅಮಿತ್ ಅವರ ತಾಯಿ ಚಂದ್ರಕಾಂತಾ ಮತ್ತೊಂದು ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

Suicide Shocker: Delhi techie found dead at home, wife injured

ಆತ್ಮಹತ್ಯೆಯೋ ಕೊಲೆಯೋ: ಪ್ರಾಥಮಿಕ ತನಿಖೆಯಿಂದ ಅಮಿತ್ ಹಾಗೂ ಶಿವಾನಿ ಇಬ್ಬರು ಘಟನೆ ನಡೆಯುವುದಕ್ಕೂ ಮುನ್ನ ಶಾಪಿಂಗ್ ಗೆ ಹೋಗಿದ್ದಾರೆ. ಮನೆಗೆ ಬಂದ ಮೇಲೆ ಜೋರು ಜಗಳವಾಡಿದ್ದಾರೆ. ಪತ್ನಿ ಮೇಲೆ ಟೇಬಲ್ ಹಾಗೂ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಶಿವಾನಿ ಪಕ್ಕದ ಕೋಣೆಗೆ ತೆರಳಿ ಕುಸಿದು ಬಿದ್ದಿದ್ದಾರೆ.

ಪ್ರಜ್ಞೆ ತಪ್ಪಿದ್ದ ಪತ್ನಿಯನ್ನು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಕೊಂಡ ಅಮಿತ್ ತನ್ನ ಕೋಣೆಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮಿತ್ ಭಾರಕ್ಕೆ ಸೀಲಿಂಗ್ ಫ್ಯಾನ್ ಕುಸಿದು ಬಿದ್ದಿದೆ. ಈ ದೃಶ್ಯವನ್ನು ನೋಡಿ ಆಘಾತಕ್ಕೊಳಗಾದ ಅಮಿತ್ ತಾಯಿ ಪ್ರಜ್ಞಾಶೂನ್ಯರಾಗಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣ ಎಂದು ಸ್ಪಷ್ಟವಾಗುತ್ತದೆ. ತನಿಖೆ ಮುಂದುವರೆದಿದೆ ಎಂದು ಹೆಚ್ಚುವರಿ ಡಿಸಿಪಿ ಚಿನ್ಮೋಯ್ ಬಿಸ್ವಾಲ್ ಹೇಳಿದ್ದಾರೆ.

ಸಿಆರ್ ಪಿಸಿ ಸೆಕ್ಷನ್ 174 ಅನ್ವಯ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ದಾಳಿಗೊಳಲಾದ ಶಿವಾನಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಹೊರಗಿನವರು ಯಾರೂ ಮನೆಯೊಳಗೆ ಪ್ರವೇಶಿಸಿಲ್ಲ. ಮನೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅಮಿತ್ ಶವವಿದ್ದ ಕೋಣೆಯಲ್ಲಿ ಸೂಸೈಡ್ ನೋಟ್ ಸಿಕ್ಕಿಲ್ಲವಾದರೂ ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ವಿವರ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಅದರೆ, ಅಮಿತ್ ಕೊಲೆಯಲ್ಲಿ ಶಿವಾನಿ ಪಾತ್ರವಿದೆ. ಈಕೆ ಆತ್ಮಹತ್ಯೆ ಮಾಡಿಕೊಂಡ ರೀತಿ ಕ್ರೈಂ ದೃಶ್ಯ ಸೃಷ್ಟಿಸಿದ್ದಾಳೆ ಎಂದು ಅಮಿತ್ ಮನೆಯವರು ಆರೋಪಿಸಿದ್ದಾರೆ. ಎರಡು ತಿಂಗಳ ಹಿಂದೆ ಮ್ಯಾಟಿಮೋನಿ ವೆಬ್ ತಾಣದ ಮೂಲಕ ಪರಿಚಯವಾಗಿ ಅರೇಂಜ್ಡ್ ಮ್ಯಾರೇಜ್ ಆಗಿದ್ದ ಅಮಿತ್ ಅವರು ಪತ್ನಿ ಮೇಲೆ ಹಲ್ಲೆ ಮಾಡಲು ಆಕೆ ಸೆಕ್ಸ್ ಗೆ ನಿರಾಕರಿಸಿದ್ದೇ ಕಾರಣ ಎನ್ನಲಾಗಿದೆ. ಆದರೆ,ಎಲ್ಲಾ ಆರೋಪವನ್ನು ಶಿವಾನಿ ಮೇಲೆ ಅಮಿತ್ ಮನೆಯವರು ಹೊರೆಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.(ಒನ್ ಇಂಡಿಯಾ ಸುದ್ದಿ)

English summary
Delhi Police rushed to a high-end apartment in Dwarka after receiving an emergency call in the wee hours of Sunday (Jan 4, 2015) morning. The cops found a man lying with a cable wire wrapped around his throat inside his flat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X