ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯವಿವಾಹದಲ್ಲಿ ದಕ್ಷಿಣ ಭಾರತ ನಂ.1, ಕರ್ನಾಟಕ ದ್ವಿತೀಯ

By Vanitha
|
Google Oneindia Kannada News

ನವದೆಹಲಿ, ಆಗಸ್ಟ್, 20 : ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (NCRB) ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಒಂದು ಸಮೀಕ್ಷೆ ಕೈಗೊಂಡಿದ್ದು, ಇದರಿಂದ ದೊರೆತ ಮಾಹಿತಿ ಪ್ರಕಾರ ದಕ್ಷಿಣ ಭಾರತಕ್ಕೆ ಪ್ರಥಮ ಸ್ಥಾನ. ರಾಜ್ಯಗಳಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ.

ಇತಿಹಾಸದಿಂದಲೂ ಬಾಲ್ಯ ವಿವಾಹ ನಿಷೇಧ ಕುರಿತಾಗಿ ಹಲವಾರು ಮಹನೀಯರು ದನಿ ಎತ್ತುತ್ತಲೇ ಬರುತ್ತಿದ್ದಾರೆ. ಆದರೂ ಬಾಲ್ಯ ವಿವಾಹ ಪ್ರಕರಣದಲ್ಲಿ ಪ್ರಥಮ ಸ್ಥಾನ ಪಡೆದ ದಕ್ಷಿಣ ಭಾರತ, ಅದರಲ್ಲಿ 2ನೇ ಸ್ಥಾನ ಪಡೆದ ಕರ್ನಾಟಕ ಬಾಲ್ಯ ವಿವಾಹ ನಿಷೇಧದ ಕೂಗಿಗೆ ಎಚ್ಚರಗೊಂಡಂತೆ ಭಾಸವಾಗುತ್ತಿಲ್ಲ.[ರಾಯಚೂರು: ಬಾಲ್ಯ ವಿವಾಹ ತಡೆಗೆ ಹೊಸ ಕಾನೂನು]

2014 ರ ವರದಿಯಲ್ಲಿ ಕೆಲವು ಲೋಪದೋಷ ಕಂಡ ಎನ್‌ಸಿಆರ್ ಬಿ ತಂಡವು, ಈ ವರ್ಷ ಪುನಃ ಸಮೀಕ್ಷೆ ಕೈಗೊಂಡಿತು. ಇದರಿಂದ ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ ರಾಜ್ಯಗಳು ಮುಂಚೂಣಿಯಲ್ಲಿದ್ದು, ಬಳಿಕ ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಂತರದ ಸ್ಥಾನ ಗಳಿಸಿಕೊಂಡಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯವು ಕಲೆಹಾಕಿದ ದತ್ತಾಂಶವನ್ನು ಒಪ್ಪಿಕೊಂಡಿದ್ದು, ಇದರ ಪ್ರಕಾರ 20 ರಿಂದ 24 ವರ್ಷ ವಯಸ್ಸಿನ 43% ರಷ್ಟು ಮಹಿಳೆಯರು 18 ವರ್ಷದೊಳಗೆ ವಿವಾಹವಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಈ ವರ್ಷ 47 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನು 47 ಮಕ್ಕಳು ಬಾಲ್ಯವಿವಾಹದ ಕೂಪಕ್ಕೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ 44 ಪ್ರಕರಣಗಳು ದಾಖಲಾಗಿದ್ದು, 45 ಹೆಣ್ಣು ಮಕ್ಕಳು ವಿವಾಹ ಬಂಧನಕ್ಕೆ ಸಿಲುಕಿ ನರಳುತ್ತಿದ್ದಾರೆ.[ಬಾಲ್ಯವಿವಾಹದ ವಿರುದ್ಧ ಸಿಡಿದೆದ್ದ ಸಿಡಿಲ ಮರಿ]

ಶೈಕ್ಷಣಿಕ ಮಟ್ಟ ಹೆಚ್ಚಿರುವ ಕರ್ನಾಟಕ( 75.60), ತಮಿಳುನಾಡು(80.33) ರಾಜ್ಯಗಳಲ್ಲಿಯೇ ಈ ಘಟನೆ ಸಂಭವಿಸಿದ್ದು, ಕೇರಳ 19, ಆಂಧ್ರಪ್ರದೇಶ 16 ಮತ್ತು ತೆಲಂಗಾಣ 13 ಹೆಣ್ಣು ಮಕ್ಕಳು ಬಾಲ್ಯವಿವಾಹ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ.

ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ 37, ಗುಜರಾತ್‌ 21, ಹರಿಯಾಣ 15, ಮಧ್ಯ ಪ್ರದೇಶ 14, ದೆಹಲಿ 2 ಬಾಲ್ಯ ವಿವಾಹಗಳು ನಡೆದಿದ್ದು, ಜಮ್ಮು ಕಾಶ್ಮೀರ, ಗೋವಾ, ಉತ್ತರ ಖಂಡ ರಾಜ್ಯಗಳಲ್ಲಿ ಬಾಲ್ಯವಿವಾಹ ಆಗಿರುವುದರ ಕುರಿತಾಗಿ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎನ್‌ಸಿಆರ್ ಬಿ ತಿಳಿಸಿದೆ.

ಭಾರತಾದ್ಯಂತ ಸುಮಾರು 280 ಬಾಲ್ಯವಿವಾಹಗಳು ನಡೆದಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತಾಗಿ ಯಾರೊಬ್ಬರೂ ನಿಗಾ ವಹಿಸದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

English summary
National Crime Records Bureau(NCRB)released child marriage report on Wednesday. According to this report South India have taken 1st place, Karnataka 2nd place in the states of South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X