ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಟಿವಿಗೆ ಗುಡ್ ಬೈ ಹೇಳಿದ ಬರ್ಖಾ ದತ್!

ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರು ನ್ಯೂ ಡೆಲ್ಲಿ ಟೆಲಿವಿಷನ್(ಎನ್ ಡಿಟಿವಿ)ಲಿಮಿಟೆಡ್ ಮಾಧ್ಯಮ ಸಂಸ್ಥೆಯನ್ನು ತೊರೆದಿದ್ದಾರೆ. ಕಾರ್ಗಿಲ್ ಯುದ್ಧದ ಬಗ್ಗೆ ವರದಿ ಮಾಡಿದ್ದ ಬರ್ಖಾ ಅವರು ಜನಪ್ರಿಯ ಪತ್ರಕರ್ತೆಯಾಗಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಜನವರಿ 15: ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರು ನ್ಯೂ ಡೆಲ್ಲಿ ಟೆಲಿವಿಷನ್(ಎನ್ ಡಿಟಿವಿ)ಲಿಮಿಟೆಡ್ ಮಾಧ್ಯಮ ಸಂಸ್ಥೆಯನ್ನು ತೊರೆದಿದ್ದಾರೆ. ಕಾರ್ಗಿಲ್ ಯುದ್ಧದ ಬಗ್ಗೆ ವರದಿ ಮಾಡಿದ್ದ ಬರ್ಖಾ ಅವರು ಜನಪ್ರಿಯ ಪತ್ರಕರ್ತೆಯಾಗಿದ್ದಾರೆ.

ಬರ್ಖಾ ದತ್ ಅವರು ಕನ್ಸಲ್ಟಿಂಗ್ ಎಡಿಟರ್ ಹುದ್ದೆಯಿಂದ ಕೆಳಗಿಳಿದು, ನಮ್ಮ ಸಂಸ್ಥೆಯನ್ನು ತೊರೆದಿದ್ದಾರೆ. 1995ರಲ್ಲಿ ಕಾಲೇಜಿನಿಂದ ನೇರವಾಗಿ ಸಂಸ್ಥೆ ಸೇರಿದ್ದ ಬರ್ಖಾ ಅವರ ಮುಂದಿನ ಹಾದಿಗೆ ಶುಭ ಕೋರುತ್ತೇವೆ ಎಂದು ಎನ್ ಡಿಟಿವಿ ಪ್ರಕಟಿಸಿದೆ[ಪೂರ್ತಿ ಇಲ್ಲಿ ಓದಿ]

Senior journalist Barkha Dutt quits NDTV,may start own venture

1999ರ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಕಾಣಿಸಿಕೊಂಡು 'ವಾರ್ ಜರ್ನಲಿಸಂ' ಪರಿಚಯವನ್ನು ದೇಶಕ್ಕೆ ನೀಡಿದ ಡೇರ್ ಡೆವಿಲ್ ಪತ್ರಕತರ್ತೆ ಬರ್ಖಾ ಅವರು ಎನ್ ಡಿಟಿವಿ ತೊರೆದಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಟೈಮ್ ನೌ ಪ್ರಧಾನ ಸಂಪಾದಕ ಹುದ್ದೆ ತೊರೆದು 'ರಿಪಬ್ಲಿಕ್' ಚಾನೆಲ್ ಆರಂಭಿಸುತ್ತಿರುವ ಅರ್ನಬ್ ಗೋಸ್ವಾಮಿ ಅವರಂತೆ ಬರ್ಖಾ ಕೂಡಾ ಹೊಸ ಸುದ್ದಿ ವಾಹಿನಿ ಆರಂಭಿಸುವ ಸಾಧ್ಯತೆ ಕಂಡು ಬಂದಿದೆ.

ಪದ್ಮಶ್ರೀ ಪುರಸ್ಕೃತ ಬರ್ಖಾ ಅವರು 2ಜಿ ಹಗರಣಕ್ಕೆ ಸಂಬಂಧಿಸಿದ ಆರೋಪಿ, ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಅವರ ಸಂಪರ್ಕ ಹೊಂದಿದ್ದ ಕಾರಣಕ್ಕೆ ವಿವಾದಕ್ಕೆ ಕಾರಣರಾಗಿದ್ದರು.

ಎರಡನೇ ಬಾರಿ: 2015ರಲ್ಲಿ ಎನ್ ಡಿಟಿವಿ ತೊರೆದಿದ್ದ ಬರ್ಖಾ ತಮ್ಮ ಎರಡು ಶೋಗಳನ್ನು ಮುಂದುವರೆಸಿದ್ದರು.[2015: ಎನ್ಡಿಟಿವಿ ತೊರೆದ ಜನಪ್ರಿಯ ಪತ್ರಕರ್ತೆ ಬರ್ಖಾ], ಈಗ ಅಧಿಕೃತವಾಗಿ ಎಲ್ಲಾ ಜವಾಬ್ದಾರಿಗಳನ್ನು ಕಳಚಿಕೊಂಡಿದ್ದಾರೆ.

ಎನ್ ಡಿಟಿವಿ ಸೇರಿದಾಗ ಬರ್ಖಾದತ್ ಅವರಿಗಿನ್ನೂ 23 ವರ್ಷ, ವರದಿಗಾರ್ತಿಯಾಗಿ ಸೇರಿದ ಬರ್ಖಾ ಅವರು ಮಾಧ್ಯಮ ಕ್ಷೇತ್ರದಲ್ಲಿ ಬೆಳೆದ ರೀತಿ ಅನುಕರಣೀಯ. ಅವರ ಕಾರ್ಯಕ್ಷಮತೆ ಬಗ್ಗೆ ನಮಗೆ ಅಭಿಮಾನವಿದೆ ಎಂದು ಎನ್ ಡಿಟಿವಿ ಮುಖ್ಯಸ್ಥ ಪ್ರಣಯ್ ರಾಯ್ ತಮ್ಮ ಪತ್ರದಲ್ಲಿ ಹೇಳಿದ್ದರು.

English summary
Senior journalist Barkha Dutt has resigned as Consulting Editor of NDTV. According to reports, she is likely to start her own venture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X