ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾಗೆ ಜಾಮೀನು ಸಿಕ್ಕಿದ್ದೇಕೆ? ಆದೇಶ ಪ್ರತಿ ಓದಿ

By Mahesh
|
Google Oneindia Kannada News

ನವದೆಹಲಿ, ಅ.17: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಕ್ಕೆ ಅನುಭವಿಸಿದ ಜೈಲು ಶಿಕ್ಷೆ ಸದ್ಯಕ್ಕೆ ಕೊನೆಗೊಳ್ಳಲಿದ್ದು, ಪರಪ್ಪನ ಅಗ್ರಹಾರರಿಂದ ಹೊರ ಬೀಳುವ ಕ್ಷಣ ಎದುರಾಗಿದೆ.. ಶುಕ್ರವಾರ ಸುಪ್ರೀಂ ಕೋರ್ಟ್ ನ್ಯಾಯಪೀಠ ಜಯಲಲಿತಾ ಹಾಗೂ ಮೂವರಿಗೆ ಜಾಮೀನು ನೀಡಿದೆ. ಬೆಂಗಳೂರಿನ ವಿಶೇಷ ನ್ಯಾಯಾಲಯ ನೀಡಿದ 4 ವರ್ಷಗಳ ಜೈಲುಶಿಕ್ಷೆ ಆದೇಶವನ್ನೂ ಸುಪ್ರೀಂಕೋರ್ಟ್ ಅಮಾನತಿನಲ್ಲಿಟ್ಟಿದೆ.

ಜಯಲಲಿತಾ ಅವರ ಪರ ಫಾಲಿ ನಾರಿಮನ್ ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾ. ದತ್ತು, ಮದನ್ ಬಿ ಲಾಕೂರ್ ಹಾಗೂ ನ್ಯಾ ಎ.ಕೆ ಶಿಕ್ರಿಹಾದ್ ಅವರಿದ್ದ ನ್ಯಾಯಪೀಠ 21 ದಿನಗಳ ಜೈಲು ವಾಸದ ನಂತರ ಬಿಡುಗಡೆ ಭಾಗ್ಯ ನೀಡಿದ್ದಾರೆ. ಜಯಾ ಅವರ ಬಿಡುಗಡೆಗೆ ಅನಾರೋಗ್ಯ ಮುಖ್ಯ ಕಾರಣ ಎನ್ನಲಾಗಿದೆ. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ನನ್ನ ಕಕ್ಷಿದಾರರಾದ ಜಯಾ ಅವರು ಗೃಹ ಬಂಧನದಲ್ಲಿರಲು ಸಿದ್ದರಿದ್ದಾರೆ ಎಂದು ಜಯಾ ಪರ ಫಾಲಿ ನಾರಿಮನ್ ವಾದಿಸುತ್ತಿದ್ದಂತೆ ನ್ಯಾ. ದತ್ತು ಅವರು ಇದೇನು ಈ ರೀತಿ ವಾದ ಮಂಡಿಸುತ್ತಿದ್ದೀರಾ? ಎಂದು ಗರಂ ಆಗಿದ್ದಾರೆ. ಸುಬ್ರಮಣ್ಯಂ ಸ್ವಾಮಿ ಅವರು ನ್ಯಾ. ಮೈಕಲ್ ಕುನ್ಹಾ ಅವರ ಹೆಸರು ಪ್ರಸ್ತಾಪಿಸಿ ಅವರು ಸೆ.27ರಂದು ಜಯಾ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದಕ್ಕೆ ಎಐಎಡಿಎಂಕೆ ಕಾರ್ಯಕರ್ತರು ಕೋಪಗೊಂಡು ಕನ್ನಡಿಗರು, ಹೈಕೋರ್ಟ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ವಾದಿಸಿದ್ದಾರೆ. ಈ ಸಮಯದಲ್ಲಿ ನಾನು ಕೂಡಾ ಕನ್ನಡಿಗನೇ ಎಂದು ದತ್ತು ಎಚ್ಚರಿಸಿದ್ದಾರೆ. [ಜಯಲಲಿತಾಗೆ ಜಾಮೀನು ಮಂಜೂರು]

ಮುಖ್ಯ ನ್ಯಾಯಮೂರ್ತಿ ದತ್ತು ಅವರಿದ್ದ ಪೀಠ

ಮುಖ್ಯ ನ್ಯಾಯಮೂರ್ತಿ ದತ್ತು ಅವರಿದ್ದ ಪೀಠ

ಜಯಲಲಿತಾ ಅವರ ಪರ ಫಾಲಿ ನಾರಿಮನ್ ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾ. ದತ್ತು, ಮದನ್ ಬಿ ಲಾಕೂರ್ ಹಾಗೂ ನ್ಯಾ ಎ.ಕೆ ಶಿಕ್ರಿಹಾದ್ ಅವರಿದ್ದ ನ್ಯಾಯಪೀಠ 21 ದಿನಗಳ ಜೈಲು ವಾಸದ ನಂತರ ಬಿಡುಗಡೆ ಭಾಗ್ಯ ನೀಡಿದ್ದಾರೆ. ಜಯಾ ಅವರ ಬಿಡುಗಡೆಗೆ ಅನಾರೋಗ್ಯ ಮುಖ್ಯ ಕಾರಣ ಎನ್ನಲಾಗಿದೆ. ಜೊತೆಗೆ ಸಾಕಷ್ಟು ಷರತ್ತುಗಳನ್ನು ವಿಧಿಸಲಾಗಿದ್ದು, ಷರತ್ತು ಮೀರಿದರೆ ಜಾಮೀನು ರದ್ದಾಗಲಿದೆ

ಗೃಹಬಂಧನದಲ್ಲಿರಲು ರೆಡಿ ಎಂದ ನಾರಿಮನ್

ಗೃಹಬಂಧನದಲ್ಲಿರಲು ರೆಡಿ ಎಂದ ನಾರಿಮನ್

ನನ್ನ ಕಕ್ಷಿದಾರರಾದ ಜಯಾ ಅವರು ಗೃಹ ಬಂಧನದಲ್ಲಿರಲು ಸಿದ್ದರಿದ್ದಾರೆ ಎಂದು ಜಯಾ ಪರ ಫಾಲಿ ನಾರಿಮನ್ ವಾದಿಸುತ್ತಿದ್ದಂತೆ ನ್ಯಾ. ದತ್ತು ಅವರು ಇದೇನು ಈ ರೀತಿ ವಾದ ಮಂಡಿಸುತ್ತಿದ್ದೀರಾ? ಎಂದು ಗರಂ ಆಗಿದ್ದಾರೆ.

ಸ್ವಾಮಿ ದೂರುದಾರರಾಗಲು ಒಪ್ಪಿಗೆ

ಸ್ವಾಮಿ ದೂರುದಾರರಾಗಲು ಒಪ್ಪಿಗೆ

ಸುಬ್ರಮಣ್ಯಂ ಸ್ವಾಮಿ ಅವರನ್ನು ದೂರುದಾರರಾಗಲು ಸುಪ್ರೀಂಕೋರ್ಟ್ ನ್ಯಾಯಪೀಠ ಒಪ್ಪಿಗೆ ಸೂಚಿಸಿತು. ನಂತರ ಸ್ವಾಮಿ ಅವರು ವಾದ ಮಂಡಿಸಿ ನ್ಯಾ. ಮೈಕಲ್ ಕುನ್ಹಾ ಅವರ ಹೆಸರು ಪ್ರಸ್ತಾಪಿಸಿ ಅವರು ಸೆ.27ರಂದು ಜಯಾ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದಕ್ಕೆ ಎಐಎಡಿಎಂಕೆ ಕಾರ್ಯಕರ್ತರು ಕೋಪಗೊಂಡು ಕನ್ನಡಿಗರು, ಹೈಕೋರ್ಟ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ವಾದಿಸಿದ್ದಾರೆ. ಈ ಸಮಯದಲ್ಲಿ ನಾನು ಕೂಡಾ ಕನ್ನಡಿಗನೇ ಎಂದು ದತ್ತು ಎಚ್ಚರಿಸಿದರು. [ಜಯಲಲಿತಾಗೆ ಜಾಮೀನು ಮಂಜೂರು]

ಯಾವಾಗ ಜೈಲಿನಿಂದ ಹೊರಕ್ಕೆಬರಬಹುದು?

ಯಾವಾಗ ಜೈಲಿನಿಂದ ಹೊರಕ್ಕೆಬರಬಹುದು?

ಆಲ್ ಇಂಡಿಯಾ ಅಣ್ಣಾ ಡಿಎಂಕೆ ಪಕ್ಷ ತನ್ನ 43ನೇ ಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಆಚರಿಸಿಕೊಳ್ಳುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನ ಸಾರಾಂಶವುಳ್ಳ ಆದೇಶ ಪ್ರತಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ನ್ಯಾ. ಮೈಕಲ್ ಕುನ್ಹಾ ಕೈ ಸೇರಬೇಕು. ಅವರು ಒಪ್ಪಿಗೆ ಸೂಚಿಸಿದ ಮೇಲೆ ಪ್ರತಿಯನ್ನು ಜಯಾ ಪರ ವಕೀಲರು ಜೈಲರ್ ಜಯಸಿಂಹ ಕೈಗೆ ನೀಡುತ್ತಾರೆ ನಂತರ ಜಯಲಲಿತಾ, ಇಳವರಸಿ, ಶಶಿಕಲಾ, ಸುಧಾಕರನ್ ಅವರ ಬಿಡುಗಡೆಯಾಗಲಿದೆ. ಬಹುಶಃ ನಾಳೆ ಮಧ್ಯಾಹ್ನದವರೆಗೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಸದ್ಯಕ್ಕೆ ಆದೇಶದ ಪ್ರತಿ ಓದಿಕೊಳ್ಳಿ

English summary
The Supreme Court today granted bail to former Tami Nadu chief minister Jayalalithaa and three others. This will be the AIADMK chief's last chance to get bail before Diwali.Read the copy of the full judgment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X