ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಎಲ್ಲಿದ್ದರೂ ಮೇ.8ರಂದು ಪ್ರತ್ಯಕ್ಷವಾಗ್ಲೇ ಬೇಕ್!

By Mahesh
|
Google Oneindia Kannada News

ನವದೆಹಲಿ, ಮಾ.8: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಿಸಲು ಸಿದ್ದತೆ ನಡೆದಿರುವ ಸುದ್ದಿ ಬಂದ ಬೆನ್ನಲ್ಲೇ ಮೇ.8ರಂದು ರಾಹುಲ್ ಗಾಂಧಿ ಅವರು ಎಲ್ಲಿದ್ದರೂ ಪ್ರತ್ಯಕ್ಷವಾಗಲೇ ಬೇಕಾದ ಪರಿಸ್ಥಿತಿ ಬಂದಿದೆ.

'ಮಹಾತ್ಮಾ ಗಾಂಧಿ ಅವರ ಹತ್ಯೆಗೆ ಆರೆಸ್ಸೆಸ್ ಕಾರಣ' ಎಂದು ರಾಹುಲ್ ಗಾಂಧಿ ಎಂದೋ ನೀಡಿದ ಹೇಳಿಕೆ ಇಂದು ಅವರಿಗೆ ಮುಳುವಾಗುತ್ತಿದೆ. ಮೇಲ್ಕಂಡ ದಿನಾಂಕದಂದು ವಿಚಾರಣೆಗೆ ಹಾಜರಾಗುವಂತೆ ಭಿವಂಡಿ ಕೋರ್ಟಿಗೆ ಸಮನ್ಸ್ ಜಾರಿಗೊಳಿಸಿದೆ. [ಕಾಣೆಯಾಗಿದ್ದಾರೆ: ರಾಹುಲ್ ಗಾಂಧಿ, ಅಮೇಥಿ ಸಂಸದ]

ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಠಾಣೆ ಜಿಲ್ಲೆಯ ಭಿವಂಡಿಯಲ್ಲಿ ಮಾರ್ಚ್‌ 6ರಂದು ನಡೆದಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಕಾಂಗ್ರೆಸ್ ಯುವರಾಜ, ಮಾತಿನ ಭರದಲ್ಲಿ ಮಹಾತ್ಮಾ ಗಾಂಧೀಜಿ ಅವರ ಹತ್ಯೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯೇ ಹೊಣೆ ಎಂದಿದ್ದರು.

RSS killed Gandhi remark, Rahul Gandhi to appear before court

ಗಾಂಧೀಜಿಯವರನ್ನು ಹತ್ಯೆ ಮಾಡಿದ ಸಂಘಟನೆ ಈಗ ಅವರ ಬಗ್ಗೆ ಮಾತನಾಡುತ್ತಿದೆ. ಅಂದು ಸರ್ದಾರ್ ಪಟೇಲ್ ಹಾಗೂ ಗಾಂಧೀಜಿ ಅವರನ್ನು ಆರೆಸ್ಸೆಸ್ ವಿರೋಧಿಸಿತ್ತು ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದರು. [ರಾಹುಲ್ ಗಾಂಧಿ ಉತ್ತರಾಖಂಡ್ 'ಟೆಂಟ್' ನಲ್ಲಿ ಪತ್ತೆ!]

ರಾಹುಲ್ ಗಾಂಧಿ ಭಾಷಣದ ವಿರುದ್ಧ ಭಿವಂಡಿಯ ಆರೆಸ್ಸೆಸ್ ಮುಖಂಡ ರಾಜೇಶ್ ಕುಂಟೆ ಎಂಬುವರು ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ತಮ್ಮ ವಿರುದ್ಧ ಹೂಡಿದ ದಾವೆಯನ್ನು ರದ್ದು ಪಡಿಸುವಂತೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬಯಿ ಹೈಕೋರ್ಟ್‌ ವಜಾ ಮಾಡಿತ್ತು.ಇದಾದ ಬಳಿಕ ಈಗ ರಾಹುಲ್ ಗಾಂಧಿಗೆ ಸಮನ್ಸ್ ಜಾರಿಯಾಗಿದೆ.

ಈ ನಡುವೆ ಏ.18ರಂದು ನಡೆಯುವ ಬೃಹತ್ ರೈತ ಸಮಾವೇಶದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಅಮೇಥಿಗೆ ಯಾವಾಗ ಭೇಟಿ ಕೊಡುತ್ತಾರೋ ಗೊತ್ತಿಲ್ಲ.

ಇತ್ತೀಚೆಗೆ ಸಂಸದ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಗಳು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಿದ್ದೆಗೆಡಿಸಿತ್ತು. ಸೋನಿಯಾ ಅವರು ಕೂಡಲೇ ಅಮೇಥಿಗೆ ತೆರಳಿ ಕ್ಷೇತ್ರದ ಜನತೆ ಸಮಾಧಾನ ಪಡಿಸಿದ್ದರು. ಈಗ ಏ.18ರಂದು ರೈತ ಸಮಾವೇಶದ ಮರುದಿನ ಸಂಸತ್ತಿನ ಕಲಾಪದಲ್ಲೂ ಪಾಲ್ಗೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

English summary
A Bhiwandi court in Maharashtra summoned Congress vice president Rahul Gandhi to appear before it on May 8 for his remarks against the Rashtriya Swayamsevak Sangh (RSS) and blaming the outfit for assassination of Mahatma Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X