ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ನೂತನ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ

By Vanitha
|
Google Oneindia Kannada News

ನವದೆಹಲಿ, ಆಗಸ್ಟ್, 31 : ಕೇಂದ್ರದ ನೂತನ ಗೃಹ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಮೆಹ್ರಿಶಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ.

ವೈಯಕ್ತಿಕ ಕಾರಣದಿಂದ ಸ್ವಯಂ ನಿವೃತ್ತಿ ಪಡೆದ ಎಲ್.ಸಿ ಗೋಯಲ್ ಅವರ ಸ್ಥಾನಕ್ಕೆ ರಾಜೀವ್ ಮೆಹ್ರಿಶಿ ಅವರನ್ನು ಮೂರನೇ ಗೃಹ ಕಾರ್ಯದರ್ಶಿಯಾಗಿ ಸರ್ಕಾರ ನೇಮಕ ಮಾಡಿದೆ. ಗೋಯಲ್ ಅವರನ್ನು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ನೇಮಕ ಮಾಡಿತ್ತು.[ಬೆಂಗಳೂರಿಗೆ ಜೋಳಿಗೆ ಹಿಡಿದು ಬರಲಿರುವ ರಾಜಸ್ಥಾನ ಸಚಿವ]

Rajiv Mehrishi appointed new Home Secretary

ರಾಜೀವ್ ಮೆಹ್ರಿಶಿ ಕಿರು ಪರಿಚಯ:

1955 ರಲ್ಲಿ ಜನಿಸಿದ ರಾಜೀವ್ ಮೆಹ್ರಿಶಿ ಅವರು 1978 ರ ರಾಜಸ್ಥಾನ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದರು. ಬಳಿಕ ಇವರು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಗೃಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮೆಹ್ರಿಶಿ ಅವರು ಎರಡು ವರ್ಷಗಳ ಕಾಲ ಅಧಿಕಾರ ನಿರ್ವಹಿಸಲಿದ್ದಾರೆ. ಈ ಹಿಂದೆ ರಾಜಸ್ಥಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಇವರು ರಾಜಸ್ಥಾನ ಕಾರ್ಮಿಕ ಸುಧಾರಣಾ ನೀತಿ ಪರವಾಗಿ ಹೋರಾಟ ನಡೆಸಿ ಜನರ ಜೀವನ ಸುಧಾರಣೆಗಾಗಿ ಶ್ರಮಿಸಿದ್ದಾರೆ.

ದೆಹಲಿಯ ಸೈಂಟ್ ಸ್ಟೀಫನ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಇವರು ಇಂಗ್ಲೆಂಡ್‌ನಲ್ಲಿ ಮ್ಯಾನೇಜ್ ಮೆಂಟ್ ಪದವಿ ಗಳಿಸಿದ್ದಾರೆ.

English summary
Senior IAS officer Rajiv Mehrishi was on Monday appointed as Union Home Secretary in place of incumbent L C Goyal, who sought voluntary retirement after taking over the charge seven months ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X