ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಮೊಕದ್ದಮೆ ಸಾಬೀತಾದರೆ ರಾಹುಲ್ ಗಾಂಧಿಗೆ 2 ವರ್ಷ ಜೈಲು

ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆ ಸಾಬೀತಾದರೆ ಎರಡು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಜೈಲು ಶಿಕ್ಷೆ-ದಂಡ ಎರಡು ಆಗಬಹುದು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಏಪ್ರಿಲ್ 22: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು, ದಂಡ ಅಥವಾ ಎರಡೂ ಆಗಬಹುದಾ? ಇದೇನ್ರಿ ಅವರಿಗ್ಯಾಕೆ ಶಿಕ್ಷೆ ಅಂತೀರಾ? ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಹಾಕಿದ ಮಾನನಷ್ಟ ಮೊಕದ್ದಮೆಯಲ್ಲಿ ಆರೋಪ ಸಾಬೀತಾದರೆ ಶಿಕ್ಷೆಯ ಪ್ರಮಾಣ ಹೀಗಿರುತ್ತದೆ.

ಜಲೈ 28ರಂದು ರಾಹುಲ್ ಗಾಂಧಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಅವರ ವಿರುದ್ಧ ವಿಚಾರಣೆ ಆರಂಭವಾಗಬೇಕಿದೆ. 2014ರಲ್ಲಿ ರಾಹುಲ್ ಗಾಂಧಿ, ಆರ್ಎಸ್ಎಸ್ ನವರು ಮಹಾತ್ಮ ಗಾಂಧಿಯನ್ನು ಕೊಂದವರು ಎಂದಿದ್ದರು. ಆ ನಂತರ ರಾಹುಲ್ ವಿರುದ್ಧ ದೂರು ದಾಖಲಾಯಿತು. ಇನ್ನೇನು ಬಂಧನವಾಗುತ್ತದೆ ಎನ್ನುವಾಗ ಜಾಮೀನು ಪಡೆದುಕೊಂಡಿದ್ದರು.[ಗಾಂಧಿ ಹತ್ಯೆಯನ್ನು ಸಂಭ್ರಮಿಸಿದವರಿಂದ ದೇಶಭಕ್ತಿ ಕಲಿಯಬೇಕಿಲ್ಲ: ಕೇರಳ ಸಿಎಂ]

Rahul Gandhi staring at 2 years in jail if convicted in RSS defamation suit

ಶುಕ್ರವಾರ ಈ ವಿಚಾರದ ಅಹವಾಲು ಕೇಳಿದಾಗ ರಾಹುಲ್ ಗಾಂಧಿಗೆ ಕೋರ್ಟ್ ಗೆ ಹಾಜರಾಗಲಿಲ್ಲ. ಬೇರೆ ಕೆಲಸಗಳಲ್ಲಿ ತೊಡಗಿರುವ ರಾಹುಲ್ ಅವರಿಗೆ ವೈಯಕ್ತಿಕವಾಗಿ ಕೋರ್ಟ್ ಗೆ ಹಾಜರಾಗಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ವಿನಾಯಿತಿ ನೀಡಬೇಕು ಎಂದು ವಕೀಲರು ಕೇಳಿಕೊಂಡರು.

Rahul Gandhi staring at 2 years in jail if convicted in RSS defamation suit

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಅಂದರೆ ಮಾರ್ಚ್ 6, 2014ರಲ್ಲಿ ಭಿವಂಡಿಯಲ್ಲಿ ಚುನಾವಣೆ ಪ್ರಚಾರ ಮಾಡುವ ವೇಳೆ ರಾಹುಲ್ ಗಾಂಧಿ ಈ ಮಾತನಾಡಿದ್ದರು. ಆ ನಂತರ ಆರ್ಎಸ್ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.[ಆರ್.ಎಸ್.ಎಸ್ ವಿರುದ್ಧ ಹೇಳಿಕೆ, ಕೋರ್ಟಿಗೆ ಹಾಜರಾಗಲಿದ್ದಾರೆ ರಾಹುಲ್]

Rahul Gandhi staring at 2 years in jail if convicted in RSS defamation suit

ಐಪಿಸಿ ಸೆಕ್ಷನ್ 499, 500ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಸೆಕ್ಷನ್ 499 ಮಾನನಷ್ಟ, ಸೆಕ್ಷನ್ 500ರಲ್ಲಿ ಶಿಕ್ಷೆಯ ಪ್ರಮಾಣದ ಪ್ರಸ್ತಾವವಿದೆ. ಆ ಪ್ರಕಾರ ಆರೋಪ ಸಾಬೀತಾದರೆ ಎರಡು ವರ್ಷದವರೆಗೆ ಸಾದಾ ಜೈಲು ಶಿಕ್ಷೆ ಅಥವಾ ದಂಡ ಅಥವಾ ಜೈಲು-ದಂಡ ಎರಡೂ ಆಗಬಹುದು.

Rahul Gandhi staring at 2 years in jail if convicted in RSS defamation suit

ಆ ನಂತರ ಕೂಡ ರಾಹುಲ್ ಗಾಂಧಿ, ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ಬಂದ ಐವತ್ತೆರಡು ವರ್ಷಗಳವರೆಗೆ ತ್ರಿವರ್ಣ ಧ್ವಜ ಹಾರಿಸುತ್ತಿರಲಿಲ್ಲ ಎಂಬ ಹೇಳಿಕೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Rahul Gandhi is staring at a 2 year jail term, a fine or both if he is convicted in the defamation case filed against him. A magisterial court decided to frame charges against the Congress vice-president in the defamation case filed by an RSS worker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X