ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ ಐಟಿ ದಾಳಿ ಬಗ್ಗೆ ತುಟಿ ಬಿಚ್ಚದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಆಗಸ್ಟ್ 3: ಕರ್ನಾಟಕದ ಕಾಂಗ್ರೆಸ್ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ-ಕಚೇರಿಗಳು ಸೇರಿದಂತೆ ವಿವಿಧೆಡೆ ನಡೆದ ಆದಾಯ ತೆರಿಗೆ ದಾಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ನಿರಾಕರಿಸಿದರು.

'ಪವರ್' ಮಿನಿಸ್ಟರ್ ಮೇಲೆ ಐಟಿ ದಾಳಿ : ಯಾರು, ಏನು ಹೇಳಿದರು?'ಪವರ್' ಮಿನಿಸ್ಟರ್ ಮೇಲೆ ಐಟಿ ದಾಳಿ : ಯಾರು, ಏನು ಹೇಳಿದರು?

"ಎರಡು-ಮೂರು ದಿನಗಳ ಕಾಲ ಗುಜರಾತ್ ಗೆ ತೆರಳುತ್ತಿದ್ದೇನೆ. ಅಲ್ಲಿ ಗುಜರಾತ್ ಗೆ ಸಂಬಂಧಿಸಿದಂತೆ ನಿಮಗೆ ಎಷ್ಟು ಪ್ರಶ್ನೆ ಬೇಕೋ ಅಷ್ಟನ್ನೂ ಕೇಳಿ" ಎಂದರು.

Rahul Gandhi maintains silence About Karnataka Tax Raids

ಕಾಂಗ್ರೆಸ್ ನ ಬಹುತೇಕ ನಾಯಕರ ಪ್ರಶ್ನೆಗಳು ಒಂದೇ ಥರನಾಗಿವೆ. ಕಾಂಗ್ರೆಸ್ ನಲ್ಲಿ ರಾಜಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಅಹ್ಮದ್ ಪಟೇಲ್ ರಾಜ್ಯಸಭೆಗೆ ಆಯ್ಕೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಗೋವಿಂದರಾಜ್ ಡೈರಿ ಆಯ್ತು, ಈಗ ಡಿಕೆಶಿ ಲಾಕರ್ ಸರದಿǃಗೋವಿಂದರಾಜ್ ಡೈರಿ ಆಯ್ತು, ಈಗ ಡಿಕೆಶಿ ಲಾಕರ್ ಸರದಿǃ

"ಏಕೆ ಈಗಲೇ ದಾಳಿ ನಡೆಸಬೇಕಿತ್ತು? ಹದಿನೈದು ದಿನ ಮುಂಚೆಯೇ ಏಕೆ ಮಾಡಲಿಲ್ಲ? ಅಥವಾ ಹದಿನೈದು ದಿನದ ನಂತರ ಏಕೆ ಮಾಡಬಾರದಿತ್ತು?" ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಚುನಾವಣೆ ಆಯೋಗಕ್ಕೆ ತೆರಳಿ, ಗುಜರಾತ್ ನ ಶಾಸಕರನ್ನು ಬೆದರಿಸಿ, ರಾಜ್ಯಸಭೆ ಚುನಾವಣೆಗೆ ತಮ್ಮ ಕಡೆಗೆ ಸೆಳೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

English summary
When Congress vice president Rahul Gandhi questioned about IT raids on Karnataka minister DK Shivakumar, he said, none to make. Not today, anyway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X