ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಉತ್ತರಾಖಂಡ್ 'ಟೆಂಟ್' ನಲ್ಲಿ ಪತ್ತೆ!

By Mahesh
|
Google Oneindia Kannada News

ನವದೆಹಲಿ, ಫೆ.25: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎಲ್ಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಉತ್ತರಾಖಂಡ್ ರಾಜ್ಯದಿಂದ ಬಂದಿದೆ. ಈ ಮಧ್ಯೆ ಈ ಸುದ್ದಿಯನ್ನು ಪರಿಶೀಲಿಸಿ ನೋಡುವುದು ಬಾಕಿಯಿದೆ.

ಲೋಕಸಭೆ ಕಲಾಪಕ್ಕೆ ಗೈರು ಹಾಜರಾದ ಕಾಂಗ್ರೆಸ್ ಯುವರಾಜ ಬೆಟ್ಟದ ತಪ್ಪಲಿನಲ್ಲಿ ಟೆಂಟ್ ಹಾಕಿಕೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಜಗದೀಶ್ ಕುಮಾರ್ ಶರ್ಮ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ. ಆದರೆ, ಜಗದೀಶ್ ಟ್ವೀಟ್ ಮಾಡಿದ ಚಿತ್ರಗಳೆಲ್ಲ ಹಳೆ ಚಿತ್ರಗಳು ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.

Assembly loses Rahul to 'introspection', found him camping in Uttarakhand

ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್ ಟಿಯುಸಿ) ಉಪಾಧ್ಯಕ್ಷ ಜಗದೀಶ್ ಕುಮಾರ್ ಶರ್ಮ ಅವರು ರಾಹುಲ್ ಗಾಂಧಿ ಅವರು ವಿದೇಶಕ್ಕೆ ತೆರಳಿಲ್ಲ. ಇಲ್ಲೇ ಉತ್ತರಾಖಂಡ್ ರಾಜ್ಯದ ಬೆಟ್ಟದ ತಪ್ಪಲಿನಲ್ಲಿದ್ದಾರೆ. ಪ್ರತಿವರ್ಷ ಉತ್ತರಾಖಂಡ್ ರಾಜ್ಯಕ್ಕೆ ಭೇಟಿ ನೀಡುತ್ತಾರೆ ಎಂದು ಶರ್ಮ ಹೇಳಿದ್ದಾರೆ.


ವಿದೇಶಿ ಪ್ರವಾಸದ ಸುದ್ದಿ:
ರಾಹುಲ್ ಗಾಂಧಿ ಅವರು ಥೈಲ್ಯಾಂಡ್ ಅಥವಾ ಸಿಂಗಪುರಕ್ಕೆ ತೆರಳುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಥಾಯ್ ಏರ್ ವೇಸ್ ನಲ್ಲಿ ಮಾರ್ಚ್ 9ಕ್ಕೆ ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಆಗಿದೆ ಎನ್ನಲಾಗಿತ್ತು.

ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ನಡೆಯುವಾಗ ಕಾಂಗ್ರೆಸ್ ಯುವರಾಜ ಈ ರೀತಿ ಪ್ರವಾಸ ನಿರತರಾಗಿರುವ ಬಗ್ಗೆ ಹಿರಿಯ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಮೂಡಿಸಿದೆ.

ಲೋಕಸಭೆ ಚುನಾವಣೆ ಹಾಗೂ ದೆಹಲಿ ಚುನಾವಣೆ ಫಲಿತಾಂಶದ ಹೊಡೆತದಿಂದ ಇನ್ನೂ ಕಾಂಗ್ರೆಸ್ ಚೇತರಿಕೆ ಕಂಡಿಲ್ಲ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಕೂಡಾ ಚರ್ಚೆ ನಡೆದಿದೆ. ಪ್ರಿಯಾಂಕಾ ಗಾಂಧಿ ಅವರನ್ನು ಕರೆ ತರುವಂತೆ ಕಾಂಗ್ರೆಸ್ಸಿನ ಒಂದು ಬಣ ಬಲವಾಗಿ ಆಗ್ರಹಿಸುತ್ತಿದೆ.

English summary
Rahul Gandhi's absence from the Parliament was striking, but was accepted in silent consolation that he was 'introspecting' about the past events. However, things took a surprising turn when one of Congress party workers posted pictures of him camping in Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X