ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನಸ ಸರೋವರ ಯಾತ್ರೆಗೆ ಚೀನಾ ಹೇರಿದ ನಿರ್ಬಂಧಕ್ಕೆ ಪ್ರತಿಭಟನೆ

|
Google Oneindia Kannada News

ನವದೆಹಲಿ, ಜುಲೈ 4: ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುತ್ತಿರುವ ಭಾರತೀಯರನ್ನು ತಡೆಯುತ್ತಿರುವ ಚೀನಾ ನಡೆಯ ವಿರುದ್ಧ ಭಾರತದಾದ್ಯಂತ ಖಂಡನೆ ವ್ಯಕ್ತವಾಗಿದ್ದು, ನವದೆಹಲಿಯ ಚೀನಾ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಭಾರತೀಯ ಸೈನಿಕರನ್ನು ಕೊಲ್ಲುವ, ಮಾನಸ ಸರೋವರ ಯಾತ್ರೆಗೆ ತೆರಳುತ್ತಿರುವ ಭಾರತೀಯರನ್ನು ತಡೆಯುವ ಚೀನಿಯರ ವಿರುದ್ಧ ತಾವು ಹೋರಾಟ ನಡೆಸುತ್ತಿರುವುದಾಗಿ ಪ್ರತಿಭಟನಕಾರರು ತಿಳಿಸಿದರು.

ಟ್ರಂಪ್ ಮೆಚ್ಚುಗೆಗಾಗಿ ಚೀನಾದ ದ್ವೇಷ ಕಟ್ಟಿಕೊಳ್ಳುತ್ತಿದೆ ಭಾರತ!ಟ್ರಂಪ್ ಮೆಚ್ಚುಗೆಗಾಗಿ ಚೀನಾದ ದ್ವೇಷ ಕಟ್ಟಿಕೊಳ್ಳುತ್ತಿದೆ ಭಾರತ!

Protests against China on stopping Mansa sarovar Yatra

ಈ ಸಂದರ್ಭದಲ್ಲಿ ಚೀನಾಕ್ಕೆ ಪಾಠ ಕಲಿಸುವುದಕ್ಕಾದರೂ ಚೀನೀ ಸರಕುಗಳನ್ನು ನಿಷೇಧಿಸಿ ಎಂಬ ಕೂಗೂ ಕೇಳಲಿಬಂತು. ಮಾನಸ ಸರೋವರ ಯಾತ್ರೆಗೆ ನಿರ್ಬಂಧ ವಿಧಿಸುವುದು ಎಂದರೆ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನೇ ಪ್ರಶ್ನಿಸಿದಂತೆ. ಇದನ್ನು ನಾವು ಸಹಿಸಲಾರೆವು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ.

ಕಳೆದ ತಿಂಗಳು ಭಾರತದಿಂದ ಚೀನಾಕ್ಕೆ ತೆರಳುತ್ತಿದ್ದ 50 ಭಕ್ತರನ್ನು ಚೀನಾ, ನಾಥು-ಲಾ ಪಾಸ್ ಬಳಿ ತಡೆದು, ಪ್ರವೇಶಕ್ಕೆ ಅನುಮತಿ ನಿರಾಕರಿಸಿತ್ತು.

English summary
In the wake of China stopping Indian pilgrims from visiting Kailash Mansarovar, a protest was held outside the Chinese embassy here on July 4th. The protestors urged the public to ban China and its products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X