ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ.ಎಸ್ ಸತ್ಯು ಸೇರಿ 40 ಮಂದಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

By Vanitha
|
Google Oneindia Kannada News

ನವದೆಹಲಿ, ಅಕ್ಟೋಬರ್, 24 : ಕಲಾ ಪ್ರಪಂಚದ ಪ್ರತಿಷ್ಠಿತ ಪ್ರಶಸ್ತಿಯಾದ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ-2014 ಗೌರವ ಮತ್ತು ಫೆಲೋಶಿಪ್ ದೇಶದ 40 ಮಂದಿಗೆ ಲಭಿಸಿದೆ. ಕಲೆಯ ನಾನಾ ಕ್ಷೇತ್ರದ ಸಾಧಕರಿಗೆ ಅಕ್ಟೋಬರ್ 23ರ ದಸರಾದಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿಯು ಸಂಗೀತ, ನೃತ್ಯ, ಜನಪದ ಇನ್ನಿತರ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ಪ್ರದಾನ ಮಾಡಲಾಗುತ್ತದೆ. ಈ ಗೌರವಾನ್ವಿತ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.

ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯು ಕಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸಲ್ಲುವ ವಿಶೇಷ ಗೌರವ. ಸಂಗೀತ ಅಕಾಡೆಮಿ ಪ್ರಶಸ್ತಿಯನ್ನು 1952ರಿಂದ ಆರಂಭವಾಯಿತು. ಈ ವಿಜೇತರಿಗೆ 1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಬನ್ನಿ 2014ರ ಸಂಗೀತ ನಾಟಕ ಅಕಾಡೆಮಿ ವಿಜೇತರ ಪಟ್ಟಿ ನೋಡಿಕೊಂಡು ಬರೋಣ.[ಕರ್ನಾಟಕ ಸಂಗೀತದಲ್ಲಿ ಕರ್ನಾಟಕವೆಲ್ಲಿ? ಕನ್ನಡವೆಲ್ಲಿ]

ಸಿನಿಮಾ ನಿರ್ದೇಶಕ - ಎಂ. ಎಸ್ ಸತ್ಯು

ಸಿನಿಮಾ ನಿರ್ದೇಶಕ - ಎಂ. ಎಸ್ ಸತ್ಯು

ಕರ್ನಾಟಕ ಸಂಗೀತ ಶಾಸ್ತ್ರಜ್ಞ - ಎಸ್ ಆರ್ ಜಾನಕಿರಾಮನ್
ಸಿನಿಮಾ ನಿರ್ದೇಶಕ - ಎಂ ಎಸ್ ಸತ್ಯು
ಸಂಗೀತ ಸಂಯೋಜಕ - ವಿಜಯ ಕುಮಾರ್ ಕಿಂಚ್ಲೂ ಮತ್ತು ತುಳಸಿದಾಸ್ ಬೋರ್ಕಾರ್

ಹಿಂದೂಸ್ತಾನಿ ಸಂಗೀತ : ಅಶ್ವಿನಿ ಬಿಂದೆ ದೇಶಪಾಂಡೆ

ಹಿಂದೂಸ್ತಾನಿ ಸಂಗೀತ : ಅಶ್ವಿನಿ ಬಿಂದೆ ದೇಶಪಾಂಡೆ

ಹಿಂದೂಸ್ತಾನಿ ಸಂಗೀತ : ಅಶ್ವಿನಿ ಬಿಂದೆ ದೇಶಪಾಂಡೆ, ಇಕ್ಬಾಲ್ ಅಹಮದ್ ಖಾನ್, ನಾಥ್ ನೇರಳ್ ಕರ್
ಹಿಂದೂಸ್ತಾನಿ ವಾದ್ಯ ಸಂಗೀತ : ನಯನಾ ಘೋಷ್, ರೋನು ಮಜುಂದಾರ್
ಕರ್ನಾಟಕ ಗಾಯನ ಸಂಗೀತ : ಆರ್ ಸಂತನಾಗೋಪಾಲನ್
ಕರ್ನಾಟಕ ವಾದ್ಯ ಸಂಗೀತ : ತಿರುವಲಪುತ್ತೂರ್ ಟಿ ಎ ಕಲಿಯಾ ಮೂರ್ತಿ, ಸುಖನ್ಯ ರಾಮಗೋಪಾಲ್, ದ್ವಾರಂ ದುರ್ಗಾ ಪ್ರಸಾದ್ ರಾವ್[ಜಗಮೆಚ್ಚಿದ ಬೆಂಗಳೂರು ಹುಡ್ಗ ರಿಯಾಜ್ ಬಾಷಾ]

ನೃತ್ಯ ಕ್ಷೇತ್ರ : ವಿಷ್ಣು ನಂಬೂದರಿ

ನೃತ್ಯ ಕ್ಷೇತ್ರ : ವಿಷ್ಣು ನಂಬೂದರಿ

ಅರಯಮ್ ಬತ್ ಜನಾರ್ಧನ್ (ಭರತನಾಟ್ಯ), ಉಮಾ ದೋಗ್ರಾ (ಕಥಕ್), ಎನ್ ಅಮೂಸನಾ ದೇವಿ (ಮಣಿಪುರಿ), ವೇದಾಂತಮ್ ರಾಧೆಶ್ಯಾಮ್ (ಕುಚಿಪುಡಿ), ಸುಧಾಕರ್ ಸಾಹು (ಒಡಿಸ್ಸಿ), ಅನಿತಾ ಶರ್ಮ ( ಸಾತ್ರಿಯಾ), ಜಗ್ರೂ ಮಹತೋ ( ಚಾವೂ), ನವತೇಜ್ ಸಿಂಗ್ ಜೋಹಾರ್ ( ಸಮಕಾಲೀನ ನೃತ್ಯ), ವಾರಣಾಸಿ ವಿಷ್ಣು ನಂಬೂದರಿ (ಕಥಕಳಿ ಸಂಗೀತ)

ನಾಟಕ ಕ್ಷೇತ್ರ : ಚಿದಂಬರ ರಾವ್ ಜಂಬೆ

ನಾಟಕ ಕ್ಷೇತ್ರ : ಚಿದಂಬರ ರಾವ್ ಜಂಬೆ

ಆಸ್ಗರ್ ವಾಜಾಹತ್ (ನಾಟಕ ಬರಹಗಾರ), ಚಿದಂಬರ ರಾವ್ ಜಂಬೆ (ನಿರ್ದೇಶನ), ದೇಬ್ ಸಂಕರ್ ಹಾಲ್ದಾರ್ ಮತ್ತು ರಾಮ್ ದಾಸ್ ಕಾಮತ್ (ನಟನೆ), ಅಮೋದ್ ಭಟ್ ( ನಾಟಕ ಸಂಗೀತ), ಮಂಜುನಾಥ್ ಭಾಗವತ್ ಹೊಸತೋಟ (ಯಕ್ಷಗಾನ), ಅಮರದಾಸ್ ಮಣಿಕ್ ಪುರಿ (ಛತ್ತೀಸ್ ಗಡ್ ನಾಟಕ ಸಂಗೀತ)

ಜಾನಪದ ಕಲಾವಿದ : ಅಬ್ದುಲ್ ರಶೀದ್ ಹಫೀಜ್

ಜಾನಪದ ಕಲಾವಿದ : ಅಬ್ದುಲ್ ರಶೀದ್ ಹಫೀಜ್

ಪುರಾಣಸಹ್ ಕೋಟಿ (ಪಂಜಾಬಿ ಸಂಪ್ರದಾಯಿಕ ಸಂಗೀತ), ಕೆ. ಕೇಶವ ಸ್ವಾಮಿ (ಗೊಂಬೆಯಾಟ-ಪುದುಚೇರಿ), ಕಲಾಮಂಡಲಮ್ ರಾಮ್ ಮೋಹನ್ (ಪ್ರಸಾದನ, ವಸ್ತ್ರ ವಿನ್ಯಾಸ-ಕಥಕಳಿ), ರೆಬೇ ಕಾಂತ ನಹಾಂತ (ಮುಖವಾಡ ತಯಾರಿಕೆ-ಅಸ್ಸಾಂ), ಅಬ್ದುಲ್ ರಶೀದ್ ಹಫೀಜ್ (ಜಾನಪದ ಸಂಗೀತ), ಕೆ ಶಾಂತೋಯ್ಬಾ ಶರ್ಮ (ತಾಂಗ್ಟಾ- ಮಣಿಪುರ), ಸಾಮ್ ದಯಾಳ್ ಶರ್ಮ (ನೌಟಂಕಿ-ಉತ್ತರ ಪ್ರದೇಶ)

ಮಣಿಪುರಿ ನೃತ್ಯಗಾರ್ತಿ ನಾನ್ಗೋಥಮ್ ಅಮೂಸನಾ ದೇವಿ

ಮಣಿಪುರಿ ನೃತ್ಯಗಾರ್ತಿ ನಾನ್ಗೋಥಮ್ ಅಮೂಸನಾ ದೇವಿ

ಮಣಿಪುರಿ ನೃತ್ಯಗಾರ್ತಿ ನಾನ್ಗೋಥಮ್ ಅಮೂಸನಾ ದೇವಿ ಮಣಿಪುರಿ ನೃತ್ಯಕ್ಕೆ ಸಂಗೀತ ಅಕಾಡೆಮಿ ಪ್ರಶಸ್ತಿ ಪಡೆದರು.

ಸಂಗೀತ ಸಂಯೋಜಕ ತುಳಸಿ ದಾಸ್ ವಸಿಷ್ಠ ಬೋರ್ಕಾರ್

ಸಂಗೀತ ಸಂಯೋಜಕ ತುಳಸಿ ದಾಸ್ ವಸಿಷ್ಠ ಬೋರ್ಕಾರ್

ಸಂಗೀತ ಸಂಯೋಜಕ ತುಳಸಿ ದಾಸ್ ವಸಿಷ್ಠ ಬೋರ್ಕಾರ್ ಸಂಗೀತ ನಾಟಕ ಫೆಲೋಶಿಪ್ ಗೆ ಭಾಜನರಾದರು.

ಕುಚಿಪುಡಿ ನೃತ್ಯಗಾರ ವೇದಾಂತಮ್ ರಾಧೇಶ್ಯಾಮ್

ಕುಚಿಪುಡಿ ನೃತ್ಯಗಾರ ವೇದಾಂತಮ್ ರಾಧೇಶ್ಯಾಮ್

ಕುಚಿಪುಡಿ ನೃತ್ಯಗಾರ ವೇದಾಂತಮ್ ರಾಧೇಶ್ಯಾಮ್ ಕುಚಿಪುಡಿ ನೃತ್ಯದಲ್ಲಿ ಮಾಡಿರುವ ಸಾಧನೆ ಪ್ರಶಸ್ತಿ ಪಡೆದುಕೊಂಡರು

ಚಾವು ನೃತ್ಯಗಾರ ಜಾಗೃ ಮಹತೋ

ಚಾವು ನೃತ್ಯಗಾರ ಜಾಗೃ ಮಹತೋ

ಚಾವು ನೃತ್ಯಗಾರ ಜಾಗೃ ಮಹತೋ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಭಾವುಕರಾಗಿ ಪ್ರಭನ್ ಮುಖರ್ಜಿ ಅವರ ಕಾಲಿಗೆರಗಿದರು.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರು

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರು

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪಡೆದು ಸಂತಸಗೊಂಡರು.

English summary
President Pranab Mukherjee awarded the Sangeet Natak Akademi awards and fellowships to 40 artistes including dancers, musicians, traditional folk artists on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X