ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಭೇಟಿ ಮಾಡಿದ ಬೆಂಗಳೂರು ವಿದ್ಯಾರ್ಥಿನಿಯರು

By Vanitha
|
Google Oneindia Kannada News

ನವದೆಹಲಿ, ಆಗಸ್ಟ್, 05 : ಬೆಂಗಳೂರಿನ ನ್ಯೂ ಹಾರಿಜಾನ್ ಪಬ್ಲಿಕ್ ಶಾಲೆಯ (ಎನ್ ಎಚ್ ಪಿಎಸ್) ವಿದ್ಯಾರ್ಥಿನಿಯರು ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ,ಶುಭಾಷಯ ಸ್ವೀಕರಿಸಿದ್ದು, ಮೋದಿ ಅವರಿಂದ ಹಲವಾರು ಪ್ರಶ್ನೆಗಳಿಗೆ ಉತ್ತರ ಪಡೆದು ಹರ್ಷಚಿತ್ತರಾಗಿದ್ದಾರೆ.

ಎನ್ಎಚ್ ಪಿಎಸ್ ನ 9 ನೇ ತರಗತಿ ವಿದ್ಯಾರ್ಥಿನಿಯರು ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರೇಪಿತರಾಗಿ ಒಣ ಕಸ ಮಾರಾಟ ಮತ್ತು ಖರೀದಿ ಮಾಡುವುದರ ಬಗ್ಗೆ ಸೆಲೆಕ್ಸೋ (Sellixo ) ಎಂಬ ಹೊಸ ಅಪ್ಲಿಕೇಶನ್ ತಯಾರಿಸಿದ್ದರು. ಬಳಿಕ ಫ್ರಾನ್ಇಸ್ಕೋದಲ್ಲಿ ನಡೆದ ಟೆಕ್ನೋವೇಶನ್ ಚಾಲೆಂಜ್‌ 2015 ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಇವರು ಜೂನ್ 25 ರಂದು ನಡೆದ ಫೈನಲ್‌ನಲ್ಲಿ ಮೊದಲ ಬಹುಮಾನ ಗಳಿಸಿದ್ದರು.[ಬೆಂಗಳೂರು ವಿದ್ಯಾರ್ಥಿನಿಯರ ಜಗಮೆಚ್ಚಿದ ಸಾಧನೆ]

PM Narendra Modi met Bengaluru NHPS students on Tuesday

ಈ ಪ್ರಯುಕ್ತ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ ಮೋದಿ ಅವರು 'ನಮ್ಮ ರಾಷ್ಟ್ರದ ಕೀರ್ತಿ ಪತಾಕೆಯನ್ನು ಹಾರಿಸಿ, ರಾಷ್ಟ್ರದ ಖ್ಯಾತಿಯನ್ನು ಹೆಚ್ಚಿಸಿದ್ದೀರಿ. ನಿಮ್ಮನ್ನು ಕಂಡು ನನಗೆ ಹೆಮ್ಮೆ ಎನಿಸುತ್ತಿದೆ. ನೀವೇ ನಮ್ಮ ದೇಶದ ನಿಜವಾದ ಆದರ್ಶ ವ್ಯಕ್ತಿಗಳು, ನಿಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ' ಎಂದು ಶುಭ ಹಾರೈಸಿದ್ದಾರೆ.

ಬಳಿಕ 10 ನಿಮಿಷಗಳ ಕಾಲ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕೈಗೊಂಡ ನರೇಂದ್ರ ಮೋದಿ ಅವರು ಹೊಸದಾಗಿ ತಯಾರಿಸಿದ ಆಪ್ಲೀಕೇಶನ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದರ ಜೊತೆಗೆ ಇದರ ವಿಶೇಷ ಲಕ್ಷಣಗಳನ್ನು ಪಟ್ಟಿಮಾಡಿಕೊಂಡಿದ್ದಾರೆ ಹಾಗೂ ಇವರ ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗಳ ಕುರಿತಾಗಿ ತಮ್ಮ ಕಲ್ಪನೆಗಳನ್ನು ವ್ಯಕ್ತಪಡಿಸಿದ್ದಾರೆ.

ಎನ್ಎಚ್ ಪಿಎಸ್ ನ ವಿದ್ಯಾರ್ಥಿನಿಯರನ್ನು ಭೇಟಿ ಮಾಡಲು ಕುತೂಹಲ ವ್ಯಕ್ತಪಡಿಸಿದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವೆ ಸ್ಮೃತಿ ಇರಾನಿ ವಿದ್ಯಾರ್ಥಿನಿಯರ ಸಾಧನೆಯನ್ನು ಮೆಚ್ಚಿ ಈ ವಿದ್ಯಾರ್ಥಿನಿಯರು ಇಂದು ಗ್ರಾಮೀಣ ಭಾಗದ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಮಾದರಿಯಾಗಿದ್ದಾರೆ. ಗ್ರಾಮೀಣ ಬಾಲಕಿಯರು ಇವರಂತೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶದ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಆಶಿಸಿದ್ದಾರೆ.

ಮೋದಿ ಅವರ ಆಗಮನ ಕಂಡು ಸಂತಸಗೊಂಡ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ವಿದ್ಯಾರ್ಥಿನಿಯರು, ಬೋಧನಾ ಸಿಬ್ಬಂದಿಗಳು 'ಈ ದಿನ ನಮ್ಮ ಬದುಕಿನಲ್ಲಿ ಮರೆಯಲಾಗದ ನೆನಪು. ದಿಸ್ ಡೇ ಇಸ್ ಗ್ರೇಟ್ ಡೇ' ಎಂದು ಹೇಳಿದ್ದಾರೆ. ಅಲ್ಲದೇ ಮುಂದಿನ ಒಂದು ವರ್ಷದಲ್ಲಿ ಹೊಸ ಅಪ್ಲೀಕೇಶನ್ ನ್ನು ಇನ್ನಷ್ಟು ಅಭಿವೃದ್ದಿ ಪಡಿಸಿ ಉಪಯೋಗವಾಗುವಂತೆ ಮಾಡಲಿದ್ದೇವೆ ಎಂದು ವಿದ್ಯಾರ್ಥಿನಿಯರು ಮೋದಿ ಅವರಿಗೆ ಭರವಸೆ ನೀಡಿದ್ದಾರೆ.

English summary
Five girl students from the New Horizon Public School(NHPS),Bengaluru, on Tuesday, Aug 4, met Prime Minister Narendra Modi in New Delhi. These students had recently won the first prize in the Technovation Challenge 2015 competition held at San Francisco, the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X