ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"Selfie With Daughter ತೆಗೆದು ಕಳಿಸಿ ಧೈರ್ಯ ತುಂಬಿ"

By Mahesh
|
Google Oneindia Kannada News

ನವದೆಹಲಿ, ಜೂ.28: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 'ಬೇಟಿ ಪಡಾವೋ, ಬೇಟಿ ಬಚಾವೋ' ಯೋಜನೆಯ ಮಹತ್ವದ ಬಗ್ಗೆ ವಿವರಿಸುತ್ತಾ #SelfieWithDaughter ನೊಂದಿಗೆ ಫೋಟೋ ಹಾಕುವಂತೆ ಭಾನುವಾರ ಬೆಳಗ್ಗೆ ಕರೆ ನೀಡಿದ್ದರು. ಸಂಜೆ ವೇಳೆಗೆ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಈ ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ಗೆ ಬಂದಿದೆ.

ಮೋದಿ ಅವರು ತಮ್ಮ 9ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮ ಸರ್ಕಾರವನ್ನು ಕೆಲಸ ಮಾಡುವ ಸರ್ಕಾರ ಎಂದು ಹೆಮ್ಮೆಯಿಂದ ಘೋಷಿಸಿದರು. 'ಬೇಟಿ ಪಡಾವೋ, ಬೇಟಿ ಬಚಾವೋ' ಯೋಜನೆ ಬಗ್ಗೆ ಹೆಚ್ಚಿನ ಒತ್ತು ನೀಡಿದ ಮೋದಿ ಅವರು 25 ನಿಮಿಷದ ತಮ್ಮ ಭಾಷಣದಲ್ಲಿ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.

PM Narendra Modi mann ki baat

ಸ್ಮಾರ್ಟ್ ಫೋನ್ ಬಳಸಿ ನಿಮ್ಮ ಹೆಣ್ಣು ಮಗುವಿನ ಜೊತೆ ಒಂದು ಸೆಲ್ಫಿ ಫೋಟೋ ತೆಗೆದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.

ಹೆಣ್ಣು ಮಕ್ಕಳು ಹುಟ್ಟಿದಾಗ ಬೇಸರಪಟ್ಟುಕೊಳ್ಳುವುದು, ಭ್ರೂಣ ಹತ್ಯೆ ತಡೆ, ಬಾಲಕಿಯರಿಗೆ ಶಿಕ್ಷಣ ಹಕ್ಕು ಮುಂತಾದ ವಿಷಯಗಳಾನ್ನು ಹೊಂದಿರುವ ಬೇಟಿ ಪಡವೋ, ಬೇಟಿ ಬಚಾವೋ ಯೋಜನೆಗೆ ಪೋಷಕರು ಸಹಕರಿಸುವಂತೆ ಮೋದಿ ಹೇಳಿದರು.

#SelfieWithDaughter ಮೊಟ್ಟಮೊದಲಿಗೆ ಆರಂಭಿಸಿದ ಹರ್ಯಾಣದ ಗ್ರಾಮವೊಂದರ ಸರಪಂಚ್ ಅವರನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು. ರಕ್ಷಾ ಬಂಧನ ಸದ್ಯದಲ್ಲಿಯೇ ಇದ್ದು, ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ಅವರ ಸಹೋದರರು ಮತ್ತು ಮನೆಯವರು ಕೆಲವು ವಿಶೇಷ ಕೊಡುಗೆಗಳನ್ನು ನೀಡಬೇಕು.

ವಿಶ್ವ ಯೋಗ ದಿನದಂದು ಸೂರ್ಯನ ಕಿರಣ ಎಲ್ಲೆಡೆ ಹರಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಮಾನ್ಯತೆ ಸಿಕ್ಕಿದ್ದು, ವಿಶ್ವಸಂಸ್ಥೆಯಲ್ಲಿ ಅಧ್ಯಕ್ಷರು ಕೂಡಾ ಯೋಗಾಭ್ಯಾಸ ನಿರತರಾಗಿದ್ದು ಕಂಡು ಮನ ಪುಳಕಿತಗೊಂಡಿತು ಎಂದು ಮೋದಿ ಹೇಳಿದರು.
ಮೋದಿ ಅವರ ಮನ್ ಕೀ ಬಾತ್ ಕೇಳಿಸಿಕೊಳ್ಳಿ


(ಒನ್ ಇಂಡಿಯಾ ಸುದ್ದಿ)

English summary
"I urge all of you, share a 'Selfie With Daughter'. Also share a tagline that will encourage 'Beti Bachao, Beti Padhao' andolan", Modi said in his Mann ki Baat. The hashtag #SelfieWithDaughter started trending worldwide today after Prime Minister Narendra Modi asked people to post their photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X