ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಸ್ ಪೆಕ್ಟರ್ ರಾಜ್ ಬಲಿ ಹಾಕಲು ಮೋದಿ ಯೋಜನೆ

By Mahesh
|
Google Oneindia Kannada News

ನವದೆಹಲಿ, ಅ.15: ಬಹಳ ವರ್ಷಗಳಿಂದ ಕೈಗಾರಿಕಾ ವಲಯವನ್ನು ಕಾಡುತ್ತಿರುವ ಶ್ರಮಿಕರ ಮೇಲಿನ ದರ್ಬಾರು, ದಬ್ಬಾಳಿಕೆಯನ್ನು ಹತ್ತಿಕ್ಕಲು ಕಾರ್ಮಿಕ ಇನ್ಸ್ ಪೆಕ್ಟರ್ ಗಳ ಗೂಂಡಾಗಿರಿಗೆ ತಕ್ಕ ಉತ್ತರ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಯೋಜನೆಗೆ ಗುರುವಾರ ಚಾಲನೆ ನೀಡಿದ್ದಾರೆ.

ಇತ್ತೀಚೆಗೆ ಚಾಲನೆ ನೀಡಲಾದ ಮೇಕ್ ಇನ್ ಇಂಡಿಯಾ ಯೋಜನೆ ಸಾಕಾರಗೊಳ್ಳಲು ಶ್ರಮಿಕ ವರ್ಗಕ್ಕೆ ನೆರವಾಗಲಿರುವ ಶ್ರಮೇವ ಜಯತೆ ಕಾರ್ಮಿಕರ ಕಲ್ಯಾಣ ಯೋಜನೆ ಬಹುಮುಖ್ಯ ಎಂದು ಮೋದಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.

ಉದ್ಯೋಗಾವಕಾಶಗಳನ್ನು ಹೆಚ್ಚಿಸುವಂಥ ಹಲವು ಕಾರ್ಯಕ್ಕೆ ಶ್ರಮ ಸುವಿಧಾ (ಶ್ರಮೇವ ಜಯತೆ) ಯೋಜನೆಗೆ ನಾಂದಿ ಹಾಡಲಾಯಿತು. ದೇಶದಲ್ಲಿ ಅಭಿವೃದ್ಧಿಯ ಬದಲಾವಣೆ ತರಬೇಕಾದರೆ ಸತ್ಯಮೇವ ಜಯತೇ ಜೊತೆಯಲ್ಲೇ ಶ್ರಮಮೇವ ಜಯತೇ ಕೂಡಾ ಅತಿ ಮುಖ್ಯ ಎಂದರು. ಜನರ ಮನಸ್ಥಿತಿಯೂ ಬದಲಾಗಬೇಕು. ಅದರಂತೆಯೇ ಶ್ರಮಿಕರಿಗೂ ಬೆಲೆ ಸಿಗಬೇಕು ಎಂದು ಮೋದಿ ಹೇಳಿದರು. [ಶ್ರಮವೇ ಜಯತೆ ಯೋಜನೆ ವಿಶೇಷವೇನು?]

Another feather in PM Modi's cap: Unveils key labour reforms to end 'Inspector Raj'

ಮೇಕ್ ಇನ್ ಇಂಡಿಯಾ ಯಶಸ್ಸಿಗೆ ನಾವು ಈಗಿನಿಂದಲೇ ಪ್ರಯಾಸ ಪಡಬೇಕು. ಇದರ ಮೂಲಕ ವ್ಯವಹಾರಿಕವಾಗಿ ನಾವು ವಿಶ್ವದಲ್ಲೇ ಮುಂದೆ ಬರಲು ಸಾಧ್ಯ ಎಂದು ಹೇಳಿದರು. ಬಹಳ ವರ್ಷಗಳಿಂದ ಕೈಗಾರಿಕಾ ವಲಯವನ್ನು ಕಾಡುತ್ತಿರುವ ಶ್ರಮಿಕರ ಮೇಲಿನ ದರ್ಬಾರು, ದಬ್ಬಾಳಿಕೆ ಕಾರ್ಯವನ್ನು ಧಮನಗೊಳಿಸಲು ಈ ಹೊಸ ಯೋಜನೆ ನೆರವಾಗಲಿದೆ. ಕಾರ್ಮಿಕ ಸ್ನೇಹಿ ವಾತಾವರಣ ಸೃಷ್ಟಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇ ಕಾಮರ್ಸ್, ಆರ್ಥಿಕ ಸುಧಾರಣೆ ಆಡಳಿತ, ಅಧಿಕಾರದಲ್ಲಿ ಪಾರದರ್ಶಕತೆ ಎಲ್ಲವೂ ಇನ್ಸ್ ಪೆಕ್ಟರ್ ರಾಜ್ ಎಂಬ ಪದವನ್ನು ತೊಲಗಿಸಲಿದೆ. ಚಿಕ್ಕಂದಿನಿಂದ ಕೇಳಿ ಬರುತ್ತಿದ್ದ ಈ ಪದಕ್ಕೆ ಮುಕ್ತಿಗಾಣಿಸಲಾಗುತ್ತದೆ. ಕೈಗಾರಿಕೆಗಳಲ್ಲಿ ದಾಖಲಾತಿ ಇಲ್ಲದೆ ದುಡಿಯುವ ಕಾರ್ಮಿಕರು ಮತ್ತು ಖಾಯಂ ಉದ್ಯೋಗಿಗಳ ಮಾಹಿತಿಯನ್ನು ಕಟ್ಟುನಿಟ್ಟಾಗಿ ದಾಖಲಿಸಲಾಗುತ್ತದೆ ಮತ್ತು ಪ್ರತಿ ತಿಂಗಳು ಅದನ್ನು ಪರಾಮರ್ಶಿಸಿ ಬದಲಾವಣೆಯಾಗಿದ್ದಲ್ಲಿ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡುವಂತಹ ವ್ಯವಸ್ಥೆಯೂ ಇದರಲ್ಲಿದೆ ಎಂದರು.

English summary
New Delhi: Prime Minister Narendra Modi on Thursday unveiled Shramev Jayate, key labour reforms, at New Delhi's Vigyan Bhawan. In an attempt to make a way for 'Make In India' the Prime Minister has announced a slew of measures to ease long-awaited labour reforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X