ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಗ್ಗಜರ ಸಮಾಗಮಕ್ಕೆ ಕಾರಣವಾದ ಸ್ವಚ್ಛ ಭಾರತ

By Mahesh
|
Google Oneindia Kannada News

ನವದೆಹಲಿ, ಅ.16: ದೇಶದ ಇಬ್ಬರು ದಿಗ್ಗಜರ ಸಮಾಗಮಕ್ಕೆ ಸ್ವಚ್ಛ ಭಾರತ ಅಭಿಯಾನ ಕಾರಣವಾಗಿದೆ ಕ್ರಿಕೆಟ್ ಕ್ಷೇತ್ರದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಇದೇ ಅಭಿಯಾನ ಕಾರಣವಾಗಿದೆ. ಮೋದಿ ಅವರ ಕರೆಗೆ ಓಗೊಟ್ಟು ಸಚಿನ್ ಅವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಸಚಿನ್ ರನ್ನು ಹಾಡಿ ಹೊಗಳಿದ್ದಾರೆ.

ಪತ್ನಿ ಅಂಜಲಿ ಜೊತೆ ಸಚಿನ್ ಅವರು ಪ್ರಧಾನಿ ಮೋದಿ ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಇತ್ತೀಚೆಗೆ ಮೋದಿ ಅವರಿಗೆ ಆರೋಗ್ಯಕರ ಸಲಹೆಯನ್ನು ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ನೀಡಿದ್ದರು. ಸ್ವಚ್ಛತಾ ಅಭಿಯಾನದ ಜೊತೆಗೆ ಮೋದಿ ಅವರು ಗ್ರಾಮಗಳ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೂ ಒತ್ತು ನೀಡಿದರೆ ಒಳ್ಳೆಯದು ಎಂದು ಸಚಿನ್ ಹೇಳಿದ್ದರು. [ವಿವರ ಇಲ್ಲಿ ಓದಿ]

Modi praises Tendulkar's 'phenomenal' efforts for 'Swachh Bharat'; Cricket legend to adopt village

ಸಚಿನ್ ಭೇಟಿ ಕುರಿತಂತೆ ಪ್ರಧಾನಿ ಮೋದಿ ಅವರು ಸರಣಿ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದರು. ದೇಶದ ಸ್ವಚ್ಛತೆ ವಿಷಯದಲ್ಲಿ ಸಚಿನ್ ಅವರು ತೋರಿರುವ ಕಾಳಜಿಗೆ ಧನ್ಯವಾದಗಳು ಎಂದು ಮೋದಿ ಟ್ವೀಟ್ ಮಾಡಿದ್ದರು. ಇದರ ಜೊತೆಗೆ ಸಂಸದರ ಆದರ್ಶ್ ಗ್ರಾಮ ಯೋಜನೆ ಅಡಿಯಲ್ಲಿ ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳುವಂತೆ ಸಂಸದ ಸಚಿನ್ ಅವರಿಗೆ ಮೋದಿ ಅವರು ಕೇಳಿಕೊಂಡಿದ್ದಾರೆ.

ಮೋದಿ ಅವರ ಕೋರಿಕೆಯನ್ನು ಸಚಿನ್ ಅವರು ಒಪ್ಪಿಕೊಂಡ ನಂತರ ಖುಷಿಯಲ್ಲಿ ಮೋದಿ ಅವರು ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರ ಜನ್ಮ ದಿನದಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ ಅವರು ಸಚಿನ್ ತೆಂಡೂಲ್ಕರ್ ಸೇರಿದಂತೆ ದೇಶದ 9 ಪ್ರಮುಖ ಸೆಲೆಬ್ರಿಟಿಗಳನ್ನು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಟ್ವೀಟ್ ಮಾಡಿ ನಾಮಾಂಕಿತಗೊಳಿಸಿದ್ದರು.

English summary
Prime Minister Narendra Modi today praised cricket legend Sachin Tendulkar for taking part in "Swachh Bharat Abhiyaan" (Clean India Mission) and called his efforts for a clean India as "phenomenal".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X