ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಸಭೆಯಲ್ಲಿ ಮಾಂಸಾಹಾರ ನಿಷೇಧಿಸುವಂತೆ ಮೋದಿಗೆ ಪೆಟಾ ಮನವಿ

|
Google Oneindia Kannada News

ನವದೆಹಲಿ, ಏಪ್ರಿಲ್ 25 : ಸರ್ಕಾರಿ ಸಭೆ ಮತ್ತು ಸಮಾರಂಭಗಳಲ್ಲಿ ಮಾಂಸಾಹಾರವನ್ನು ನಿಷೇಧಿಸುವಂತೆ ಪ್ರಾಣಿ ಹಕ್ಕುಗಳ ಸಂಘಟನೆ ಪೆಟಾ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿದೆ.

ಮಾಂಸಾಹಾರ ನಿ‍ಷೇಧದಿಂದ ಹವಾಮಾನ ವೈಪರೀತ್ಯವನ್ನೂ ನಿಯಂತ್ರಿಸಬಹುದು. ಜರ್ಮನಿಯ ಪರಿಸರ ಸಚಿವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾಂಸಾಹಾರ ಸೇವನೆಯನ್ನು ನಿಷೇಧಿಸಿದ್ದಾರೆ. ಅದರಂತೆ ಭಾರತದಲ್ಲೂ ಕ್ರಮ ಕೈಗೊಳ್ಳಬೇಕು ಎಂದು ಪೆಟಾ ಮೋದಿ ಅವರಿಗೆ ಪತ್ರ ಮೂಲಕ ಮನವಿ ಮಾಡಿಕೊಂಡಿದೆ.

PETA urges PM Narendra Modi to ban meat at government events

ಪ್ರಾಣಿ ದಯಾ ಸಂಘ ಸರ್ಕಾರಿ ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳಲ್ಲಿ ಎಲ್ಲ ಬಗೆಯ ಮಾಂಸಾಹಾರಕ್ಕೂ ನಿರ್ಬಂಧ ವಿಧಿಸುವಂತೆ ಕೋರಿದೆ.

ಇತ್ತೀಚೆಗೆ ಸಸ್ಯಾಹಾರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರೇ ರೋಲ್ ಮಾಡೆಲ್ ಎಂದಿರುವ ಪೆಟಾ, ಆರೋಗ್ಯವಂತ ಮತ್ತು ಪರಿಸರ ಸ್ನೇಹಿಯಾಗಿರುವ ಸಸ್ಯಾಹಾರವನ್ನು ಸರ್ಕಾರ ಬೆಂಬಲಿಸಬೇಕು ಎಂದಿದೆ.

English summary
Animal rights organisation PETA India on Monday asked Prime Minister Narendra Modi to take meat off the menu from all government events, taking a cue from the German Environment Minister's initiative to ban all meat products from public meetings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X