ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ದೋಣಿ ಸ್ಫೋಟಿಸಿದ್ದು ಭಾರತವಲ್ಲ : ಡಿಐಜಿ ಸ್ಪಷ್ಟನೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆ. 18: ಗುಜರಾತ್ ಹಾಗೂ ಪಾಕಿಸ್ತಾನ ಮಧ್ಯೆ ಇರುವ ಜಲ ಗಡಿಯಲ್ಲಿ ಈಚೆಗೆ ಸ್ಫೋಟಗೊಂಡ ಪಾಕಿಸ್ತಾನದ ಬೋಟ್‌ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ಇದರಲ್ಲಿದ್ದದ್ದು ಉಗ್ರರು ಎಂದು ಭಾರತ ಹೇಳಿದ್ದರೂ ಪಾಕಿಸ್ತಾನ ಒಪ್ಪಿಕೊಂಡಿಲ್ಲ. ಆದರೆ, ಭಾರತದಲ್ಲಿಯೇ ವಿವಾದ ಸೃಷ್ಟಿಯಾಗಿದೆ.

ಈ ಬೋಟ್ ಸ್ಫೋಟಿಸಿದ್ದು ಸ್ವತಃ ಕೋಸ್ಟ್ ಗಾರ್ಡ್ ಸೈನಿಕರು ಎಂದು ಡಿಐಜಿ ಹೇಳಿಕೆ ನೀಡಿದ್ದಾರೆ ಎಂಬುದಾಗಿ ಪತ್ರಿಕೆಯೊಂದು ಮಾಡಿದ್ದ ವರದಿ ವಿವಾದ ಸೃಷ್ಟಿಸಿದೆ. ಆದರೆ, ಈ ವರದಿ ಸುಳ್ಳು ಎಂದು ಸ್ವತಃ ಡಿಐಜಿ ಸ್ಪಷ್ಟೀಕರಣ ನೀಡಿದ್ದಾರೆ. [ಉಗ್ರರಿಗೆ ಪಾಕ್ ಸುರಕ್ಷಿತ ಸ್ವರ್ಗ]

ವಿವಾದವೇನು? : ವಿವಾದದ ಕೇಂದ್ರಬಿಂದು ಕೋಸ್ಟ್ ಗಾರ್ಡ್‌ನ ಮುಖ್ಯಸ್ಥರಾಗಿರುವ ಡಿಐಜಿ ಬಿ.ಕೆ. ಲೋಶಾಲಿ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು "ಬೋಟನ್ನು ಸ್ಫೋಟಿಸಿಬಿಡಿ. ಅವರಿಗೆ ನಾವು ಬಿರಿಯಾನಿ ಸೇವೆ ನೀಡಬೇಕಾಗಿಲ್ಲ ಎಂದು ಸೈನಿಕರಿಗೆ ಆದೇಶ ಹೊರಡಿಸಲಾಗಿತ್ತು. ಈ ಪ್ರಕಾರ ಕೋಸ್ಟ್ ಗಾರ್ಡ್ ಸೈನಿಕರು ಬೋಟನ್ನು ಸ್ಫೋಟಿಸಿದ್ದಾರೆ" ಎಂದು ಹೇಳಿದ್ದರು ಎಂಬುದಾಗಿ ಪತ್ರಿಕೆಯೊಂದು ವರದಿ ಮಾಡಿತ್ತು.

pak

ಈ ವರದಿ ವಿವಾದಕ್ಕೆ ಕಾರಣವಾಗಿತ್ತು. ಆದರೆ, ತಾವು ಹೀಗೆ ಹೇಳಿಕೆ ನೀಡಿಲ್ಲ. ಈ ವರದಿ ತಪ್ಪಾಗಿದೆ. ತಾವು ಹೇಳಿದ್ದನ್ನು ತಿರುಚಿ ಬರೆಯಲಾಗಿದೆ ಎಂದು ಡಿಐಜಿ ಸ್ಪಷ್ಟೀಕರಣ ನೀಡಿದ್ದಾರೆ. [ಸುರಕ್ಷಿತ ಸ್ಥಳಕ್ಕಾಗಿ ಹುಡುಕಾಟ]

ಈ ಕಾರ್ಯಾಚರಣೆಯ ನೇತೃತ್ವವನ್ನು ತಾವು ವಹಿಸಿರಲಿಲ್ಲ. ಕೋಸ್ಟ್ ಗಾರ್ಡ್ ರೀಜನ್ (ವಾಯವ್ಯ) ವಹಿಸಿತ್ತು. ಬೋಟ್ ತನ್ನಿಂದ ತಾನೆಯೇ ಸ್ಫೋಟಗೊಂಡಿದೆಯೇ ಹೊರತು ಕೋಸ್ಟ್ ಗಾರ್ಡ್‌ನಿಂದಲ್ಲ ಎಂದು ಬಿ.ಕೆ. ಲೋಶಾಲಿ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.

ಕೋಸ್ಟ್ ಗಾರ್ಡ್ ಉಪ ಮಹಾ ನಿರ್ದೇಶಕ ಕೆ.ಆರ್. ನೌಟಿಯಾಳ್ ಕೂಡ "ಕಾರ್ಯಾಚರಣೆಯಲ್ಲಿ ಬಿ.ಕೆ. ಲೋಶಾಲಿ ಭಾಗವಹಿಸಿರಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. [ಪಾಕ್ ದೋಣಿ ಕಂಡಿದ್ದು ಹೇಗೆ?]

ಗೊಂದಲವೇನು? : 2014ರ ಡಿಸೆಂಬರ್ 31ರಂದು ಗುಜರಾತ್ ಜಲಗಡಿಯಲ್ಲಿ ಪಾಕಿಸ್ತಾನದ ಬೋಟ್ ಒಂದು ಕಾಣಿಸಿಕೊಂಡಿತ್ತು. ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಕಣ್ಣಿಗೆ ಈ ಬೋಟ್ ಬಿದ್ದಾಗ ಬಂಧಿಸಲು ಯತ್ನಿಸಲಾಯಿತು. ಆದರೆ, ಈ ಬೋಟ್ ಪರಾರಿಯಾಗಲು ಯತ್ನಿಸಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು.

ಈ ದೋಣಿ ಪಾಕಿಸ್ತಾನದ್ದು ಎಂದು ಭಾರತ ಆರೋಪಿಸಿತ್ತು. ಆದರೆ, ಪಾಕಿಸ್ತಾನ ಸರ್ಕಾರ ಇದನ್ನು ನಿರಾಕರಿಸಿತ್ತು.

English summary
A clarification regarding a statement on the Pakistan boat issue stating that no statement regarding the ordering of blowing up of the boat was made. In the clarification issued by the DIG, it is stated that the reporting was factually incorrect and the DIG does not subscribe to the text.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X