ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನು ಹಿಟ್ಲರ್, ಗಡ್ಡಾಫಿಗೆ ಹೋಲಿಸಿದ ವಿಪಕ್ಷ

By Prasad
|
Google Oneindia Kannada News

ನವದೆಹಲಿ, ನವೆಂಬರ್ 17 : ಪೂರ್ವನಿರ್ಧಾರದಂತೆ ವಿರೋಧ ಪಕ್ಷಗಳು ನರೇಂದ್ರ ಮೋದಿ ಸರಕಾರದ ಮೇಲೆ ಚಳಿಗಾಲದ ಅಧಿವೇಶನದ ಎರಡನೇ ದಿನವೂ ಮುಗಿಬಿದ್ದಿವೆ. 500 ಮತ್ತು 1000 ರುಪಾಯಿ ನೋಟು ನಿಷೇಧವನ್ನು ಸರಿಯಾಗಿ ನಿಭಾಯಿಸಿಲ್ಲವೆಂದು ಆಡಳಿತ ಪಕ್ಷದ ಮೇಲೆ ಯುದ್ಧ ಸಾರಿವೆ.

ನೋಟು ನಿಷೇಧದಂಥ ಕಠಿಣ ಮತ್ತು ದಿಟ್ಟ ನಿರ್ಧಾರ ತೆಗೆದುಕೊಂಡ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್, ಬೆನಿಟೊ ಮುಸ್ಸೋಲಿನಿ, ಗಡ್ಡಾಫಿ ಮತ್ತು ಫ್ರಾನ್ಸ್‌ನ ರಾಣಿ ಮೇರಿ ಅಂಟೊಯ್ನೆಟ್ ಅವರಿಗೆ ಹೋಲಿಸಿ ವಾಗ್ದಾಳಿ ಮಾಡುತ್ತಿವೆ.

Opposition compared Modi to Adolf Hitler, Gaddafi

ಸಿಪಿಐಎಂನ ಸೀತಾರಾಂ ಯಚೂರಿ ಅವರು, 130 ಕೋಟಿ ಜನರಲ್ಲಿ ಕೇವಲ 2.6 ಕೋಟಿ ಜನರ ಬಳಿ ಮಾತ್ರ ಕ್ರೆಡಿಟ್ ಕಾರ್ಡ್ ಇದೆ. ಅಲ್ಲದೆ, ಬಳಕೆಯಲ್ಲಿರುವ ಶೇ.86ರಷ್ಟು ನೋಟುಗಳನ್ನು ನಿಷೇಧಿರಸಲಾಗಿದೆ. ನಿಮ್ಮ ಬಳಿ ಪೇಪರ್ ಇಲ್ಲದಿದ್ದರೆ ಪ್ಲಾಸ್ಟಿಕ್ ಬಳಸಿ. ನಮ್ಮಲ್ಲಿಯೇ ಮೋದಿ ಅಂಟೊಯ್ನೆಟ್ ಇದ್ದಾರೆ ಎಂದು ಲೇವಡಿ ಮಾಡಿದರು.

ಪ್ರಧಾನಿ ಸ್ವತಃ ಸಂಸತ್ತಿನಲ್ಲಿರಬೇಕು. ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಪಾರ್ಲಿಮೆಂಟಿನಲ್ಲಿ ಈ ವಿಷಯದ ಕುರಿತು ಮತ ಹಾಕುವಂತಾಗಬೇಕು. ಜಂಟಿ ಸಂಸದೀಯ ಸಮಿತಿ ಮಾತ್ರ ಇದ್ದರೆ ಸಾಲದು ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓಬ್ರಿಯೆನ್ ಅವರು ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

English summary
Opposition has compared Narendra Modi to Adolf Hitler, Benito Mussolini and Muammar Gaddafi, and even the French queen Marie Antoinette for demonetisation and mishandling the situation in debate on demonetisation at winter session in Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X