ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ದಿನಗಳಲ್ಲಿ 1000 ಕೋಟಿ ಕಳ್ಕೊಂಡ 'ಸಂತ'

By Mahesh
|
Google Oneindia Kannada News

ಚಂಡೀಗಢ, ನ.28:ಸ್ವಯಂಘೋಷಿತ ದೇವಮಾನವ ಸಂತ ರಾಮ್ ಪಾಲ್ ಕಳೆದ 10 ದಿನಗಳಲ್ಲಿ 1000 ಸಾವಿರ ಕೋಟಿ ರು ಕಳೆದುಕೊಂಡಿರುವ ಅಂದಾಜು ಸಿಕ್ಕಿದೆ. ವಿವಾದಿತ ಸ್ವಾಮೀಜಿ ರಾಂಪಾಲ್ ಬಂಧನಕ್ಕೆ ಸುಮಾರು 26 ಕೋಟಿ ರು ಖರ್ಚಾಗಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿಗೆ ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ. ಜಯಪೌಲ್ ಮತ್ತು ದರ್ಶನ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಿವಾದಿತ ಗುರು ರಾಂಪಾಲ್ ರನ್ನು ಬಿಗಿ ಬಂದೋ ಬಸ್ತ್ ನೊಂದಿಗೆ ಹಾಜರುಪಡಿಸಲಾಯಿತು. ರಾಂಪಾಲ್ ಜೊತೆ ಸಹ ಆರೋಪಿಗಳಾದ ರಾಮ್ ಪಾಲ್ ಧಾಕಾ ಮತ್ತು ಒ.ಪಿ. ಹೂಡಾ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿತು

Operation to arrest godman Rampal cost over Rs 26 crore

ರಾಂಪಾಲ್‌ರ ಬಂಧನಕ್ಕೂ ಮುನ್ನ ಹರಿಯಾಣದ ಹಿಸ್ಸಾರ್‌ನ ಸತ್‌ಲೋಕ್ ಆಶ್ರಮದ ಮುಂದೆ ಭಾರಿ ಪ್ರತಿಭಟನೆ ನಡೆದಿತ್ತು. ಬಳಿಕ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿದ್ದು, ಪ್ರತಿಭಟನಾ ನಿರತರನ್ನು ಸ್ಥಳಾಂತರ ಹಾಗೂ ಸಂತ ರಾಂಪಾಲ್ ಪತ್ತೆಗೆ ಮತ್ತು ಬಂಧನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿಯನ್ನು ಹರಿಯಾಣ ಡಿಜಿಪಿ ಎಸ್.ಎನ್ ವಶಿಷ್ಠ ಅವರು ಕೋರ್ಟಿಗೆ ತಿಳಿಸಿದ್ದಾರೆ.

ಸುಮಾರು 42ಕ್ಕೂ ಅಧಿಕ ಕೋರ್ಟ್ ಸಮನ್ಸ್ ಗೆ ಸೊಪ್ಪು ಹಾಕದ ರಾಂಪಾಲ್ ರನ್ನು ನ.18ರಂದು ಬಂಧಿಸಲು ಯತ್ನಿಸಿದ ಪೊಲೀಸರನ್ನು ಸಾವಿರಾರು ಮಂದಿ ರಾಂಪಾಲ್ ಭಕ್ತರು ಅಡ್ಡಗಟ್ಟಿದ್ದರು. ಈ ಸಮಯದಲ್ಲಿ ಹಿಂಸಾಚಾರ ನಡೆದಿತ್ತು.ಐವರು ಮಹಿಳೆಯರು, ಒಂದು ಮಗು ಸಾವು ಹಾಗೂ 200ಕ್ಕೂ ಅಧಿಕ ಮಂದಿಗೆ ಗಾಯಗಳಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 907 ಜನರನ್ನು ಇದುವರೆವಿಗೂ ಪೊಲೀಸರು ಬಂಧಿಸಿದ್ದಾರೆ.

ಆಶ್ರಮದಲ್ಲಿ ಹಲವಾರು ಮಂದಿಯನ್ನು ಅಕ್ರಮವಾಗಿ ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿರುವ ಪ್ರಕರಣ ಬಯಲಿಗೆ ಬಂದಿತ್ತು. ನಕ್ಸಲರ ಸಂಪರ್ಕ ಹೊಂದಿದ್ದ ರಾಂಪಾಲ್ ಅವರ ಆಶ್ರಮದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.(ಪಿಟಿಐ)

English summary
Operation to arrest godman Rampal cost over Rs 26 crore Rampal's Rs. 1000-crore empire collapses in 10 days. The massive operation to locate and arrest controversial 'godman' Rampal cost the exchequer over Rs 26 crore, the Punjab and Haryana high court was on Friday told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X