ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಹತ್ಯೆ ಪ್ರಕರಣದ ಎಫ್ ಬಿಐ ವರದಿ ಬಹಿರಂಗ

By Mahesh
|
Google Oneindia Kannada News

ನ್ಯೂಯಾರ್ಕ್, ನ.11: ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಬಿಐ ಫೊರೆನ್ಸಿಕ್ಸ್ ವರದಿ ಬಹಿರಂಗಗೊಂಡಿದೆ. ಅಮೆರಿಕದಿಂದ ಬಂದ ವರದಿ ಈಗ ದೆಹಲಿ ಪೊಲೀಸರ ಕೈ ಸೇರಿದೆ. ಸುನಂದಾ ಅವರ ವಿಸೇರಾವನ್ನು ಪರೀಕ್ಷೆಗಾಗಿ ಎಫ್ ಬಿಐಗೆ ಕಳಿಸಲಾಗಿತ್ತು. ಅದರಂತೆ, ಪರೀಕ್ಷೆ ವರದಿಯಲ್ಲಿ ವಿಸೇರಾದಲ್ಲಿ ರೇಡಿಯೋ ವಿಕಿರಣ ಪದಾರ್ಥ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಸುನಂದಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ತರೂರ್ ಆಪ್ತಬಳಗದ ಮೂವರು ಸಾಕ್ಷಿಗಳ ಪೈಕಿ ಒಬ್ಬರು ಸುಳ್ಳು ಹೇಳಿರುವುದು ಪತ್ತೆಯಾಗಿತ್ತು. ನಂತರ ವಿಸೇರಾದಲ್ಲಿರುವ ವಿಷದಲ್ಲಿ ಇರುವ ಪದಾರ್ಥದ ಬಗ್ಗೆ ಪರೀಕ್ಷೆ ನಡೆಸಲು ಎಫ್ ಬಿಐ ಲ್ಯಾಬ್ ಗೆ ಕಳಿಸಲಾಗಿತ್ತು. [ಸುನಂದಾ ಹತ್ಯೆ : ಕುರುಡು ಕಾಂಚಾಣದ ಕೈವಾಡ?]

No radioactive substance in Sunanda Pushkar's body- FBI lab concludes

ಈ ವರದಿಯಂತೆ ಪೊಲೊನಿಯಂ ಸೇರಿದಂತೆ ಯಾವುದೇ ರೆಡಿಯೋ ವಿಕಿರಣ ವಸ್ತು ಪತ್ತೆಯಾಗಿಲ್ಲ. ಸುನಂದಾ ಪುಷ್ಕರ್ ಸಾವಿಗೆ ಪೊಲೊನಿಯಂ ಕಾರಣ ಎಂಬ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು. [ಸುನಂದಾ ಸಾವು ಹುಟ್ಟುಹಾಕಿದ 5 ಪ್ರಶ್ನೆಗಳು]

ಅಮೆರಿಕಕ್ಕೆ ಕಳಿಸಿದ್ದು ಏಕೆ?: ಭಾರತದಲ್ಲಿರುವ ಪ್ರಯೋಗಾಲಯಗಳಲ್ಲಿ ಅಣುವಿಕಿರಣ ಪದಾರ್ಥ ಇರುವುದನ್ನು ಪತ್ತೆ ಮಾಡಲು ಸಾಧ್ಯವಿರಲಿಲ್ಲ. ಅಲ್ಲದೆ, ಸುನಂದಾ ಸಾವಿಗೆ ಬಳಸಲಾದ ವಿಷವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು. ಈ ವಿಷದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಎಫ್ ಬಿಐ ನೆರವು ಕೋರಲಾಯಿತು. ವಾಷಿಂಗ್ಟನ್ ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸುನಂದಾ ಅವರ ವಿಸೇರಾ ಸ್ಯಾಂಪಲ್ ಗಳ ಪರೀಕ್ಷೆ ನಡೆಸಲಾಯಿತು.

51 ವರ್ಷ ವಯಸ್ಸಿನ ಸುನಂದಾ ಅವರು ನವದೆಹಲಿಯ ಹೋಟೆಲ್ ನಲ್ಲಿ 2014ರ ಜನವರಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಸುನಂದಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಸೇರಿದಂತೆ ಅನೇಕರು ತನಿಖೆಗೆ ಆಗ್ರಹಿಸಿದ್ದರು.(ಒನ್ ಇಂಡಿಯಾ ಸುದ್ದಿ)

English summary
The theory that a radioactive substance had caused the death of Sunanda Pushkar has been junked by a FBI forensic report which has been received by the Delhi police. The Delhi police probing the death of Sunanda Pushkar had sent viscera samples to the FBI for forensic analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X