ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸತ್ಯಾನ್ವೇಷಣೆಗೆ ಹೊರಟ ಪತ್ರಕರ್ತರ ಸಾವು ಕಳವಳಕಾರಿ'!

ಸರಕಾರ ಮಾಧ್ಯಮದ ಕಾರ್ಯನಿರ್ವಹಣೆಯಲ್ಲಿ ಎಂದು ಮೂಗು ತೂರಿಸಬಾರದು. ವಾಕ್ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ ನೀಡಬೇಕು. ಆದರೆ, ಅದು ಮಿತಿಯಲ್ಲಿರಬೇಕು. ಹೇಗೆಂದರೆ, ಹೆಚ್ಚು ತಿನ್ನಬೇಡ ಮಗುವೆ ಎಂದು ತಾಯಿ ತನ್ನ ಮಗುವಿಗೆ ಮಿತಿ ಹೇರಿದ ಹಾಗೆ.

By Prasad
|
Google Oneindia Kannada News

ನವದೆಹಲಿ, ನವೆಂಬರ್ 16 : "ಯಾವುದೇ ಸಾವು ಕಳವಳಕಾರಿ. ಆದರೆ, ಪತ್ರಕರ್ತರು ಸತ್ಯವನ್ನು ಬಿಂಬಿಸಲು ಹೋಗಿ ಸಾವಿಗೀಡಾಗುತ್ತಿದ್ದಾರೆ. ಅದು ಇನ್ನೂ ಕಳವಳಕಾರಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಂದು ಪತ್ರಿಕೋದ್ಯಮಿಗಳನ್ನು ಉದ್ದೇಶಿಸಿ ವಿಜ್ಞಾನ ಭವನದಲ್ಲಿ ಅವರು ಮಾತನಾಡುತ್ತಿದ್ದರು. ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುವುದಾಗಿ ಹೇಳಿದ ಅವರು, ದಿಕ್ಕುದೆಸೆಯಿಲ್ಲದ ಬರವಣಿಗೆಯ ಬಗ್ಗೆ ಎಚ್ಚರಿಕೆಯನ್ನೂ ನೀಡಿದರು.

ಸರಕಾರ ಮಾಧ್ಯಮದ ಕಾರ್ಯನಿರ್ವಹಣೆಯಲ್ಲಿ ಎಂದು ಮೂಗು ತೂರಿಸಬಾರದು. ವಾಕ್ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ ನೀಡಬೇಕು. ಆದರೆ, ಅದು ಮಿತಿಯಲ್ಲಿರಬೇಕು. ಹೇಗೆಂದರೆ, ಹೆಚ್ಚು ತಿನ್ನಬೇಡ ಮಗುವೆ ಎಂದು ತಾಯಿ ತನ್ನ ಮಗುವಿಗೆ ಮಿತಿ ಹೇರಿದ ಹಾಗೆ ಎಂದು ಅವರು ಮಾರ್ಮಿಕವಾಗಿ ನುಡಿದರು. [ಮೋದಿ ಬಗ್ಗೆ ದಿನೇಶ್ ಅಮಿನ್ ಮಟ್ಟು ಕಾಮೆಂಟ್ ಸರಿಯೆ?]

Narendra Modi's speech on National Press Day

ನರೇಂದ್ರ ಮೋದಿ ಅವರು ಆಡಿದ ಮಾತುಗಳ ತುಣುಕುಗಳು ಇಲ್ಲಿವೆ.

* ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಜವಾಬ್ದಾರಿ ಮಾದ್ಯಮದ ಮೇಲಿದೆ.

* ಮಾಧ್ಯಮ ಸ್ವಾತಂತ್ರ್ಯದ ಮೇಲೆ ಬಾಹ್ಯ ನಿಯಂತ್ರಣ ಹೇರುವುದು ಸಮಾಜಕ್ಕೆ ಒಳ್ಳೆಯದಲ್ಲ.

* ಎಮರ್ಜೆನ್ಸಿ ಸಮಯದಲ್ಲಿ ಪ್ರೆಸ್ ಕೌನ್ಸಿಲ್ ಹೇಗೆ ತನ್ನ ಅಸ್ವಿತ್ವ ಕಳೆದುಕೊಂಡಿತ್ತು ಎಂಬುದು ನಮಗೆ ನೆನಪಿದೆ. ಮೋರಾರ್ಜಿ ದೇಸಾಯಿ ಪ್ರಧಾನಿಯಾದ ಮೇಲೆ ಎಲ್ಲವೂ ಸಹಜ ಸ್ಥಿತಿಗೆ ಬಂದಿತು.

* ಮೊದಲು ಒಂದು ರಿಪೋರ್ಟ್ ಬರೆಯುವ ಮೊದಲು ಪತ್ರಕರ್ತರು ಸಾಕಷ್ಟು ಚಿಂತನೆ ನಡೆಸುತ್ತಿದ್ದರು. ಆದರೆ, ಇಂದಿನ ಸವಾಲುಗಳು ವಿಭಿನ್ನವಾಗಿವೆ. [ಟೈಮ್ಸ್ ನೌ ಎಡಿಟರ್ ಇನ್ ಚೀಫ್ ಹುದ್ದೆಗೆ ಅರ್ನಬ್ ಗೋಸ್ವಾಮಿ ರಾಜೀನಾಮೆ]

* ಪತ್ರಕರ್ತರಿಗೆ ಶೇ.10ರಷ್ಟು ಮಾಹಿತಿ ಮಾತ್ರ ಸಾಕು. ಉಳಿದ 90ರಷ್ಟು ಮಾಹಿತಿಯನ್ನು ಅವರೇ ಹುಡುಕಿಕೊಳ್ಳುತ್ತಾರೆ.

* ನೇಪಾಲ ಭೂಕಂಪ ಸಂಭವಿಸಿದಾಗ ಭಾರತೀಯ ಪತ್ರಕರ್ತರು ಅತ್ಯುತ್ತಮ ಕೆಲಸ ಮಾಡಿದ್ದರು. ಅವರು ಇಡೀ ಭಾರತವನ್ನು ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

* ಭಾರತೀಯ ಪತ್ರಿಕೋದ್ಯಮ ಸ್ವಚ್ಛತೆಯ ಬಗ್ಗೆ ಸಂದೇಶ ಜನರಿಗೆ ರವಾನಿಸುವಲ್ಲಿ ಕೂಡ ಮಹತ್ವದ ಪಾತ್ರ ವಹಿಸಿದ್ದಾರೆ.

English summary
Any death is worrisome, but journalists losing their lives just because they try showing the truth, it becomes even more serious then. PM Narendra Modi expressed during his speech on National Press Day celebration at Vigyan Bhavan in New Delhi on 16th November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X