ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಲ್ಲಿನ ಭಾರತೀಯ ಮೂಲದ ವ್ಯಕ್ತಿಗಳಿಗೆ ಶಾಶ್ವತ ವೀಸಾ!

By Mahesh
|
Google Oneindia Kannada News

ನವದೆಹಲಿ, ಫೆ.20: ಪಿಐಒ ಮತ್ತು ಒಸಿಐ ವಿಲೀನಗೊಳಿಸುವ ಬಗ್ಗೆ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆ ಈಗ ನಿಜರೂಪ ಪಡೆದುಕೊಂಡಿದೆ.

ನಾಗರೀಕತ್ವದ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ಮೋದಿ ನೇತೃತ್ವದ ಎನ್ ಡಿಎ ಸಚಿವ ಸಂಪುಟ ಗುರುವಾರ ಸಮ್ಮತಿ ಸೂಚಿಸಿದೆ. ಮುಂದಿನ ವಾರ ಆರಂಭಗೊಳ್ಳಲಿರುವ ಬಜೆಟ್ ಅಧಿವೇಶದನದಲ್ಲಿ ಈ ಕಾಯ್ದೆ ಚರ್ಚೆಗೆ ಬರಲಿದೆ.

ಈ ಹಿಂದೆ ಭಾರತೀಯ ಮೂಲದ ವ್ಯಕ್ತಿ (ಪಿಐಒ) ಮತ್ತು ಭಾರತದ ಸಾಗರೋತ್ತರ ನಾಗರಿಕತ್ವ (ಒಸಿಐ) ಯೋಜನೆಗಳನ್ನು ವಿಲೀನಗೊಳಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದರು. ಇದರಿಂದಾಗಿ ಭಾರತೀಯ ಮೂಲದ ವ್ಯಕ್ತಿಗಳಿಗೆ ಜೀವಿತಾವಧಿ ವೀಸಾ ಸಿಗುವುದಲ್ಲದೆ, ಪ್ರತಿ ಬಾರಿ ಭಾರತ ಭೇಟಿ ವೇಳೆ ಪೊಲೀಸ್ ಠಾಣೆಗೆ ಹೋಗಬೇಕಾದ ಆವಶ್ಯಕತೆ ಇರುವುದಿಲ್ಲ.

Narendra Modi NDA Cabinet Approves Amendment to Citizenship Act

ಇದಲ್ಲದೆ ಯುಎಸ್ ಪೌರತ್ವ ಹೊಂದಿರುವವರಿಗೆ 10 ವರ್ಷಗಳಿಗೆ ಸರಿ ಹೊಂದುವಂತೆ ವೀಸಾ ನೀಡಲು ಬೇಕಾದ ಪ್ರಕ್ರಿಯೆಗೆ ಚಾಲನೆ ನೀಡಲು ಮೋದಿ ಅವರು ಗೃಹ ಇಲಾಖೆಗೆ ಸೂಚನೆ ನೀಡಿದ್ದರು. [ಅಮೆರಿಕದಲ್ಲಿ ಮೋದಿ ಸಾರ್ವಜನಿಕ ಸಭೆ]

1955ರ ನಾಗರೀಕತ್ವದ ಕಾಯ್ದೆಯ ಕಠಿಣ ನಿಯಮಗಳ ಬಗ್ಗೆ ಪ್ರವಾಸಿ ಭಾರತೀಯ ದಿವಸ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ದೂರು ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಮುಖಂಡರು ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ.

ಈ ಮೂಲಕ ಪಿಐಒ ಗಳಿಗೆ 15 ವರ್ಷ ಇದ್ದ ವೀಸಾ ಅವಧಿಯನ್ನು ಜೀವಿತಾವಧಿಗೆ ವಿಸ್ತರಿಸಲಾಗಿದೆ. ಜೊತೆಗೆ ವಿದೇಶಿಯರು ಭಾರತೀಯರನ್ನು ಮದುವೆಯಾಗಿ ಇಲ್ಲೇ ನೆಲೆಸಿದರೆ ಅವರಿಗೂ ವೀಸಾ ಅವಧಿಯಲ್ಲಿ ರಿಯಾಯಿತಿ ಸಿಗಲಿದೆ.

ನಾಗರೀಕ ಕಾಯ್ದೆಗೆ ಯುಪಿಎ ಸರ್ಕಾರ 2013ರಲ್ಲಿ ಮೊದಲ ಬಾರಿಗೆ ತಿದ್ದುಪಡಿ ತಂದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದ ನಂತರ ಈ ಕಾಯ್ದೆಗೆ ತಿದ್ದುಪಡಿ ತರುವ ಭರವಸೆ ನೀಡಿದ್ದರು.

ನಾಗರೀಕತ್ವದ ಕಾಯ್ದೆಗೆ ತಂದ ತಿದ್ದುಪಡಿ ತರುವ ಬಗ್ಗೆ ಜ.6ರಂದು ಮೋದಿ ಸರ್ಕಾರ ಆದೇಶ ಹೊರಡಿಸಿತ್ತು. ಅದರೆ, ಇದನ್ನು ವಿರೋಧಿಸಿ ಹಿರಿಯ ಪತ್ರಕರ್ತ ಎಸ್.ವೆಂಕಟ್‌ನಾರಾಯಣ್ ಅವರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕಾಯ್ದೆ ತಿದ್ದುಪಡಿ ವಿಳಂಬವಾಗಿತ್ತು.

English summary
Prime Minister Narendra Modi led Union Cabinet approved amendment to the Citizenship Act on Thursday(Feb.19), paving the way for its introduction in the budget session of parliament begining next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X