ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾಗೆ ಅಚ್ಚರಿ ತಂದ ಪ್ರಧಾನಿ ಮೋದಿ ನಡೆ!

By Mahesh
|
Google Oneindia Kannada News

ನವದೆಹಲಿ, ಅ.23: ಕಾಶ್ಮೀರದಲ್ಲಿ ದೀಪಾವಳಿ ಆಚರಿಸಲು ಹೋಗುತ್ತೇನೆ ಎಂದು ತೆರಳಿರುವ ಪ್ರಧಾನಿ ಮೋದಿ ಅವರ ನಡೆ ಕಾಂಗ್ರೆಸ್ಸಿಗರಿಗೆ ಅಚ್ಚರಿ ತಂದಿದ್ದರೆ, ಇದಕ್ಕೂ ಮೊದಲು ಯುಪಿಎ ಸರ್ಕಾರದ ಮಹತ್ವ ಯೋಜನೆಯೊಂದನ್ನು ಮೋದಿ ಅವರು ಇನ್ನೊಂದು ಹಂತಕ್ಕೇರಿಸಿದ್ದಾರೆ. ಈ ಮೂಲಕ ಸೋನಿಯಾ ಗಾಂಧಿ ಅವರಿಗೂ ಆಚ್ಚರಿಯಾಗುವ ನಡೆ ಇಟ್ಟಿದ್ದಾರೆ. ಯಾವುದಿದು ಯೋಜನೆ? ಮುಂದೆ ಓದಿ...

ಯುಪಿಎ ಸರ್ಕಾರ ತನ್ನ ಅವಧಿಯಲ್ಲಿ ಜಾರಿಗೆ ತಂದಿದ್ದ ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಯೋಜನೆ ಸಾರ್ವಜನಿಕರ ಕೈಗೆ ಸಿಕ್ಕ ಪ್ರಬಲ ಅಸ್ತ್ರ ಎಂದೇ ಭಾವಿಸಲಾಗಿದೆ. ಈ ಕಾಯ್ದೆಗೆ ಎನ್ ಡಿಎ ಸರ್ಕಾರ ತಿದ್ದುಪಡಿ ತರಲಿದೆ, ಆರ್ ಟಿಐ ಕಾಯ್ದೆಯನ್ನು ನಿಷ್ಕ್ರಿಯಗೊಳಿಸಲಿದೆ ಎಂಬ ಟೀಕೆಗೆ ಉತ್ತರವಾಗಿ ಮೋದಿ ಅವರು ಕಾಯ್ದೆಗೆ ಇನ್ನಷ್ಟು ಬಲ ತಂದಿದ್ದಾರೆ.

RTI replies to be available online now; Narendra Modi surprises Sonia Gandhi

ಬಿಜೆಪಿ ಮೂಲಗಳ ಪ್ರಕಾರ ಆರ್ ಟಿಐ ಕಾಯ್ದೆಯಡಿಯಲ್ಲಿ ಸಲ್ಲಿಸಲಾದ ಅರ್ಜಿಗಳಿಗೆ ಸಚಿವರು, ಸರ್ಕಾರಿ ಅಧಿಕಾರಿಗಳು ನೀಡುವ ಉತ್ತರ ಆನ್ ಲೈನ್ ನಲ್ಲಿ ಪ್ರಕಟಿಸುವಂತೆ ಮೋದಿ ಅವರು ಸೂಚಿಸಿದ್ದಾರೆ. ಈ ಮೂಲಕ ಆರ್ ಟಿಐ ಅರ್ಜಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕತೆ ತರಲಾಗಿದೆ. ಅರ್ಜಿದಾರರ ವಿವರದ ಜೊತೆಗೆ ಅರ್ಜಿಯ ಸ್ಥಿತಿಗತಿ, ಅರ್ಜಿಗೆ ಸಿಕ್ಕಿರುವ ಉತ್ತರವೂ ಆನ್ ಲೈನ್ ನಲ್ಲಿ ಲಭ್ಯವಾಗಲಿದೆ.

ನವೆಂಬರ್ 2014ರಿಂದ ಈ ಹೊಸ ಕ್ರಮ ಜಾರಿಗೆ ತರುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಈ ಮುಂಚೆ ಅರ್ಜಿದಾರರಿಗೆ ಮಾತ್ರ ಈ ಮಾಹಿತಿ ಲಭ್ಯವಾಗುತ್ತಿತ್ತು. ಸರ್ಕಾರಿ ಅಧಿಕಾರಿಗಳು, ಸಚಿವಾಲಯ ನೀಡಿದ ಉತ್ತರದ ಬಗ್ಗೆ ಎಲ್ಲೂ ಸ್ಪಷ್ಟ ಮಾಹಿತಿ ಸಾರ್ವಜನಿಕರಿಗೆ ಸಿಗುತ್ತಿರಲಿಲ್ಲ. ಅರ್ಜಿದಾರರಿಗೆ ತಮ್ಮ ಅರ್ಜಿಗೆ ಉತ್ತರವನ್ನು ಪೋಸ್ಟ್ ಮೂಲಕ ಪಡೆದುಕೊಳ್ಳುತ್ತಿದ್ದರು. ಈಗ ಎಲ್ಲವೂ ಆನ್ ಲೈನ್ ನಲ್ಲಿ ಲಭ್ಯವಾಗಲಿದೆ.

Department of Personnel and Training (DoPT) ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಆರ್ ಟಿಐ ಅರ್ಜಿಗೆ ಸಚಿವಾಲಯ ನೀಡಿದ ಉತ್ತರಗಳನ್ನು ಅಕ್ಟೋಬರ್ 31, 2014ರ ನಂತರ ಆಯಾ ಸಚಿವಾಲಯ ವೆಬ್ ತಾಣಗಳಲ್ಲಿ ಪ್ರಕಟಿಸಲಾಗುತ್ತದೆ.

ಯುಪಿಎ ಕೂಡಾ ಪ್ರಯತ್ನಿಸಿತ್ತು; ಮೋದಿ ಅವರು ಈಗ ಕೈಗೊಂಡಿರುವ ಪಾರದರ್ಶಕ ಕ್ರಮವನ್ನು ಜಾರಿಗೆ ತರಲು ಯುಪಿಎ ಸರ್ಕಾರ ಕೂಡಾ ಯತ್ನಿಸಿತ್ತು. ಈ ಬಗ್ಗೆ ಏಪ್ರಿಲ್ 2013ರಲ್ಲೇ ಆದೇಶ ಹೊರಡಿಸಲಾಗಿತ್ತು ಅದರೆ, ಅನುಷ್ಠಾನಗೊಂಡಿರಲಿಲ್ಲ.

English summary
Prime Minister Narendra Modi might have surprised Congress President Sonia Gandhi by taking UPA scheme to another level. While critics were claiming that Modi government might dilute Right to Information (RTI) Act, it has done just the reverse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X