ಭಾರತೀಯ ಯೋಧರಿಗಾಗಿ #Sandesh2Soldirs ಅಭಿಯಾನ

Subscribe to Oneindia Kannada

ನವದೆಹಲಿ, ಅಕ್ಟೋಬರ್, 24: ನಾಗರಿಕರು ಮತ್ತು ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಿರುವ ಸೈನಿಕರ ನಡುವಿನ ಬಾಂಧವ್ಯಗಳನ್ನು ಗಟ್ಟಿಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿರುವ #Sandesh2Soldirs (ಸೈನಿಕರಿಗೆ ಸಂದೇಶ) ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು.

PM Modi launched #Sandesh2Soldiers special campaign

ಈ ಅಭಿಯಾನದ ಮೂಲಕ ದೀಪಾವಳಿ ಆಚರಣೆ ವೇಳೆ ಯೋದರಿಗೆ ಸಂದೇಶಗಳನ್ನು ಮತ್ತು ಪತ್ರಗಳನ್ನು ಬರೆದು ಕಳುಹಿಸುವಂತೆ ದೇಶದ ಜನರಿಗೆ ಪ್ರಧಾನಿ ಕರೆ ನೀಡಿದ್ದಾರೆ.

ನರೇಂದ್ರ ಮೋದಿ ಮೊಬೈಲ್ ಆ್ಯಪ್, MyGov.in ಮತ್ತು ಆಲ್ ಇಂಡಿಯಾ ರೇಡಿಯೋ ಮೂಲಕ ನಾಗರಿಕರು ಸೈನಿಕರಿಗೆ ಸಂದೇಶವನ್ನು ಕಳುಹಿಸಬಹುದು.

#Sandesh2Soldirs ಎಂದು ಬರೆದು ಈ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಹಬ್ಬದ ಸಂದರ್ಭದಲ್ಲಿಯೂ ತಮ್ಮ ಕುಟುಂಬದಿಂದ ದೂರವಿದ್ದುಕೊಂಡು ದೇಶ ಸೇವೆ ಮಾಡುತ್ತಿರುವ ವೀರ ಯೋಧರಿಗೆ ಸಂದೇಶ ಕಳುಹಿಸಿ ಅವರೊಂದಿಗೆ ಹಬ್ಬದ ಖುಷಿ ಹಂಚಿಕೊಳ್ಳಿ ಎಂದು ಪ್ರಧಾನಿ ತಿಳಿಸಿದ್ದಾರೆ.

ಈ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ನೀಡಿ ಮತ್ತು ಸೈನಿಕರೊಂದಿಗೆ ಸಾರ್ವಜನಿಕರ ಸಹಕಾರ ಇದ್ದೇ ಇರುತ್ತದೆ ಎಂದು ತಿಳಿಯಪಡಿಸಿ ಎಂದು ಅವರು ಹೇಳಿದ್ದಾರೆ.

English summary
Keeping in mind the troubles on India's border with Pakistan, Prime Minister Narendra Modi launched #Sandesh2Soldirs special campaign on Sunday(oct.23)
Please Wait while comments are loading...