ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಫ್ತಿ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ: ರಾಜನಾಥ್ ಸಿಂಗ್

By Mahesh
|
Google Oneindia Kannada News

ನವದೆಹಲಿ, ಮಾ.2: ಜಮ್ಮು ಮತ್ತು ಕಾಶ್ಮೀರದ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಉದಯವಾದ ಮೊದಲ ದಿನವೇ ಪಾಕ್ ಹಾಗೂ ಪ್ರತ್ಯೇಕವಾದಿಗಳ ಪರ ಸಿಎಂ ಮುಫ್ತಿ ಅವರು ನೀಡಿದ ಹೇಳಿಕೆ ಬಿಜೆಪಿಗೆ ಆಘಾತ ತಂದಿದೆ. ರಾಜ್ಯಸಭೆ, ಲೋಕಸಭೆ ಯಲ್ಲಿ ಸೋಮವಾರ ಇದೇ ಗದ್ದಲ ಸದನದ ಕಲಾಪವನ್ನು ನುಂಗಿದೆ. ಮುಫ್ತಿ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಅವರ ವಿವಾದಾತ್ಮಕ ಹೇಳಿಕೆಗೆ ತಮ್ಮ ಸಹಮತ ಇಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ನಿಲುವನ್ನು ಸದನದಲ್ಲಿ ಮಂಡಿಸಿದ್ದಾರೆ. ಮುಫ್ತಿ ಹೇಳಿಕೆಗೆ ಪ್ರತಿ ಸ್ಪಷ್ಟನೆ ನೀಡಿದರು.

ಕಣಿವೆ ರಾಜ್ಯದಲ್ಲಿ ಶಾಂತಿಯುವ ಚುನಾವಣೆ ನಡೆಸಲು ಚುನಾವಣಾ ಆಯೋಗ, ಭದ್ರತಾ ಸೇನೆ, ಸಂಸದೀಯ ಸಮಿತಿ ಮತ್ತು ರಾಜ್ಯದ ಜನರಿಗೆ ಸಲ್ಲುತ್ತದೆ. ನಾನು ಪ್ರಧಾನಿಯವರೊಂದಿಗೆ ಚರ್ಚಿಸಿ ಅವರ ಸಹಮತದಿಂದಲೆ ಈ ಹೇಳಿಕೆ ನೀಡುತ್ತಿದ್ದೇನೆ ಎಂದು ಲೋಕಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆ ಹೇಳಿದ್ದಾರೆ.

ಸಯೀದ್ ಹೇಳಿಕೆ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಯಶಸ್ವಿಯಾಗಿ ನಡೆಯುವುದಕ್ಕೆ ಅವಕಾಶ ಕಲ್ಪಿಸಿದ್ದಕ್ಕಾಗಿ ಹುರಿಯತ್, ಪಾಕಿಸ್ತಾನ ಮತ್ತು ಉಗ್ರಗಾಮಿಗಳನ್ನು ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರು ಭಾನುವಾರ ಹೇಳಿದ್ದರು.

Modi Government distances itself from Sayeed Mufti's 'separatist' statement

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತನ್ನ ಮೊದಲ ಸುದ್ದಿಗೋಷ್ಠಿಯಲ್ಲಿನ ಅವರ ಈ ಹೇಳಿಕೆಗೆ ಪ್ರತಿಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಮಿತ್ರಪಕ್ಷ ಬಿಜೆಪಿ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದೆ.

ಒಮರ್ ಅಬ್ದುಲ್ಲಾ ಖಂಡನೆ: ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಈ ವಿಷಯದಲ್ಲಿ ಬಿಜೆಪಿ ನಿಲುವನ್ನು ಪ್ರಶ್ನಿಸಿದ್ದಾರೆ.
,'ಜಮ್ಮು- ಕಾಶ್ಮೀರದಲ್ಲಿ ಚುನಾವಣೆಗೆ ಪಾಕಿಸ್ತಾನವು ಅವಕಾಶ ಕಲ್ಪಿಸಿದೆ'ಎಂಬ ನಿಮ್ಮ ಮುಖ್ಯಮಂತ್ರಿಗಳ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಗಳು ಮತ್ತು ಚುನಾವಣಾ ಸಿಬ್ಬಂದಿಯ ಪಾತ್ರವನ್ನು ವಿವರಿಸಿ ಎಂದು ಅವರು ಟ್ವೀಟಿಸಿದ್ದಾರೆ.


ಯಾವುದೇ ವ್ಯಕ್ತಿಯ ಹೇಳಿಕೆಗಳಿಗಿಂತ ಜಮ್ಮು-ಕಾಶ್ಮೀರದ ಜನತೆಯ ಭವಿಷ್ಯ ತುಂಬ ಮಹತ್ತ್ವದ್ದಾಗಿದೆ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದರು.

ಇದಕ್ಕೂ ಮುನ್ನ ನೂತನ ಸರಕಾರದ ಕಾರ್ಯಸೂಚಿಯನ್ನು ಅನಾವರಣಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಯೀದ್, ರಾಜ್ಯದ ಜನತೆಯ ಹೃದಯಗಳನ್ನು ಮತ್ತು ಮನಸ್ಸುಗಳನ್ನು ಗೆಲ್ಲುವ ಮೂಲಕ ಮೈತ್ರಿಕೂಟವು ಚರಿತ್ರೆಗೆ ತಿರುವು ನೀಡಬೇಕೆಂದು ನಾವು ಬಯಸುತ್ತೇವೆ ಎಂದಿದ್ದರು.

English summary
The BJP on Monday disassociated itself from the controversial statements made by Jammu and Kashmir Chief Minister Mufti Mohammad Sayeed giving credit to Pakistan for the peaceful assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X