ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಎಂಸಿಡಿ ಚುನಾವಣೆ: ಮತದಾನ ಮಾಡಿದ ಕೇಜ್ರಿವಾಲ್

ಎಂಸಿಡಿಯ ಆರಂಭಿಕ ಸಮೀಕ್ಷೆಗಳ ಪ್ರಕಾರ ಇಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎನ್ನಲಾಗುತ್ತಿದೆ. ಯಾರು ಗೆಲ್ಲಲಿದ್ದಾರೆ ಎಂದು ತಿಳಿದುಕೊಳ್ಳಲು ಏಪ್ರಿಲ್ 26ರವರೆಗೆ ಕಾಯಬೇಕು. ಅಂದು ಮತ ಎಣಿಕೆ ನಡೆಯಲಿದೆ.

By Sachhidananda Acharya
|
Google Oneindia Kannada News

ದೆಹಲಿ, ಏಪ್ರಿಲ್ 23: ದೆಹಲಿಯ ಮಹಾನಗರ ಪಾಲಿಕೆಯ 270 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಇದರಲ್ಲಿ ಉತ್ತರ ಎಂಸಿಡಿಯ 104, ದಕ್ಷಿಣ ಎಂಸಿಡಿಯ 104, ಹಾಗೂ ಪೂರ್ವ ಎಂಸಿಡಿಯ 64 ಸ್ಥಾನಗಳು ಇದರಲ್ಲಿ ಸೇರಿವೆ.

ಎಂಸಿಡಿಯ ಆಡಳಿತರೂಢ ಪಕ್ಷ ಬಿಜೆಪಿ ಹಾಗೂ ದೆಹಲಿಯಲ್ಲಿ ಅಧಿಕಾರದಲ್ಲಿರುವ ಎಎಪಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದರ ಜತೆಗೆ ಕಾಂಗ್ರೆಸ್ ಹಾಗೂ ಮೊದಲ ಬಾರಿಗೆ ಚುಣಾವಣೆ ಎದುರಿಸುತ್ತರುವ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ತಂಡದ ಸ್ವರಾಜ್ ಇಂಡಿಯಾ ಕೂಡಾ ಚುನಾವಣಾ ಕಣದಲ್ಲಿದೆ.[ದೆಹಲಿ ನಗರಸಭೆಯಲ್ಲಿ ಜಯಭೇರಿ ಬಾರಿಸಲಿದೆ ಬಿಜೆಪಿ: ಸಮೀಕ್ಷೆ]

MCD Election 2017: Voting begins in Delhi civic polls

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಗ್ರೇಟರ್ ಕೈಲಾಶ್ ಮೂರನೇ ಮತಗಟ್ಟೆಯಲ್ಲಿ ಮತನದಾನ ಮಾಡಿದ್ದರೆ, ಕೇಂದ್ರ ಸಚಿವ ಹರ್ಷವರ್ಧನ್ ಕೃಷ್ಣ ನಗರದಲ್ಲಿ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುಟುಂಬಸ್ಥರು ಸಿವಿಲ್ ಲೈನ್ಸ್ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಇನ್ನು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕುಟುಂಬಸ್ಥರೂ ಮತ ಚಲಾಯಿಸಿದ್ದಾರೆ.

MCD Election 2017: Voting begins in Delhi civic polls

ಆರಂಭಿಕ ಸಮೀಕ್ಷೆಗಳ ಪ್ರಕಾರ ಇಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎನ್ನಲಾಗುತ್ತಿದೆ. ಯಾರು ಗೆಲ್ಲಲಿದ್ದಾರೆ ಎಂದು ತಿಳಿದುಕೊಳ್ಳಲು ಏಪ್ರಿಲ್ 26ರವರೆಗೆ ಕಾಯಬೇಕು. ಅಂದು ಮತ ಎಣಿಕೆ ನಡೆಯಲಿದೆ.

English summary
Voting for Delhi Municipal polls is underway. Delhi Lt. Governor Anil Baijal, chief minister Arvind Kejriwal, central minister Dr. Harshavardhan cast their votes in their polling stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X