ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯ ನಂತರದ ಬಲವಂತದ ಲೈಂಗಿಕತೆ ಅಪರಾಧವಲ್ಲ: ಸುಪ್ರೀಂ

ಮದುವೆಯ ನಂತರದ ಬಲವಂತದ ಲೈಂಗಿಕತೆಯನ್ನು ಅಪರಾಧವೆಂದು ಪರಿಗಣಿಸಲಾಗದು ಎಂದ ಸುಪ್ರೀಂ ಕೋರ್ಟ್. ಐಪಿಸಿ ಸೆಕ್ಷನ್ 375ನೇ ಕಲಂ ಪ್ರಕಾರ ಮದುವೆಯ ನಂತರದಲ್ಲಿ ಯುವತಿ 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಆಕೆಯ ಮೇಲೆ ನಡೆಯುವ ಬಲವಂತದ ಲೈಂಗಿಕತೆ ಅಪರಾಧವ

|
Google Oneindia Kannada News

ನವದೆಹಲಿ, ಆಗಸ್ಟ್ 10: ಮದುವೆಯ ನಂತರ, ಗಂಡ-ಹೆಂಡತಿ ನಡುವೆ ನಡೆಯುವ ಬಲವಂತದ ಲೈಂಗಿಕತೆಯನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ನೂತನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರನೂತನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರ

ಕೆಲವು ಪ್ರಕರಣಗಳಲ್ಲಿ ಪತ್ನಿಯೇ ತನ್ನ ಪತಿಯ ವಿರುದ್ಧ ತನ್ನನ್ನು ಲೈಂಗಿಕವಾಗಿ ಬಲವಂತಪಡಿಸಿದನೆಂದು ದೂರು ನೀಡಿದ ಉದಾಹರಣೆಗಳು ಸಾಕಷ್ಟಿವೆ. ತನ್ನ ಸಮ್ಮತಿ ಇಲ್ಲದ ಕಾರಣದ ಅಂಥ ಪ್ರಕರಣಗಳನ್ನು ಅತ್ಯಾಚಾರವೆಂದು ಪರಿಗಣಿಸಬೇಕೆಂದು ವಾದವನ್ನೂ ಮಾಡಿರುವ ಪ್ರಕರಣಗಳು ಬಂದಿವೆ. ಆದರೆ, ಮದುವೆಯ ನಂತರ, ಆ ಯುವತಿಯು 18 ವರ್ಷದಿಂದ ಮೇಲ್ಪಟ್ಟಿದ್ದರೆ, ಆಕೆಯ ಮೇಲೆ ನಡೆಯಬಹುದಾದ ಬಲವಂತದ ಲೈಂಗಿಕ ಪ್ರಕರಣಗಳನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Marital rape cannot be considered as criminal act, says Supreme Court

ಭಾರತೀಯ ದಂಡ ಸಂಹಿತೆ (ಐಪಿಸಿ) 375ನೇ ಪರಿಚ್ಛೇದದ ಪ್ರಕಾರ, 18 ವರ್ಷ ಮೇಲ್ಪಟ್ಟ ಯುವತಿಯು ಮದುವೆಯಾದ ನಂತರ ತನ್ನನ್ನು ಬಲವಂತವಾಗಿ ಲೈಂಗಿಕತೆಗೆ ಬಳಸಿಕೊಳ್ಳಲಾಯಿತು ಎಂದು ದೂರಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ತನ್ನ ಸ್ಪಷ್ಟನೆಯನ್ನು ಸಮರ್ಥಿಸಿಕೊಂಡಿತು.

ಆದರೆ, ಇದೇ ವೇಳೆ, ಕೆಲವು ರಾಜ್ಯಗಳಲ್ಲಿ ಯುವತಿಯರಿಗೆ 18 ವರ್ಷ ತುಂಬುವುದರೊಳಗೆ ಮದುವೆ ಮಾಡಿ ಅವರನ್ನು ಬಲವಂತವಾಗಿ ಲೈಂಗಿಕತೆಗೆ ದೂಡುವುದನ್ನು ನ್ಯಾಯಾಲಯ ಒಪ್ಪುವುದಿಲ್ಲ ಎಂದಿರುವ ನ್ಯಾಯಪೀಠ, ಈ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಿ, ಇಂಥ ಘಟನೆಗಳನ್ನು ತಡೆಗಟ್ಟಲು ಸೂಕ್ತ ಕಾನೂನು ರೂಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

English summary
The raging issue whether to make forced marital intercourse and sexual acts part of offense of rape in penal law has been extensively debated and now it cannot be considered as a criminal act, the Supreme Court said on August 8, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X