ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮನ್ ಕಿ ಬಾತ್ ನ ಮನತಟ್ಟುವ 15 ಹೇಳಿಕೆಗಳು

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ ಹಲವು ಮಹತ್ವದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿ ವೈರಲ್ ಆಗಿದ್ದವು. ಅಂಥ 15 ಪ್ರಮುಖ ಹೇಳಿಕೆಗಳು ಇಲ್ಲಿವೆ.

|
Google Oneindia Kannada News

ನವದೆಹಲಿ, ಮೇ 26: ಪ್ರಧಾನಿ ನರೇಂದ್ರಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಇದೀಗ ಪುಸ್ತಕ ರೂಪದಲ್ಲಿ ಬರುತ್ತಿರುವ ಸುದ್ದಿಯನ್ನು ಈಗಾಗಲೇ ನೀವು ಒನ್ ಇಂಡಿಯಾದಲ್ಲಿ ಓದಿರುತ್ತೀರಿ.

ಇಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಲೋಕಾರ್ಪಣೆಗೊಳಿಸಲಿರುವ ಮನ್ ಕಿ ಬಾತ್ ನರೇಂದ್ರ ಮೋದಿಯವರ ಇದುವರೆಗಿನ ಮನ್ ಕಿ ಬಾತ್ ನ ಸಾರಾಂಶವನ್ನು ಹೊಂದಿದೆ.[ಮೋದಿಯವರ 'ಮನ್ ಕಿ ಬಾತ್' ಪುಸ್ತಕದ ರೂಪದಲ್ಲಿ]

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ ಹಲವು ಮಹತ್ವದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿ ವೈರಲ್ ಆಗಿದ್ದವು. ಇಂದು ಪುಸ್ತಕ ಬಿಡುಗಡೆಯಾಗುತ್ತರುವ ಹಿನ್ನೆಲೆಯಲ್ಲಿ ಅವುಗಳಲ್ಲಿ ಕೆಲವು ಹೇಳಿಕೆಗಳನ್ನು ನೆನಪಿಸಿಕೊಳ್ಳುವುದು ಸಂದರ್ಭೋಚಿತ.[ಬಸವಣ್ಣ, ರಾಮಾನುಜರ ನೆನೆದು ಬೇಸಿಗೆಗೆ ತಂಪೆರೆದ ಮನ್ ಕೀ ಬಾತ್]

ಮೋಸ ಅಂದ್ರೆ, ನಮಗೆ ನಾವೇ ಸಣ್ಣವರಾಗೋದು

ಮೋಸ ಅಂದ್ರೆ, ನಮಗೆ ನಾವೇ ಸಣ್ಣವರಾಗೋದು

1. ಮೋಸ ಮಾಡುವುದು ಅಂದ್ರೆ, ನಮಗೆ ನಾವೇ ಸಣ್ಣವರಾದಂತೆ. ಮೋಸ ಮಾಡುವುದನ್ನು ಅಭ್ಯಾಸಮಾಡಿಕೊಂಡರೆ ಕಲಿಕೆಯ ದಾಹ ಇಲ್ಲವಾಗುತ್ತದೆ. ಮೋಸ ಮಾಡುವುದಕ್ಕೆ ಸಮಯ, ಜಾಣ್ಮೆ ಬೇಕು ಎಂದಾದರೆ ಆ ಸಮಯ-ಜಾಣ್ಮೆಯನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಿ.

2. ಪಾಲಕರು ಮಕ್ಕಳಿಂದ ನಿರೀಕ್ಷಿಸುವುದನ್ನು ಬಿಟ್ಟು, ಅವರನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಮಕ್ಕಳಿಂದ ಅತಿಯಾದ ನಿರೀಕ್ಷೆ, ಮಕ್ಕಳಿಗೂ-ಪಾಲಕರಿಗೂ ಒಳ್ಳೆಯದಲ್ಲ.

['ಮನ್ ಕಿ ಬಾತ್' ನಲ್ಲಿ ಮೋದಿ ಹೊಗಳಿದ ಬಾಲಕಿ ಯಾರು?]['ಮನ್ ಕಿ ಬಾತ್' ನಲ್ಲಿ ಮೋದಿ ಹೊಗಳಿದ ಬಾಲಕಿ ಯಾರು?]

ಪರೀಕ್ಷೆ ಬದುಕಿನ ಮೌಲ್ಯಮಾಪಕವಲ್ಲ!

ಪರೀಕ್ಷೆ ಬದುಕಿನ ಮೌಲ್ಯಮಾಪಕವಲ್ಲ!

4. ನಿಮ್ಮ ಗುರಿ ಮತ್ತು ಪ್ರಯತ್ನ ಹೊಂದಾಣಿಕೆಯಾಗುತ್ತಿದ್ದರೆ, ಅದಕ್ಕೆ ತಕ್ಕ ಹಾಗೇ ಪ್ರತಿಫಲ ಬರುತ್ತದೆ.

5. ನಾವು ಪರೀಕ್ಷೆಗಳನ್ನು ನೋಡುವ ದೃಷ್ಟಿಕೋನವೇ ಸರಿಯಿಲ್ಲ. ಪರೀಕ್ಷೆಗಳೇ ಜೀವನದ ಮುಖ್ಯ ಘಟವಲ್ಲ. ನಾವೆಷ್ಟು ಜ್ಞಾನಹೊಂದಿದ್ದೇವೆ ಎಂಬುದು ಮುಖ್ಯ.

[ಮೋದಿ ಮನ್ ಕಿ ಬಾತ್ ನಲ್ಲಿ ಇಸ್ರೋ, ಕ್ಷಿಪಣಿ, ಡಿಜಿಟಲ್ ಮನಿ, ಕೃಷಿ][ಮೋದಿ ಮನ್ ಕಿ ಬಾತ್ ನಲ್ಲಿ ಇಸ್ರೋ, ಕ್ಷಿಪಣಿ, ಡಿಜಿಟಲ್ ಮನಿ, ಕೃಷಿ]

ನಮ್ಮದು VIP ಅಲ್ಲ, EPI ಪರಿಕಲ್ಪನೆ

ನಮ್ಮದು VIP ಅಲ್ಲ, EPI ಪರಿಕಲ್ಪನೆ

7. ಹೊಸ ಭಾರತದ್ದು VIP ಪರಿಕಲ್ಪನೆಯಲ್ಲ. EPI ಪರಿಕಲ್ಪನೆ. ಅಂದ್ರೆ Every Person is Important.

8. ನಮ್ಮ ರೈತರಂತೆಯೇ ವಿಜ್ಞಾನಿಗಳು ಸಹ ದೇಶದ ಹೆಮ್ಮೆ. ಅವರ ಬಿಡುವಿಲ್ಲದ ಪರಿಶ್ರಮದಿಂದಲೇ ದೇಶವಿಂದು ಹೆಮ್ಮೆಪಡುವತಾಗಿದೆ.

[ನಿಮ್ಮೊಂದಿಗೆ ಹೋರಾಡಿ, ಇತರರೊಂದಿಗೆ ಸ್ಪರ್ಧಿಸಬೇಡಿ: ಮೋದಿ][ನಿಮ್ಮೊಂದಿಗೆ ಹೋರಾಡಿ, ಇತರರೊಂದಿಗೆ ಸ್ಪರ್ಧಿಸಬೇಡಿ: ಮೋದಿ]

ನಮ್ಮನ್ನು ನಾವೇ ನಾಶಮಾಡಿಕೊಂಡರೆ ಹೇಗೆ?

ನಮ್ಮನ್ನು ನಾವೇ ನಾಶಮಾಡಿಕೊಂಡರೆ ಹೇಗೆ?

10. ಮಾದಕ ವ್ಯಸನ ನಮ್ಮ ಹಾದಿಯನ್ನೇ ಕತ್ತಲನ್ನಾಗಿಸುತ್ತದೆ. ಇದು ನಮ್ಮನ್ನು ನಾವೇ ನಾಶ ಮಾಡಿಕೊಳ್ಳುವ ವಿಧಾನ. ದಯವಿಟ್ಟು ಮಾದಕ ವ್ಯಸನದ ದಾಸ್ಯದಿಂದ ಹೊರಬನ್ನಿ.

11. ನೀವು ಇತಿಹಾಸ ಸೃಷ್ಟಿಮಾಡಬೇಕೆಂದರೆ ಮೊದಲು ಇತಿಹಾಸದ ಕುರಿತು ಕೆಲವಷ್ಟನ್ನಾದರೂ ತಿಳಿದುಕೊಳ್ಳಿ. ಏಕೆಂದರೆ ಇತಿಹಾಸ ನಮ್ಮ ಬೇರಿದ್ದಂತೆ. ಬೇರಿನ ಬಗ್ಗೆ ತಿಳಿಯದೆ ನಾವು ಸೊಂಪಾಗಿ ಚಿಗುರುವುದಕ್ಕೆ ಸಾಧ್ಯವಿಲ್ಲ.

[ಟೀಂ ಇಂಡಿಯಾ ಬಗ್ಗೆ 'ಮನ್ ಕಿ ಬಾತ್'ನಲ್ಲಿ ಮೋದಿ ಮನದಾಳದ ಮಾತು]

ಆಂತರ್ಯದ ಶಕ್ತಿ ಗುರುತಿಸಿ

ಆಂತರ್ಯದ ಶಕ್ತಿ ಗುರುತಿಸಿ

13. ಭಾರತದ 1.3 ಶತಕೋಟಿ ಜನರಿಗೂ ಪ್ರತಿಭೆಯಿದೆ, ಶಕ್ತಿಯಿದೆ. ಆದರೆ ಆ ಪ್ರತಿಭೆಯನ್ನು ಗುರುತಿಸುವವರಿಲ್ಲ. ನಾವು ನಮ್ಮ ಆಂತರ್ಯದಲ್ಲಿರುವ ಶಕ್ತಿಯನ್ನು ಗುರುತಿಸುವುದನ್ನು ಮೊದಲು ಕಲಿಯಬೇಕಿದೆ.

14. ಹೆಣ್ಣು ಶಿಶುವನ್ನು ರಕ್ಷಿಸುವುದು, ಆಕೆಗೆ ಶಿಕ್ಷಣ ನೀಡುವುದು ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಕರ್ತವ್ಯ. ನಮ್ಮ ಮಾನವೀಯ ಜವಾಬ್ದಾರಿಯನ್ನು ಅರಿತುಕೊಂದು, ಸ್ತ್ರೀಯರಿಗೆ ಗೌರವ ನೀಡಬೇಕಿದೆ.

15. ಅಂಗಾಂಗ ದಾನ ಅಮೂಲ್ಯ ಜೀವವನ್ನುರಕ್ಷಿಸುತ್ತದೆ. ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ಇದು ಅಮರತ್ವಕ್ಕೆ ಒಂದು ದಾರಿ. ಈ ದಾನಕ್ಕಿಂತ ಶ್ರೇಷ್ಠ ದಾನ ಇನ್ಯಾವುದಿದೆ?

English summary
Mann ki bath is a famous radio show by prime minister Narendra Modi. Mann ki baat is releasing in a book format in Rashtrapati Bhavan, New Delhi, today. Here are the 15 heart touching quotes of Mann ki baat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X