ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್... ಏನೇನೂ ಪ್ರಶ್ನೆ ಕೇಳ್ಬೇಡಿ, ಮೇಡಂ ಒಳಗಿದ್ದಾರೆ!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ ಮೇ, 17: ಭಾರತದ ಮುಂದಿನ ರಾಷ್ಟ್ರಪತಿ ಯಾರಾಗಬೇಕು ಎಂಬ ಬಗ್ಗೆ ಈಗಾಗಲೇ ಹಲವು ಚರ್ಚೆಗಳು ನಡೆದಿವೆ. ಇದೀಗ ವಿಪಕ್ಷಗಳು ಸಹ ರಾಷ್ಟ್ರಪತಿ ಅಭ್ಯರ್ಥಿಯನ್ನು ಆರಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಭ್ಯರ್ಥಿಯ ಹೆಸರನ್ನು ಬಹಿರಂಗಗೊಳಿಸಿವೆ.

ಈ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನಿನ್ನೆ(ಮೇ 16) ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚರ್ಚೆ ನಡೆಸಿದ್ದಾರೆ. ತೃಣಮೂಲ ಕಾಂಗ್ರೆಸ್ ರಾಷ್ಟ್ರಪತಿ ಅಭ್ಯರ್ಥಿ ವಿಷಯದಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.[ಮಮತಾ ಬ್ಯಾನರ್ಜಿ, ಸೋನಿಯಾ ಗಾಂಧಿ ಭೇಟಿ]

ಸೋನಿಯಾ ಗಾಂಧಿ ಅವರೊಂದಿಗೆ ರಾಷ್ಟ್ರಪತಿ ಅಭ್ಯರ್ಥಿ ಕುರಿತು ಸಾಕಷ್ಟು ಚರ್ಚೆ ನಡೆಸಿದ್ದೇನೆ. ಆದರೆ ಇನ್ನೂ ಅಭ್ಯರ್ಥಿಯ ಹೆಸರು ನಿರ್ಧಾರವಾಗಿಲ್ಲ. ಎಲ್ಲರೂ ಸೇರಿ ಒಬ್ಬ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಸೋನಿಯಾ ಗಾಂಧಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿತ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಕಾಂಗ್ರೆಸ್ ನೊಂದಿಗೆ ವಿಪಕ್ಷ ಸ್ಥಾನದಲ್ಲಿರುವ ಎಲ್ಲ ಪಕ್ಷಗಳೂ ಒಟ್ಟಾಗಿ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದಾರೆ. ಬಿಜೆಪಿಗೆ ಮುಖಭಂಗ ಮಾಡುವುದಕ್ಕಾಗಿ ಒಬ್ಬ ದಿಟ್ಟ ಅಭ್ಯರ್ಥಿಯನ್ನು ನೇಮಿಸುವುದು ವಿಪಕ್ಷಗಳಿಗೆ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಅಂಥ ಅಭ್ಯರ್ಥಿಯ ಹುಡುಕಾಟ ನಡೆಯುತ್ತಿದೆ.[ಆಸ್ಪತ್ರೆಯಲ್ಲಿ ಚಿಕಿತ್ಸೆ ನಡುವೆಯೇ ಸೋನಿಯಾಜೀ ಮಮತಾಗೆ ಕರೆ ಮಾಡಿದ್ಯಾಕೆ?]

ಅತ್ತೆ ರಾಷ್ಟ್ರಪತಿ ಆಯ್ಕೆಯ ಕುರಿತು ಚರ್ಚೆ ಎದ್ದರೆ ಇತ್ತ ಕಾಂಗ್ರೆಸ್ ನಾಯಕ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕರ್ನಾಟಕದ ಹೈಕೋರ್ಟಿನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿಸದಂತೆ ವಾದ ಮಂಡಿಸಿದರು. ನಿನ್ನೆಯ ಮುಖ್ಯ ಸುದ್ದಿಗಳ ಸುತ್ತ ಒಂದು ನೋಟ ಇಲ್ಲಿದೆ.

ಶ್... ಏನೇನೋ ಕೇಳ್ಬೇಡಿ!

ಶ್... ಏನೇನೋ ಕೇಳ್ಬೇಡಿ!

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೆದುರು ಹಾಜರಾದ ಮಮತಾ ಬ್ಯಾನರ್ಜಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ. ಶ್ ಏನೇನೋ ಪ್ರಶ್ನೆ ಕೇಳ್ಬೇಡಿ, ಸೋನಿಯಾ ಮೇಡಂ ಒಳಗಿದ್ದಾರೆ... ಅಂತಿರಬಹುದಾ ಮಮತಾ ಬ್ಯಾನರ್ಜಿ?

ಮಗನ ಮನೆ ಮೇಲೆ ದಾಳಿ, ತಂದೆಯದು ಕೋರ್ಟಿನಲ್ಲಿ ವಾದ!

ಮಗನ ಮನೆ ಮೇಲೆ ದಾಳಿ, ತಂದೆಯದು ಕೋರ್ಟಿನಲ್ಲಿ ವಾದ!

ಎಂಥ ವಿಪರ್ಯಾಸ ನೋಡಿ, ಅತ್ತ ತಮಿಳು ನಾಡಿನಲ್ಲಿ ಮಗ ಕಾರ್ತಿ ಮತ್ತು ತಮಗೆ ಸಂಬಂಧಿಸಿದ ಕಚೇರಿ ಮತ್ತು ನಿವಾಸದ ಮೇಲೆ ಸಿಬಿಐ ದಾಳಿ ನಡೆಯುತ್ತಿದ್ದರೆ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟಿನಲ್ಲಿ ವಾದ ಮಂಡಿಸಿದರು.[ಕಾರ್ತಿ, ಚಿದಂಬರಂ ವಿರುದ್ಧ ಇರೋ ಆರೋಪಗಳೇನು?]

ಅಯ್ಯೋ, ಯಾಕೆ ದಾಳಿ ಮಾಡ್ತಿದ್ದೀರಾ?!

ಅಯ್ಯೋ, ಯಾಕೆ ದಾಳಿ ಮಾಡ್ತಿದ್ದೀರಾ?!

ಚೆನೈ ನಲ್ಲಿರುವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಬಂಗಲೆಯ ಮೇಲೆ ಸಿಬಿಐ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಚಿಂತಾಕ್ರಾಂತರಾಗಿದ್ದ ಅವರ ಕುಟುಂಬದ ಸದಸ್ಯರು ಕಂಡಿದ್ದು ಹೀಗೆ.[ಇಂಥವರನ್ನು ಇನ್ನೈದು ವರ್ಷ ಸಹಿಸಿಕೊಳ್ಬೇಕಾ? ಅಂತಿದ್ದಾರೆ ಯೋಗಿ!]

ಬಿಸಿಲೋ ಬಿಸಿಲು!

ಬಿಸಿಲೋ ಬಿಸಿಲು!

ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚುತ್ತಿದ್ದು, ಜೈಪುರದ ಜಂತರ್- ಮಂಥರ್ ಬಳಿ ವಿದೇಶಿ ಪ್ರವಾಸಿಗರು ಕಾಣಿಸಿಕೊಂಡಿದ್ದು ಹೀಗೆ.[ಭಾರತದ ರಾಷ್ಟ್ರಪತಿ ಅಯ್ಕೆ ಮಾಡುವ ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?]

ದೇವರೇ, ಈ ಬಾರಿ ಮುಂಬೈ ಇಂಡಿಯನ್ಸ್ ಗೆಲ್ಲಲಿ...!

ದೇವರೇ, ಈ ಬಾರಿ ಮುಂಬೈ ಇಂಡಿಯನ್ಸ್ ಗೆಲ್ಲಲಿ...!

ಶಿರಡಿಯ ಸಾಯಿಬಾಬಾ ದೇವಾಲಯದಲ್ಲಿ ಪ್ರಾರ್ಥನೆ- ಪೂಜೆ ಸಲ್ಲಿಸಿದ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ, ಈ ಬಾರಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು ಬರಲಿ ಅಂತ ಪ್ರಾರ್ಥಿಸುತ್ತಿದ್ದಾರಾ?

ಸೆಕೆ ಸೆಕೆ ತಾಳೆನು ಈ ಸೆಕೆಯಾ..!

ಸೆಕೆ ಸೆಕೆ ತಾಳೆನು ಈ ಸೆಕೆಯಾ..!

ಕೋಲ್ಕತ್ತಾದ ಪ್ರಾಣಿ ಸಂಗ್ರಹಾಲಯವೊಂದರಲ್ಲಿ ಹುಲಿಯೊಂದು ನೀರಿಗಿಳಿದು, ಕೂಲ್ ಕೂಲ್ ಆಗಿದ್ದು ಹೀಗೆ.[ಚಿದು ಬಗ್ಗೆ ಸುಬ್ರಮಣ್ಯಂ ಸ್ವಾಮಿ, ಮೋದಿಗೆ ಬರೆದ ಪತ್ರದಲ್ಲೇನಿದೆ?]

{promotion-urls}

English summary
West Bengal Chief Minister Mamata Banerjee speaks with the media after meeting with Congress President Sonia Gandhi at her residence in New Delhi on Tuesday. They have discussed about president election as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X