ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎ‌ಚ್ ಮುನಿಯಪ್ಪ ಸೇರಿ 27 ಸಂಸದರು ಅಮಾನತು

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 03: ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕದ ಸಂಸದ ಕೆಎಚ್ ಮುನಿಯಪ್ಪ ಸೇರಿ 27 ಜನ ಕಾಂಗ್ರೆಸ್ ಸಂಸದರನ್ನು 5 ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಸುಮಿತ್ರಾ ಮಹಾಜನ ಅವರು ಘೋಷಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ 44 ಜನ ಸಂಸದರನ್ನು ಹೊಂದಿದೆ. ಈಗ 27 ಸಂಸದರಿಲ್ಲದೆ ಮುಂದಿನ ಕಲಾಪಗಳಲ್ಲಿ ಲಲಿತ್ ಗೇಟ್ ಹಾಗೂ ವ್ಯಾಪಂ ಹಗರಣಗಳ ಬಗ್ಗೆ ಹೇಗೆ ಸದ್ದು ಮಾಡುವುದೋ ಕಾದು ನೋಡಬೇಕಿದೆ. [ಸಂಸದರಿಗೆ 4 ರೂಪಾಯಿಗೆ ಭರ್ಜರಿ ಊಟ!]

ಸದನದ ಒಳಗೆ ಪ್ಲೇಕಾರ್ಡ್ ಗಳನ್ನು ತಂದು ಅಬ್ಬರಿಸುವುದು ನಿಯಮ ಮೀರಿದ ವರ್ತನೆಯಾಗಿದೆ ಎಂದು ಸ್ಪೀಕರ್ ಸುಮಿತ್ರಾ ಅವರು ಅನೇಕ ಬಾರಿ ಎಚ್ಚರಿಸಿದರೂ ಕಾಂಗ್ರೆಸ್ ಸಂಸದರು ಕಿವಿಗೊಟ್ಟಿರಲಿಲ್ಲ.

Sumitra Mahajan

ಸೋಮವಾರ ಪ್ರಶ್ನೋತ್ತರ ವೇಳೆ ಆರಂಭವಾಗುತ್ತಿದ್ದಂತೆ 30ಕ್ಕೂ ಅಧಿಕ ಕಾಂಗ್ರೆಸ್ ಸಂಸದರು ಸದನದ ಬಾವಿಗೆ ಇಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಪ್ಲೇ ಕಾರ್ಡ್ ಹಿಡಿದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ದನಿ ಎತ್ತಿದರು.[ಸಂಸದರಿಗೆ 100% ಸ್ಯಾಲರಿ ಹೆಚ್ಚಳ! ಮೊಮ್ಮಕ್ಕಳಿಗೂ ಉಡುಗೊರೆ]

ಇದರಿಂದ ಉತ್ತೇಜಿತರಾದ ಸಮಾಜವಾದಿ,ಆರ್ ಜೆಡಿ ಮತ್ತು ಜೆಡಿಯು ಸಂಸದರು ಕೂಡಾ ಬಾವಿಗೆ ಇಳಿದು ಪ್ರತಿಭಟನೆಗೆ ಬಲ ತಂದರು. ಈ ನಡುವೆ ತೆಲಂಗಾಣಕ್ಕೆ ಪ್ರತ್ಯೇಕ ಹೈಕೋರ್ಟ್ ಬೇಕು ಎಂದು ಸಾರುತ್ತಿದ್ದ ಪ್ಲೇಕಾರ್ಡ್ ಯಾರ ಗಮನಕ್ಕೂ ಬರಲಿಲ್ಲ.

ಅಮಾನತುಗೊಂಡವರಲ್ಲಿ ಪ್ರಮುಖರು:

ಬಿಎನ್ ಚಂದ್ರಪ್ಪ, ಸಂತೋಕ್ ಸಿಂಗ್ ಚೌಧರಿ, ಎಎಚ್ಕೆ ಚೌಧರಿ, ಸುಷ್ಮಿತಾ ದೇವ್, ನಿನಾಗ್ ಎರಿಂಗ್, ಆರ್ ಧ್ರುವನಾರಾಯಣ, ಗೌರವ್ ಗೊಗಾಯಿ, ಜಿ ಸುಕೇಂದ್ರ ರೆಡ್ಡಿ, ದೀಪೇಂದ್ರ ಹೂಡಾ, ಎಸ್ ಕೊಡಿಕುನ್ನಿಲ್, ಎಸ್ ಪಿ ಮುದ್ದಹನುಮೇಗೌಡ, ಅಭಿಜಿತ್ ಮುಖರ್ಜಿ, ಮುಲ್ಲಪ್ಪಲ್ಲಿ ರಾಮಚಂದ್ರನ್, ಕೆಎಚ್ ಮುನಿಯಪ್ಪ, ಬಿವಿ ನಾಯಕ್, ವಿನ್ಸೆಂಟ್ ಪಾಲ, ಎಂಕೆ ರಾಘವನ್, ರಂಜೀತ್ ರಾಜನ್, ಸಿಎಲ್ ರೌಲ, ಟಿ ಸಾಹು, ರಾಜೀ ಸತಾವ್, ರವನೀತ್ ಸಿಂಗ್, ಕೆಸಿ ವೇಣು ಗೋಪಾಲ್, ಟಿ ಮೈನ್ಯಾ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿಎಸ್ ಯಡಿಯೂರಪ್ಪ ಅವರು ಇಂಗ್ಲೀಷ್ ನಲ್ಲಿ ಬರೆದುಕೊಂಡ ಭಾಷಣ ಕೇಳಿಸಿಕೊಂಡವರಿಗೆ ಬಹುಮಾನ ಘೋಷಿಸುವುದೊಂದೇ ಬಾಕಿ.

21 ದಿನಗಳ ಮುಂಗಾರು ಅಧಿವೇಶನದಲ್ಲಿ ಇಲ್ಲಿ ತನಕ ಬರೀ ಹಗರಣಗಳದ್ದೇ ಸದ್ದು ಜೋರಾಗಿದೆ. ಲಲಿತ್ ಗೇಟ್, ವ್ಯಾಪಂ ಹಗರಣ, ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ಹಾಗೂ ಎಚ್ ಆರ್ ಡಿ ಸಚಿವೆ ಸ್ಮೃತಿ ಇರಾನಿ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಾ ಬಂದಿವೆ.

English summary
Lok Sabha speaker Sumitra Mahajan suspended 27 Congress MPs for 5 days for creating ruckus in the house. The Congress has 44 Lok Sabha MPs and this number is going to affect its position against the Centre in its push to stall the House over Lalit Gate and Vyapam scams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X