ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಸಾಲ ಮನ್ನಾ ಶೋಕಿಯೇ? ಎಂಥ ಮಾತಾಡ್ತೀರಿ ವೆಂಕಯ್ಯ ನಾಯ್ಡು!

|
Google Oneindia Kannada News

ನವದೆಹಲಿ, ಜೂನ್ 22: ಕೃಷಿ ಸಾಲ ಮನ್ನಾ ಮಾಡುವುದು ಶೋಕಿ ಆಗಿಬಿಟ್ಟಿದೆ. ಆದರೆ ಸಾಲ ಮನ್ನಾ ಅನ್ನೋದು ಅಂತಿಮವಾದ ಪರಿಹಾರ ಅಲ್ಲ ಎನ್ನುವ ಮೂಲಕ ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಗುರುವಾರ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಸಿದ್ದು ಕೊಟ್ಟ ಏಟಿಗೆ ಪತರಗುಟ್ಟುತ್ತಿರುವ ಕರ್ನಾಟಕ ಬಿಜೆಪಿ!ಸಿದ್ದು ಕೊಟ್ಟ ಏಟಿಗೆ ಪತರಗುಟ್ಟುತ್ತಿರುವ ಕರ್ನಾಟಕ ಬಿಜೆಪಿ!

ತೀರಾ ಅನಿವಾರ್ಯ ಅಂತಾದಾಗ ಸಾಲ ಮನ್ನಾ ಮಾಡಬೇಕು. ಆದರೆ ಅದೊಂಥರಾ ಶೋಕಿ ಆಗಿಬಿಡಬಾರದು. ಜೂನ್ ಇಪ್ಪತ್ತರವರೆಗೆ ರೈತರು ಸಹಕಾರಿ ಸಂಘಗಳಲ್ಲಿ ತೆಗೆದುಕೊಂಡಂಥ ಐವತ್ತು ಸಾವಿರದವರೆಗೆ ಸಾಲವನ್ನು ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ನಾಯ್ಡು ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

Venkaiah Naidu

ಅಂದಹಾಗೆ ಈಚೆಗಷ್ಟೇ ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಅದಕ್ಕೂ ಮುನ್ನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಕೃಷಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದರು.

ಇನ್ನೂ ಹೇಳಬೇಕೆಂದರೆ, ಉತ್ತರಪ್ರದೇಶದಲ್ಲಿ ಚುನಾವಣೆ ಪ್ರಚಾರ ಮಾಡುವ ವೇಳೆಯೇ ಬಿಜೆಪಿ ಕೃಷಿ ಸಾಲ ಮನ್ನಾ ಮಾಡುವ ಭರವಸೆ ನೀಡಿತ್ತು. ಅದರಂತೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಸಂಪುಟ ಸಭೆಯಲ್ಲೇ ಒಂದು ಲಕ್ಷ ರುಪಾಯಿವರೆಗಿನ ಕೃಷಿ ಸಾಲ ಮನ್ನಾ ಮಾಡಿದ್ದರು.

ಆದರೆ, ಇದಕ್ಕಿದ್ದ ಹಾಗೆ ವೆಂಕಯ್ಯ ನಾಯ್ಡು ಅವರಿಗೆ ಸಾಲ ಮನ್ನಾ ಮಾಡುವುದು ಶೋಕಿ ಅನ್ನಿಸಿದೆ. ಅದೂ ಕರ್ನಾಟಕದಲ್ಲಿ ಸಾಲ ಮನ್ನಾ ಮಾಡಿದ ನಂತರ ಇಂಥ ಮಾತು ಅವರಿಂದ ಬಂದಿದೆ.

English summary
Union urban development minister M Venkaiah Naidu said on Thursday loan waiver has become fashion now and should be waived in extreme situations only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X