ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾಹ ಸಂಬಂಧಿತ ವೆಬ್ ಸೈಟ್‌ಗೆ ಆಧಾರ್ ಕಡ್ಡಾಯ

By Vanitha
|
Google Oneindia Kannada News

ನವದೆಹಲಿ, ಜುಲೈ, 07 : ವೈವಾಹಿಕ ಸಂಬಂಧಿತ ವೆಬ್ ಸೈಟ್‌ ಗೆ ಭೇಟಿ ಕೊಡುವ ಮುನ್ನ ನಿಮ್ಮ ಬಳಿ ಆಧಾರ್ ಕಾರ್ಡ್ ಇದೆಯಾ?ಎಂದು ಖಾತರಿ ಪಡಿಸಿಕೊಳ್ಳಿ. ಸರ್ಕಾರ ವೈವಾಹಿಕ ವೆಬ್‌ ಸೈಟ್‌ ಗಳಲ್ಲಿ ಮದುವೆ ಆಗುವ ವ್ಯಕ್ತಿಯು ತಮ್ಮ ಸಂಪೂರ್ಣ ವಿವರವನ್ನು ಅಪ್ ಲೋಡ್ ಜೊತೆಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ.

ಇತ್ತೀಚಿನ ದಿನಗಳಲ್ಲಿ ವೈವಾಹಿಕ ಸಂಬಂಧ ಬೆಸೆಯುವ ವೆಬ್ ಸೈಟ್‌ ಗಳಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ವೈವಾಹಿಕ ವೆಬ್ ಸೈಟ್ ಗಳಲ್ಲಿ ತಮ್ಮದಲ್ಲದ ಭಾವಚಿತ್ರಗಳನ್ನು ಅಪ್ ಲೋಡ್ ಮಾಡುತ್ತಿರುವ ಪುರುಷರು, ಸಾಕಷ್ಟು ಮಹಿಳೆಯರನ್ನು ಮೋಸಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಹಲವಾರು ದೂರುಗಳು ದಾಖಲಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ರೂಪಿಸಲು ನಿರ್ಧಾರ ತೆಗೆದುಕೊಂಡಿದೆ[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

Like it or not! Aadhar to be linked to matrimonial accounts

ವೈವಾಹಿಕ ವೆಬ್ ಸೈಟ್‌ಗಳಲ್ಲಿ ಆಧಾರ ಕಾರ್ಡ್ ನೋಂದಣಿ ವ್ಯವಸ್ಥೆ ಜಾರಿಗೆ ತರುವಂತೆ ಮನೇಕಾ ಗಾಂಧಿ ಮೊದಲು ದನಿ ಎತ್ತಿದ್ದರು. ಇತ್ತೀಚೆಗೆ ವೆಬ್ ಸೈಟ್ ಗಳಲ್ಲಿ ಬ್ಲೂ ಪ್ರಿಂಟ್ ವ್ಯವಸ್ಥೆ ಜಾರಿಗೆ ತಂದಿರುವ ಎಲೆಕ್ಟ್ರಾನಿಕ್ಸ್ ಆಂಡ್ ಇನ್ ಫಾರ್ಮೇಶನ್ ತಂತ್ರಜ್ಞಾನವು ವಿವಿಧ ವೈವಾಹಿಕ ವೆಬ್ ಸೈಟ್‌ಗಳ ನೇತಾರರು ಹಾಗೂ ಮಧ್ಯಸ್ಥಿಕೆದಾರರನ್ನು ಕರೆದು ಬಳಕೆದಾರರ ರಕ್ಷಣೆಯ ಸಲುವಾಗಿ ಈ ಕ್ರಮ ಅನುಸರಿಸುವಂತೆ ತಿಳಿಸಿದೆ.

ಆಧಾರ್ ಕಾರ್ಡ್ ವ್ಯವಸ್ಥೆ ಮಾಡಿ ನಿರೀಕ್ಷಿತ ವರ ಹಾಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸಮ್ಮತಿ ಸೂಚಿಸಿರುವ ವೈವಾಹಿಕ ವೆಬ್ ಸೈಟ್ ಗಳ ಮಾಲೀಕರು ವೆಬ್ ಸೈಟ್ ನಲ್ಲಿ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸದೆ ಇರುವ ಸಾಧ್ಯತೆಗಳೇ ಹೆಚ್ಚಾಗಲಿದೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ.

English summary
In an order to check increasing cases of fraudulence on Matrimonial sites, the government has decided to make Aadhar number mandatory for registering in matrimonial sites. Maneka Ghandhi was the first to raise this issue after she received relentless complaints on fraudulence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X