ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಮೋರನ್ನು ಪ್ರಿಯಾಂಕಾ, ರಾಬರ್ಟ್ ಭೇಟಿಯಾಗಿಲ್ಲ: ಕಾಂಗ್ರೆಸ್

By Mahesh
|
Google Oneindia Kannada News

ನವದೆಹಲಿ, ಜೂ.26: ಐಪಿಎಲ್ ಹಗರಣದ ಆರೋಪಿ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪುತ್ರಿ ಹಾಗೂ ಅಳಿಯನನ್ನು ಲಂಡನ್ನಿನಲ್ಲಿ ಭೇಟಿ ಮಾಡಿದ್ದೆ ಎಂದು ನೀಡಿರುವ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಪ್ರಿಯಾಂಕಾ ಗಾಂಧಿಯಾಗಲಿ ರಾಬರ್ಟ್ ವದ್ರಾ ಆಗಲಿ ಲಲಿತ್ ಮೋದಿ ಅವರನ್ನು ಭೇಟಿ ಮಾಡುವ ಪ್ರಮೇಯವೇ ಇಲ್ಲ. ಲಲಿತ್ ಮೋದಿ ಪರಿಚಯವಿದ್ದ ಮಾತ್ರಕ್ಕೆ ಎಲ್ಲರನ್ನು ಆರೋಪಿಗಳೆಂದು ಹೇಳಲು ಬರುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದ್ದಾರೆ. [ಲಲಿತ್ ಮೋದಿಗೆ 'ಇಡಿ' ಕಟಂಕ]

ಯುಪಿಎ ಅಧಿಕಾರ ಅವಧಿಯಲ್ಲಿ ಲಂಡನ್ನಿನ ಟಿಮ್ಮೆ ಸರ್ನಾ ಜೊತೆಯಲ್ಲಿ ಪ್ರಿಯಾಂಕ ಗಾಂಧಿ ಹಾಗೂ ಅವರ ಪತಿ ವಾದ್ರಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದೆ ಎಂದು ಲಲಿತ್ ಮೋದಿ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು. ಟಿಮ್ಮಿ ಬಳಿ ನನ್ನ ಫೋನ್ ನಂಬರ್ ಇದೆ. ಅವರು ನನಗೆ ಕರೆ ಮಾಡಬಹುದು ಎಂದಿದ್ದರು. [ಬಿಜೆಪಿಯ ನಾಲ್ಕು ಘಟವಾಣಿಯರು]

Lalit Modi claims he met Priyanka Gandhi, Robert Vadra in London
ಲಲಿತ್ ಮೋದಿ ಅವರ ಟ್ವೀಟ್, ಟಾಕ್ ಗಳಿಂದ ಈಗಾಗಲೇ ಬಿಜೆಪಿಯಲ್ಲಿ ತಕ್ಕಮಟ್ಟಿಗೆ ಬಿಸಿ ಮುಟ್ಟಿದೆ. ಈಗ ಕಾಂಗ್ರೆಸ್ ಸರದಿ. ಮೋದಿ ಅವರ ಟ್ವೀಟ್ ನೋಡಿದ ಸಾರ್ವಜನಿಕರು ಕಾಂಗ್ರೆಸ್ ಪಕ್ಷ ತುಂಬಾ ಡೇಂಜರ್ ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ. [ಲಮೋಗೆ ರಾಜಕಾರಣಿಗಳು ಏಕೆ ಹೆದರುತ್ತಾರೆ? ]

ಇನ್ನು ಕೆಲವರು ದೇಶದಿಂದ ಪಲಾಯನಗೈದಿರುವ ಲಲಿತ್ ಮೋದಿ ಅವರನ್ನು ಭೇಟಿ ಮಾಡುವುದು ಮಹಾಪರಾಧ ಎನ್ನುವ ರಾಷ್ಟ್ರೀಯ ಸುದ್ದಿ ವಾಹಿನಿಗಳು ಈಗ ಸೋನಿಯಾ ಕುಟುಂಬಸ್ಥರ ರಾಜೀನಾಮೆ ಕೇಳುವ ಧೈರ್ಯ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅದರೆ, ಲಲಿತ್ ಮೋದಿಗೆ ಯಾವುದೇ ರೀತಿ ನೆರವು ನೀಡಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

English summary
After being embroiled in a controversy, former IPL Commissioner Lalit Modi has now named Robert Vadra and Priyanka Gandhi and said in a series of tweets that he had met the duo in London during UPA regime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X