ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಏಷಿಯಾ ರತ್ನ ಪ್ರಶಸ್ತಿ' ಪಡೆದ ಕೊಡಕ್ಕಲ್ ಶಿವಪ್ರಸಾದ್

By Vanitha
|
Google Oneindia Kannada News

ನವದೆಹಲಿ, ಫೆಬ್ರವರಿ,29: ಅಂಗವಿಕಲರ ಸೇವೆಯಲ್ಲೇ ತಮ್ಮ ಜೀವನದ ಸಾರ್ಥಕತೆ ಕಾಯ್ದುಕೊಳ್ಳುತ್ತಿರುವ ಸಾಮಾಜಿಕ ಕಾರ್ಯಕರ್ತ ಕೊಡಕ್ಕಲ್ ಶಿವಪ್ರಸಾದ್ ಅವರ ಸಾಧನೆಗಾಗಿ ಭಾರತೀಯ ಪುರಾತತ್ವ ಸಂಸ್ಥೆಯು ನವದೆಹಲಿಯಲ್ಲಿ ' ಜೆಮ್ ಆಪ್ ಏಷಿಯಾ' [ಏಷಿಯಾ ರತ್ನ] ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.

ಕಳೆದ 38 ವರ್ಷಗಳಿಂದ ಸನಾತನ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಾ ಬಂದಿರುವ ಕೊಲ್ಕತ್ತಾ ಮೂಲದ ಭಾರತೀಯ ಪುರಾತತ್ವ ಸಂಸ್ಥೆಯ 39ನೇ ಸಮ್ಮೇಳನವನ್ನು ಕೇಂದ್ರ ಹಣಕಾಸು ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ರವರು ದೆಹಲಿಯ ಆದ್ಯ ಕಾತ್ಯಾಯನಿ ಶಕ್ತಿ ಪೀಠದ ಸಭಾಂಗಣದಲ್ಲಿ ಉದ್ಘಾಟಿಸಿದ ಬಳಿಕ , ಪ್ರಶಸ್ತಿ ನೀಡಿದರು.[ಪತ್ರಿಕೋದ್ಯಮದ ಜಿ ಸಂತಾ ಪ್ರಶಸ್ತಿಗೆ ರೇಖಾ ಸತೀಶ್ ಆಯ್ಕೆ]

Kodakkal Shivaprasad has got Asia Rathna award in New delhi

ಕಳೆದ ನಾಲ್ಕು ದಶಕಗಳಿಂದ ಅಂಗವಿಕಲರ ಸಾಮಾಜಿಕ ನ್ಯಾಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ವಿವಿಧ ಮಜಲುಗಳಲ್ಲಿ ದುಡಿಯುತ್ತಿರುವ ಕೊಡಕ್ಕಲ್ ಅವರು ಹಲವಾರು ವಾರ್ತಾ ಪತ್ರಿಕೆಗಳಲ್ಲಿ ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. 50 ಕ್ಕೂ ಮೀರಿದ ಸಂಘ-ಸಂಸ್ಥೆಗಳಲ್ಲಿ ಶಾಶ್ವತ ಸದಸ್ಯತ್ವವನ್ನು ಹೊಂದಿದ್ದಾರೆ.[ಈ ಬಾರಿ 25 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ]

ಕೊಡಕ್ಕಲ್ ಶಿವಪ್ರಸಾದ್ ಅವರು ಶಿವಮೊಗ್ಗದ ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನ ಇಂಡಿಯನ್ ಇನ್ಸ್ ಸ್ಟಿಟ್ಯೂಷನ್ ಆಫ್ ಮ್ಯಾನೇಜ್ ಮೆಂಟ್, ಭಾರತ್ ಎಲೆಕ್ಟ್ರಾನಿಕ್ಸ್ ಹಾಗೂ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ನಲ್ಲಿ ಕಾರ್ಯನಿವರ್ಹಿಸಿದ್ದರು.

English summary
Kodakkal Shivaprasad has got Asia Rathna award in New delhi. This award given by Archaeological Survey of India. Kodakkal Shivaprasad is working on CANARA Bank, Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X