ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ 'ಸಿಎಂ' ಅಭ್ಯರ್ಥಿ ಕಿರಣ್ ಬೇಡಿ ಹರಕೆಯ ಕುರಿ: ಎಎಪಿ

By Mahesh
|
Google Oneindia Kannada News

ನವದೆಹಲಿ, ಜ.20: ನಿರೀಕ್ಷೆಯಂತೆ ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಜಿ ಐಪಿಎಸ್​ ಅಧಿಕಾರಿ ಕಿರಣ್ ಬೇಡಿ ಆಯ್ಕೆಯಾಗಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಚುನಾವಣಾ ಸಮಿತಿ ಬೇಡಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಬೇಡಿ ಅವರನ್ನು ಹರಕೆಯ ಕುರಿ ಎಂದು ಆಮ್ ಆದ್ಮಿ ಪಕ್ಷ ಕರೆದಿದೆ.

ಕಿರಣ್ ಬೇಡಿ ಅವರು ದೆಹಲಿಯ ಕೃಷ್ಣ ನಗರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಬೇಡಿ ಅವರ ಆಯ್ಕೆ ಬಗ್ಗೆ ಗೊಂದಲ ಏರ್ಪಟ್ಟಿತ್ತು.

Kiran Bedi BJP's chief ministerial candidate in Delhi

ಅದರೆ, ಭಿನ್ನಮತ ಸ್ಫೋಟಗೊಳ್ಳುವುದಕ್ಕೂ ಮುನ್ನ ಅಮಿತ್ ಶಾ ಅವರು ದೆಹಲಿ ಸಿಎಂ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಡಾ. ಹರ್ಷ್ ವರ್ಧನ್ ಅವರು ಸಿಎಂ ಅಭ್ಯರ್ಥಿಯಾಗಿದ್ದರು. [ಅಸೆಂಬ್ಲಿ ಚುನಾವಣೆ 2015: ಅಂಕಿ ಅಂಶ ಪಕ್ಷಿನೋಟ]

ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಅರವಿಂದ್ ಕೇಜ್ರಿವಾಲ್ ಜೊತೆಗಿದ್ದು ಅಣ್ಣಾ ಹಜಾರೆ ಬೆಂಬಲಿಸುತ್ತಿದ್ದ ಕಿರಣ್ ಅವರು ಈಗ ಬಿಜೆಪಿ ಸೇರಿ ಸಿಎಂ ಅಭ್ಯರ್ಥಿಯಾಗಿರುವುದರ ಬಗ್ಗೆ ಎಎಪಿ ಸಂತಾಪ ವ್ಯಕ್ತಪಡಿಸಿ, ರಾಜಕೀಯ ಸೇರಿ ಕಿರಣ್ ಬೇಡಿ ಅವರು ಹರಕೆಯ ಕುರಿಯಾಗಿದ್ದಾರೆ ಎಂದಿದೆ.[ಬೇಡಿ ಕುರಿತ ಕುತೂಹಲಕಾರಿ ವಿಷಯಗಳು]

ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕಿರಣ್ ಬೇಡಿ ಅವರನ್ನು ಬಿಜೆಪಿ ಮುಖಂಡರು, ಅಭಿಮಾನಿಗಳು ಸ್ವಾಗತಿಸಿ ಶುಭ ಕೋರಿದ್ದಾರೆ.

ಶಾಜಿಯಾ ಇಲ್ಮಿ


ಆಯ್ಕೆಗೂ ಮುನ್ನ ನಡೆದ ಸಿಇಸಿ ಸಭೆ

ಕಿರಣ್ ಮುಜಾಂದರ್ ಶಾ ಅವರಿಂದ ಅಭಿನಂದನೆ

ಕೇಜ್ರಿವಾಲ್ ವಿರುದ್ಧ ಬಿಜೆಪಿಯಿಂದ ನೂಪುರ್ ಶರ್ಮ

English summary
Former IPS officer Kiran Bedi, who joined the BJP less than a week ago, will be the party's chief ministerial candidate in the Feb 7 Delhi assembly polls, taking on her former anti-corruption stir colleague Arvind Kejriwal of the Aam Aadmi Party (AAP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X