ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ 'ಟ್ವೀಟ್' ಸವಾಲು ಸ್ವೀಕರಿಸಿದ ಕಿರಣ್ ಬೇಡಿ

By Mahesh
|
Google Oneindia Kannada News

ನವದೆಹಲಿ, ಜ.20: ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಅವರನ್ನು ಆಮ್ ಆದ್ಮಿ ಪಕ್ಷ ಹರಕೆಯ ಕುರಿ ಎಂದಿರಬಹುದು ಆದರೆ, ಪಕ್ಷದ ಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರು ಬೇಡಿ ಆಯ್ಕೆ ನಂತರ ಅವರಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.

ಅರವಿಂದ್ ಕೇಜ್ರಿವಾಲ್ ಹಾಕಿರುವ ಸವಾಲು ಸ್ವೀಕರಿಸಿರುವ ಕಿರಣ್ ಬೇಡಿ ಅವರು ನಾವು ಸದನದಲ್ಲೇ ಈ ಬಗ್ಗೆ ಚರ್ಚಿಸೋಣ ಎಂದು ಜಾಣ ಉತ್ತರ ನೀಡಿದ್ದಾರೆ. ಚರ್ಚೆ ಎಲ್ಲಿ ಬೇಕಾದರೂ ಮಾಡಬಹುದು. ಜಂತರ್ ಮಂತರ್ ಅಥವಾ ರಾಮಲೀಲಾ ಮೈದಾನ್ ಎಲ್ಲಿಯಾದರೂ ಚರ್ಚೆ ನಡೆಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಕ್ಕೆ ಕಿರಣ್ ಬೇಡಿ ಈ ರೀತಿ ಉತ್ತರ ನೀಡಿದ್ದಾರೆ. [ಅಸೆಂಬ್ಲಿ ಚುನಾವಣೆ 2015: ಅಂಕಿ ಅಂಶ ಪಕ್ಷಿನೋಟ]

ಬೇಡಿ ತಮ್ಮ ಉತ್ತರವನ್ನು ಮುಂದುವರೆಸುತ್ತಾ, ಚರ್ಚೆಗಿಂತ ಅನುಷ್ಠಾನ ಮುಖ್ಯ. ಯೋಜನೆಗಳು, ಅನಿಸಿಕೆಗಳನ್ನು ಕಾರ್ಯಗತ ಮಾಡುವತ್ತ ಹೆಜ್ಜೆ ಇರಿಸಬೇಕಿದೆ ಎಂದಿದ್ದಾರೆ. ಕೇಜ್ರಿವಾಲ್ ಅವರು ಬರೀ ಚರ್ಚೆಯಲ್ಲೇ ಕಾಲದೂಡುತ್ತಿದ್ದಾರೆ. ಎಲ್ಲವನ್ನು ಕಾರ್ಯಗತ ಮಾಡಲು ಮುಂದಾಗಲಿ ಎಂದಿದ್ದಾರೆ. [ಬೇಡಿ ಕುರಿತ ಕುತೂಹಲಕಾರಿ ವಿಷಯಗಳು...]

ಇದಕ್ಕೆ ಉತ್ತರಿಸಿರುವ ಕೇಜ್ರಿವಾಲ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಅನ್ ಬ್ಲಾಕ್ ಮಾಡಿ ಮೇಡಂ ನಿಮ್ಮನ್ನು ನಾನು ಹಿಂಬಾಲಿಸುತ್ತಿದ್ದೇನೆ ಎಂದಿದ್ದಾರೆ. ಇಬ್ಬರ ನಡುವಿನ ಟ್ವೀಟ್ ವಾರ್ ನಡುವೆ ಡಾ. ಕುಮಾರ್ ವಿಶ್ವಾಸ್ ಕೂಡಾ ಸೇರಿಕೊಂಡಿದ್ದಾರೆ. ಚರ್ಚೆ ಮುಂದುವರೆದಿದೆ.

ಬಹಿರಂಗ ಚರ್ಚೆ ಸಾಧ್ಯವೇ?

ಬಹಿರಂಗ ಚರ್ಚೆ ಸಾಧ್ಯವೇ?

ದೆಹಲಿ ಚುನಾವಣೆ ಫೆ.7ರಂದು ನಡೆಯಲಿದ್ದು, ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಬಹಿರಂಗ ಚರ್ಚೆ ನಡೆಸುವುದರ ಬಗ್ಗೆ ಇದನ್ನು ಟಿವಿಯಲ್ಲಿ ಅಥವಾ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡುವ ಬಗ್ಗೆ ಆಯೋಗ ಏನು ಹೇಳುತ್ತದೆ ಎಂಬ ಪ್ರಶ್ನೆಯೂ ಎದ್ದಿದೆ.

ಕಿರಣ್ ಬೇಡಿಗೆ ಶುಭ ಕೋರಿದ ಕೇಜ್ರಿವಾಲ್

ಕಿರಣ್ ಬೇಡಿಗೆ ಶುಭ ಕೋರಿದ ಅರವಿಂದ್ ಕೇಜ್ರಿವಾಲ್ಟ್ವೀಟ್ ಮಾಡಿದ್ದು ಹೀಗೆ

ಅನ್ ಬ್ಲಾಕ್ ಮಾಡಿ ಎಂದ ಕೇಜ್ರಿವಾಲ್

ಟ್ವಿಟ್ಟರ್ ನಲ್ಲಿ ನನ್ನನ್ನು ಅನ್ ಬ್ಲಾಕ್ ಮಾಡಿ ಎಂದ ಕೇಜ್ರಿವಾಲ್

ಕುಮಾರ್ ವಿಶ್ವಾಸ್ ಅವರ ಮಾತು

ಇಬ್ಬರ ನಡುವೆ ಡಾ. ಕುಮಾರ್ ವಿಶ್ವಾಸ್ ಎಂಟ್ರಿ.. ಚರ್ಚೆಗೆ ಆಹ್ವಾನ

ನಾವು ಟೆಲಿಕಾಸ್ಟ್ ಮಾಡುತ್ತೇವೆ

ನೀವು ಬಯಸಿದಂತೆ ಯಾವುದೇ ಪಕ್ಷಪಾತವಿಲ್ಲದೆ ನಿಮ್ಮಿಬ್ಬರ ಚರ್ಚೆಯನ್ನು ಪ್ರಸಾರ ಮಾಡುತ್ತೇವೆ ಎಂದ ಯೂಟ್ಯೂಬ್ ಚಾನೆಲ್, ಎನ್ ಡಿಟಿವಿ, ಎಬಿಪಿನ್ಯೂಸ್ ಕೂಡಾ ಅನುಮತಿಗೆ ಕಾಯುತ್ತಿವೆ.

English summary
A day after BJP announced that former IPS officer Kiran Bedi would be the party's chief minister candidate for Delhi, Aam Aadmi Party chief Arvind Kejriwal congratulated Bedi and invited her to a debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X