ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ

By Vanitha
|
Google Oneindia Kannada News

ನವದೆಹಲಿ,ಮಾರ್ಚ್,17: ಕರ್ನಾಟಕ ಹಲವು ವಿಚಾರಗಳಲ್ಲಿ ಪ್ರಥಮ, ದ್ವಿತೀಯ ಹೀಗೆ ತನ್ನ ಸ್ಥಾನವನ್ನು ಕಾಯ್ದುಕೊಂಡು ಇತರ ರಾಜ್ಯಗಳಿಗೆ ಮಾದರಿಯಾಗಿ ನಿಂತಿದೆ. ಆದರೆ ಆತ್ಮಹತ್ಯೆ ಪ್ರಕರಣದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿರುವುದು ಮಾತ್ರ ದುರಂತದ ಸಂಗತಿ.

ಹೌದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶದ ಪ್ರಕಾರ ಕರ್ನಾಟಕ ಆತ್ಮಹತ್ಯೆ ಪ್ರಕರಣದಲ್ಲಿ ನಾಲ್ಕನೇ ಸ್ಥಾನ ಗಳಿಸಿಕೊಂಡಿದೆ. ಮೊದಲ ಮೂರು ಸ್ಥಾನಗಳನ್ನು ಮಹಾರಾಷ್ಟ್ರ, ಪಶ್ವಿಮ ಬಂಗಾಳ, ತಮಿಳುನಾಡು ರಾಜ್ಯಗಳು ಹಂಚಿಕೊಂಡಿವೆ.[ಇದರಲ್ಲಿ ನಿಮ್ಮ ಊರಿನ, ತಾಲೂಕಿನ ಸುದ್ದಿ ಇದೆಯಾ ನೋಡಿಕೊಳ್ಳಿ]

Karnataka gets fourth place in suicide case

2014ರಲ್ಲಿ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡವರೆಷ್ಟು?

2014ರಲ್ಲಿ ಭಾರತದಲ್ಲಿ 1,31,666 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದಲ್ಲಿ 10,945 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 89,129 ಪುರುಷರು, 42, 521 ಮಹಿಳೆಯರು, 16 ಮಂಗಳಮುಖಿಯರು ಮೃತಪಟ್ಟಿದ್ದಾರೆ.[ಹಿಂಸೆ, ದೌರ್ಜನ್ಯದ ಗೂಡಾದ ವಿಜಯಪುರ ಅಂಧ ವಸತಿ ಶಾಲೆ]

ಮೊದಲ ಮೂರು ಸ್ಥಾನ ಗಳಿಸಿದ ರಾಜ್ಯದ ಅಂಕಿಅಂಶಗಳೇನು?

2014ರಲ್ಲಿ ಮಹಾರಾಷ್ಟ್ರದಲ್ಲಿ 16,307, ತಮಿಳುನಾಡಿನಲ್ಲಿ 16,122, ಪಶ್ಚಿಮ ಬಂಗಾಳದಲ್ಲಿ, 14,310 ಜನರು ಸಾವನ್ನಪ್ಪಿದ್ದಾರೆ.[ನಿರೋಶಾ ಭಾವಿ ಪತಿ ಜತೆ ಚಾಟ್ ಕಾಲ್ ಮಾಡುತ್ತಾ ನೇಣಿಗೆ ಶರಣು]

2013ರ ವರದಿ ಏನು ಹೇಳುತ್ತದೆ?

2013ರ ವರದಿಯನ್ನು ನೋಡಿದರೆ 2014ರಲ್ಲಿ ಕಡಿಮೆ ಆತ್ಮಹತ್ಯೆಗಳಾಗಿವೆ. ಕರ್ನಾಟಕದಲ್ಲಿ 2013ರಲ್ಲಿ 11,266 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು. ಮಹಾರಾಷ್ಟ್ರ ಮಾತ್ರ ತನ್ನ ಮೊದಲ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ಗೃಹ ಖಾತೆ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.[ಅಯ್ಯೋ ವಿಧಿಯೆ : ತಂದೆಯನ್ನು ಕೈಲಾಸಕ್ಕೆ ಕಳಿಸಿದ ಮಗನ ಕೈಸಾಲ]

English summary
Karnataka got fourth place in suicide case. Maharshtra, Tamil nadu, West bengal securing first three ranks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X