ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮೃತಿ ಇರಾನಿಗೆ ಹೊಸ ಹುದ್ದೆ: ಟ್ವಿಟ್ಟಿಗರ ಅಭಿಪ್ರಾಯವೇನು?

|
Google Oneindia Kannada News

ನವದೆಹಲಿ, ಜುಲೈ 18: ಸ್ಮೃತಿ ಇರಾನಿಯವರಿಗೆ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ಹೆಚ್ಚುವರಿ ಜವಾಬ್ದಾರಿಯನ್ನಾಗಿ ನೀಡುತ್ತಿದ್ದಂತೆಯೇ ಟ್ವಿಟ್ಟರಿನಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಇಷ್ಟು ದಿನ ವಾರ್ತಾ ಮತ್ತು ಪ್ರಸಾರ ಖಾತೆಯ ಜವಾಬ್ದಾರಿ ಹೊತ್ತಿದ್ದ ವೆಂಕಯ್ಯ ನಾಯ್ಡು ಅವರನ್ನು ಎನ್ ಡಿಎ ತನ್ನ ಉಪರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ವೆಂಕಯ್ಯ ನಾಯ್ಡು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸ್ಮೃತಿ ಇರಾನಿಯವರನ್ನು ಆಯ್ಕೆ ಮಾಡಲಾಗಿದೆ.

ವೆಂಕಯ್ಯ ನಾಯ್ಡು ಖಾತೆಗಳೀಗ ಸ್ಮೃೃತಿ ಇರಾನಿ, ತೋಮರ್ ಹೆಗಲಿಗೆವೆಂಕಯ್ಯ ನಾಯ್ಡು ಖಾತೆಗಳೀಗ ಸ್ಮೃೃತಿ ಇರಾನಿ, ತೋಮರ್ ಹೆಗಲಿಗೆ

ಮಾನವ ಸಂಪನ್ಮೂಲ ಸಚಿವೆಯಾಗಿದ್ದಾಗ ಹೈದರಾಬಾದ್ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ, ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಕನ್ನಯ್ಯ ಕುಮಾರ್ ವಿಷಯಕ್ಕೆ ಸಂಬಂಧಿಸಿದಂತೆ ಜೋರು ದನಿಯಲ್ಲಿ ಮಾತನಾಡಿದ್ದ ಸ್ಮೃತಿ ವರ್ತನೆ ವಿವಾದ ಹುಟ್ಟುಹಾಕಿತ್ತು.

ಅಷ್ಟೇ ಅಲ್ಲ, ಅವರ ವರ್ತನೆಯನ್ನು ಬಿಜೆಪಿ ಕೆಲ ಹಿರಿಯರೂ 'ಸಂಯಮ ಮೀರಿದ ವರ್ತನೆ' ಎಂಬಂತೆಯೇ ನೋಡಿದ್ದರು. ಈ ಎಲ್ಲ ಬೆಳವಣಿಗೆಯ ನಂತರ, ಸ್ಮೃತಿ ಇರಾನಿಯವರಿಗೆ ಲಗಾಮು ಹಾಕುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ಅದಕ್ಕೆಂದೇ ಅವರನ್ನು ಮಾನವ ಸಂಪನ್ಮೂಲ ಸಚಿವಾಲಯದಿಂದ ಮುಕ್ತಿಗೊಳಿಸಿ ಜವಳಿ ಖಾತೆಯ ಜವಾಬ್ದಾರಿ ಹೊರಿಸಲಾಗಿತ್ತು.

ಆದರೆ ಇದೀಗ ವೆಂಕಯ್ಯ ನಾಯ್ಡು ಅವರನ್ನು ಬಿಜೆಪಿ ತಮ್ಮ ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸುತ್ತಿದ್ದಂತೆಯೇ ಅವರು ನಿರ್ವಹಿಸುತ್ತಿದ್ದ ವಾರ್ತಾ ಮತ್ತು ಪ್ರಸಾರ ಖಾತೆಯ ಜವಾಬ್ದಾರಿಯನ್ನು ಸ್ಮೃತಿ ಇರಾನಿಯವರಿಗೆ ವಹಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಇಂಥ ಮಹತ್ವದ ಹುದ್ದೆಯನ್ನು ಸ್ಮೃತಿ ಇರಾನಿ ನಿರ್ವಹಿಸಲು ಸಮರ್ಥರೇ ಎಂಬ ಕುರಿತೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದರೆ, ಸ್ಮೃತಿ ಇರಾನಿಯವರಿಗೆ ಈ ಹುದ್ದೆ ಹೇಳಿಮಾಡಿಸಿದ್ದು ಎಂದು ಮತ್ತಷ್ಟು ಜನ ತಮ್ಮ ಬೆಂಬಲ ಸೂಚಿಸಿದ್ದಾರೆ.

Recommended Video

Virender Sehwag trolls martyr daughter on Ramjas clashes

ಸೂಕ್ತ ವ್ಯಕ್ತಿ

ಸ್ಮೃತಿ ಇರಾನಿಯವರನ್ನು ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವೆಯನ್ನಾಗಿ ಆರಿಸಲಾಗಿದೆ. ಈ ಸ್ಥಾನಕ್ಕೆ ಆಕೆ ನಿಜಕ್ಕೂ ಸೂಕ್ತ ವ್ಯಕ್ತಿ ಎಂದು ಅಶುತೋಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇದೆಂಥ ವ್ಯಂಗ್ಯ!

ನಕಲಿ ಡಿಗ್ರಿ ಸರ್ಟಿಫಿಕೇಟ್, ಸಂಸತ್ತಿನಲ್ಲೇ ಸುಳ್ಳು ಹೇಳಿಕೆಗಳನ್ನು ಕೊಡುವುದನ್ನ ಬಂಡವಾಳವನ್ನಾಗಿಟ್ಟುಕೊಂಡ ಸ್ಮೃತಿ ಇರಾನಿಯವರಿಗೆ ವಾರ್ತಾ ಮತ್ತು ಪ್ರಸಾರ ಖಾತೆ ನೀಡಲಾಗಿದೆ ಎಂದು ಕಮ್ರಾನ್ ಶಾಹಿದ್ ಎನ್ನುವರರು ಟ್ವೀಟ್ ಮಾಡಿದ್ದಾರೆ.

ಮಾಧ್ಯಮ ಎದುರಿಸಲು ಅವರೇ ಸರಿ!

ಪತ್ರಕರ್ತರು ಮತ್ತು ಉದಾರವಾದಿಗಳನ್ನು ಒಂದೇ ಕೈಯಿಯಲ್ಲೇ ಎದುರಿಸುವ ಸಾಮರ್ಥ್ಯವಿರುವುದು ಸ್ಮೃತಿ ಇರಾನಿಯವರಿಗೆ ಮಾತ್ರ. ಅಭಿನಂದನೆಗಳು ಸ್ಮೃತಿ ಇರಾನಿಯವರಿಗೆ ಎಂದು ಸಂದೇಶ್ ಎಸ್ ಕೆ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಭಾರತೀಯ ಮಾಧ್ಯಮ ಲೋಕಕ್ಕೆ ಚಳಿಗಾಲ!

ನನ್ನ ಪ್ರಕಾರ ಮಾನವ ಸಂಪನ್ಮೂಲ ಇಲಾಖೆಗೆ ಸ್ಮೃತಿ ಇರಾನಿ ಒಬ್ಬ ಕೆಟ್ಟ ಆಯ್ಕೆಯಾಗಿದ್ದರು. ಆದರೆ ವಾರ್ತಾ ಮತ್ತು ಪ್ರಸಾರ ಖಾತೆಗೆ ಅವರು ಒಂದು ಉತ್ತಮ ಆಯ್ಕೆ. ಭಾರತೀಯ ಮಾಧ್ಯಮ ಲೋಕಕ್ಕೆ ಚಳಿಗಾಲ ಶುರುವಾಗಲಿದೆ ಎಂದು ರಾಹುಲ್ ರಾಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪತ್ರಕರ್ತರ ಪ್ರತಿಕ್ರಿಯೆ ಹೀಗಿರುತ್ತೆ!

ಸ್ಮೃತಿ ಇರಾನಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆಯಾಗುತ್ತಿದ್ದಂತೆಯೇ ಎನ್ ಡಿಟಿವಿ, ರಾಜದೀಪ್ ಸರ್ದೇಸಾಯಿ ಮತ್ತಿತರ ಪತ್ರಕರ್ತರ ಪ್ರತಿಕ್ರಿಯೆ ಹೀಗುರುತ್ತದೆ ಎಂದು ವಿಭಾ ಎನ್ನುವವರು, ಭಯಭೀತ ಭಾವದ ದೃಶ್ಯವೊಂದರ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

English summary
Union government of India has appointed Smriti Irani as Information and Broadcasting Minister, after NDA's vice presidential candidate Venkaiah Naidu resigns his post. Smriti Iranis appointment as I&B minister has created a debate in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X