ಆನ್ ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ನಲ್ಲಿ ಸೇವಾ ತೆರಿಗೆ ಕಡಿತ

ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಟಿಕೆಟ್ ದರದಲ್ಲಿ ಸೇವಾ ತೆರಿಗೆ ಕಡಿತಗೊಳಿಸುವುದಾಗಿ ತಿಳಿಸಿದೆ.

Subscribe to Oneindia Kannada

ನವದೆಹಲಿ, ನವೆಂಬರ್, 23: ಆನ್ ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವವರಿಗೆ ಸೇವಾ ತೆರೆಗಿಯೆನ್ನು ಕಡಿತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಘೋಷಿಸಿದೆ.

ನವೆಂಬರ್ 23ರಿಂದ ಡಿಸೆಂಬರ್ 31 ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ರೈಲ್ವೆ  ಇಲಾಖೆ ಹಾಗು ಪ್ರವಾಸೋದ್ಯಮ ನಿಗಮ ಸ್ಪಷ್ಟಪಡಿಸಿವೆ. 

IRCTC asked to scrap online booking charge till Dec.31

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ರೈಲ್ವೆ ಇಲಾಖೆ ವಕ್ತಾರ ಅನಿಲ್ ಕುಮಾರ್ ಸಕ್ಸೇನಾ ಅವರು IRCTC ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಬುಕ್ ಮಾಡುವವರಿಗೆ ಸೇವಾ ತೆರಿಗೆ ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ರೈಲ್ವೆ ಇಲಾಖೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ನ ಹಿರಿಯ ಅಧಿಕಾರಿಗಳು ಮಂಗಳವಾರ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ರೂ.500 ಹಾಗು, ರೂ.1000 ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ನಂತರ ನಗದರು ರಹಿತ ವ್ಯವಾಹರಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಜನಧನ ಯೋಜನೆ, ಆಧಾರ್, ನೋಟು ನಿಷೇಧ ಈ ಎಲ್ಲಾ ಕ್ರಮಗಳನ್ನು ನಗದುರಹಿತ ವಹಿವಾಟಿಗಾಗಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ಹೇಳಲಾಗಿದೆ.

English summary
The Indian Railways on Tuesday waived the service tax on e-tickets and i-tickets booked via IRCTC's online website from November 23 to December 31 this year
Please Wait while comments are loading...