ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಪುಷ್ಕರ್ ಕೊಲೆ ದೃಢಪಡಿಸಿದ್ದು ಗಾಯ ಸಂ. 10

By ವಿಕ್ಕಿ ನಂಜಪ್ಪ
|
Google Oneindia Kannada News

ನವದೆಹಲಿ, ಜ. 6: ಇಷ್ಟು ದಿನ ತೀವ್ರ ಚರ್ಚೆಗೆ ಗುರಿಯಾಗಿದ್ದ ಸುನಂದಾ ಪುಷ್ಕರ್ ಸಾವು ಈಗ ಹೊರ ತಿರುವು ಪಡೆದಿದೆ. ಅವರ ಸಾವಿನ ಪ್ರಕರಣವನ್ನು ನವದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ ಪರಿಚ್ಛೇದ 302ರ ಅಡಿ ದಾಖಲಿಸಿಕೊಂಡಿದ್ದು, ತನಿಖೆಯನ್ನು ಪುನಾರಂಭಿಸಿದ್ದಾರೆ.

ಪೊಲೀಸರ ಈ ನಿರ್ಧಾರಕ್ಕೆ ಕಾರಣ ವೈದ್ಯಕೀಯ ವರದಿ. ಸುನಂದಾ ಪುಷ್ಕರ್ ಸಾವಿಗೆ ವಿಷ ಕಾರಣ ಎಂದು ವರದಿ ತಿಳಿಸಿದೆ. ಆದರೆ, ಈ ವಿಷವನ್ನು ಸುನಂದಾ ಕುಡಿದರೋ ಅಥವಾ ಯಾರಾದರೂ ಇಂಜೆಕ್ಟ್ ಮಾಡಿದರೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದ್ದರಿಂದ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. [ಸುನಂದಾ ಪುಷ್ಕರ್ ಅವರದ್ದು ವ್ಯವಸ್ಥಿತ ಕೊಲೆ]

Injury number 10 confirms Sunanda Pushkar death was murder

10ನೇ ಗಾಯ ಮಾರಕವಾಯ್ತೇ? : ಕೊಲೆ ಪ್ರಕರಣ ದಾಖಲಿಸುವ ಮೊದಲು ಪೊಲೀಸರು ಸುನಂದಾ ಅವರ ದೇಹದ ಮೇಲೆ ಉಂಟಾಗಿದ್ದ ಗಾಯಗಳಲ್ಲಿ ಸಂಖ್ಯೆ 10ನೇಯದ್ದರ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ ಎನ್ನಲಾಗಿದೆ.

ಅಂತಿಮ ವೈದ್ಯಕೀಯ ವರದಿಯ ಪ್ರಕಾರ 10ನೇ ಗಾಯವು ಸಿರಿಂಜ್‌ನಿಂದ ಉಂಟಾಗಿದೆ. ಅಲ್ಲದೆ, ಅದನ್ನು ಬಲವಂತದಿಂದ ಚುಚ್ಚಲಾಗಿದೆ ಎಂದು ಹೇಳಲಾಗಿದೆ. [ಸುನಂದಾ ಪುಷ್ಕರ್ ಕೊಲೆಯಾಗಿದೆ]

ಸುನಂದಾ ದೇಹದ ಮೇಲೆ ಒಟ್ಟು 15 ಗಾಯದ ಗುರುತುಗಳು ಕಂಡುಬಂದಿವೆ. ಆದರೆ, ಗಾಯ ಸಂಖ್ಯೆ 10 ಅತ್ಯಂತ ಮಾರಕವಾದದ್ದು. ಇದು ಬಲವಂತದಿಂದ ಉಂಟಾದಂತೆ ಕಂಡುಬಂದಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಪೊಲೊನಿಯಂ ಹಾಗೂ ಥಾಲಿಯಂ ರಾಸಾಯನಿಕಗಳು ಇರುವ ಕುರಿತು ವಿದೇಶದಲ್ಲಿಯೇ ಪರೀಕ್ಷಿಸಿ ದೃಢಪಡಿಸಿಕೊಳ್ಳಬೇಕು. ಅಲ್ಲದೆ, ಸುನಂದಾ ದೇಹದಲ್ಲಿ ನೆರಿಯಂ ಒಲಿಯಾಂಡರ್ ರಾಸಾಯನಿಕವೂ ಇರುವ ಕುರಿತು ಸಾಕ್ಷಿಯಿದೆ ಎಂದು ಹೇಳಲಾಗಿದೆ. [ಸುನಂದಾ ದೇಹದಲ್ಲಿತ್ತು ವಿಷದ ಅಂಶ]

ಅತಿ ಡ್ರಗ್ ಸೇವನೆ ಉಲ್ಲೇಖವೇ ಇರಲಿಲ್ಲ : ಮೇಲ್ನೋಟದ ಸಾಕ್ಷಿ ಹಾಗೂ ವೈದ್ಯಕೀಯ ವರದಿ ಪ್ರಕಾರ ಪ್ರಕರಣ ಬೆಳಕಿಗೆ ಬಂದಾಗ ಅತಿ ಡ್ರಗ್ ಸೇವನೆ ಕುರಿತು ಉಲ್ಲೇಖವಿರಲಿಲ್ಲ. ವೈದ್ಯಕೀಯ ವರದಿಯಲ್ಲಿ ಕೂಡ ಅಲ್ಪ್ರಾಕ್ಸ್ ಡ್ರಗ್ಸ್ ಪತ್ತೆಯಾಗಿರುವ ಕುರಿತು ಹೇಳಿಲ್ಲ. ಸುನಂದಾ ದೇಹದಲ್ಲಿ ಕೆಫಿನ್ ಮತ್ತು ಮದ್ಯ ಕಂಡುಬಂದಿದ್ದರೂ ಅದು ಮಾರಕವಲ್ಲ. [ಸುನಂದಾ ಸಾವಿನ ಹಿಂದೆ ವಿದೇಶಿಗನ ಕೈವಾಡ]

ಪ್ರಕರಣವನ್ನು ಪುನಃ ತನಿಖೆಗೆ ಒಳಪಡಿಸಲಾಗುವುದು. ತನಿಖೆಯಿಂದ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದು ನವದೆಹಲಿ ಪೊಲೀಸರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಸ್ಥಳದಲ್ಲಿ ಸುನಂದಾ ಒಬ್ಬರೇ ಇದ್ದರೋ ಅಥವಾ ಮೂವರು ಇದ್ದರೋ ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗುವುದು. ಪ್ರತ್ಯಕ್ಷ ಸಾಕ್ಷಿಗಳನ್ನು ಪುನಃ ವಿಚಾರಣೆಗೆ ಒಳಪಡಿಸಲಾಗುವುದು ಎಂದು ನವದೆಹಲಿ ಪೊಲೀಸರು ತಿಳಿಸಿದ್ದಾರೆ.

English summary
The investigations into the death of Sunanda Pushkar, wife of former Union Minister Shashi Tharoor, has taken a new turn as the Delhi police registered a case of murder under Section 302 of the Indian Penal Code. The Delhi police filed murder charges in this case based on the medical report. The medical report clearly states that she died of poisoning and investigations would now reveal who poisoned her and how it was done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X