ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚುನಾವಣೆ: ಇಂಡಿಯಾ ಟುಡೆ ಸಮೀಕ್ಷೆ ಏನನ್ನುತ್ತೆ?

|
Google Oneindia Kannada News

ನವದೆಹಲಿ, ಡಿ 19: ದೆಹಲಿ ವಿಧಾನಸಭೆಗೆ ನಡೆಯುವ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಇನ್ನು ಘೋಷಿಸಬೇಕಷ್ಟೇ.

ಈಗಾಗಲೇ, ಎಬಿಪಿ ನ್ಯೂಸ್ - ನೀಲ್ಸನ್ ಕೆಲವು ದಿನಗಳ ಹಿಂದೆ ಚುನಾವಣಾ ಸಮೀಕ್ಷೆ ನಡೆಸಿತ್ತು, ಈಗ 'ಇಂಡಿಯಾ ಟುಡೆ' ದೆಹಲಿಯ ಜನತೆ ಯಾವ ಪಕ್ಷದ ಪರ ಇದ್ದಾರೆನ್ನುವ ಸಮೀಕ್ಷೆಯನ್ನು ಜಂಟಿಯಾಗಿ ನಡೆಸಿದೆ. (ಎಬಿಪಿ ನ್ಯೂಸ್ ಸಮೀಕ್ಷೆ)

ಇಂಡಿಯಾ ಟುಡೆ ಮತ್ತು CICERO ನಡೆಸಿದ ಸಮೀಕ್ಷೆ ಪ್ರಕಾರ ಬಿಜೆಪಿ ತನ್ನ ಸ್ವಂತ ಬಲದಿಂದಲೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಎಪ್ಪತ್ತು ವಿಧಾನಸಭಾ ಕ್ಷೇತ್ರದ 4,273 ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ. (ಈಗ ಚುನಾವಣೆ ನಡೆದರೆ)

ಸಮೀಕ್ಷೆ ಪ್ರಕಾರ, ಬಿಜೆಪಿಗೆ ಅಧಿಕಾರಕ್ಕೇರಲು ಉತ್ತಮ ಅವಕಾಶವಿದ್ದರೂ, ಮುಖ್ಯಮಂತ್ರಿ ಹುದ್ದೆಗೆ ಯಾರು ಸೂಕ್ತ ಎನ್ನುವ ಪ್ರಶ್ನೆಗೆ ದೆಹಲಿ ಜನತೆ ಅರವಿಂದ್ ಕೇಜ್ರಿವಾಲ್ ಉತ್ತಮ ಆಯ್ಕೆ ಎಂದಿದ್ದಾರೆ. ನಂತರದ ಸ್ಥಾನ ಮಾಜಿ ಕೇಂದ್ರ ಸಚಿವ ಬಿಜೆಪಿಯ ಡಾ. ಹರ್ಷವರ್ಧನ್ ಅವರಿಗೆ.

ಬಿಜೆಪಿ ಮತ್ತು ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷಗಳ ನಡುವೆ ಮತಗಳ ಅಂತರ ಶೇ. ಮೂರರಷ್ಟು ಮಾತ್ರವೆಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. (ಕೇಜ್ರಿ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರಾ)

ಸಿಎಂ ಹುದ್ದೆಗೆ ಕೇಜ್ರಿವಾಲ್, ಹರ್ಷವರ್ಧನ್ ನಂತರದ ಆಯ್ಕೆ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್.

ಡಿಸೆಂಬರ್ 4 ರಿಂದ 8ರ ನಡುವೆ 35 ವಿಧಾನಸಭಾ ಕ್ಷೇತ್ರದ 6,409 ಜನರನ್ನು ಸಂಪರ್ಕಿಸಿ ಎಬಿಪಿ ನ್ಯೂಸ್ - ನೀಲ್ಸನ್ ಕೂಡಾ ಸಮೀಕ್ಷೆ ನಡೆಸಿತ್ತು ಮತ್ತು ಬಿಜೆಪಿಗೆ ಬಹುಮತ ಸಿಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿತ್ತು.

ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿದೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸರಾಸರಿ ಮತಗಳ ಅಂತರ

ಸರಾಸರಿ ಮತಗಳ ಅಂತರ

ಈ ತಕ್ಷಣ ದೆಹಲಿ ಅಸೆಂಬ್ಲಿಗೆ ಚುನಾವಣೆ ನಡೆದರೆ ಬಿಜೆಪಿಗೆ ಶೇ. 39, ಕಾಂಗ್ರೆಸ್ ಪಕ್ಷಕ್ಕೆ ಶೇ. 16 ಮತ್ತು ಆಮ್ ಆದ್ಮಿ ಪಕ್ಷಕ್ಕೆ ಶೇ. 36ರಷ್ಟು ಮತ ಸಿಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಯಾರಿಗೆ ಎಷ್ಟು ಸೀಟು ?

ಯಾರಿಗೆ ಎಷ್ಟು ಸೀಟು ?

ಸಮೀಕ್ಷೆಯ ಪ್ರಕಾರ
ಬಿಜೆಪಿ : 34 ರಿಂದ 40
ಕಾಂಗ್ರೆಸ್ : 03 ರಿಂದ 05
ಆಮ್ ಆದ್ಮಿ : 25 ರಿಂದ 31
ಇತರರು : 0 - 02

ಸಿಎಂ ಹುದ್ದೆಗೆ ಯಾರು ಸೂಕ್ತ - ಶೇಕಡಾವಾರು

ಸಿಎಂ ಹುದ್ದೆಗೆ ಯಾರು ಸೂಕ್ತ - ಶೇಕಡಾವಾರು

ಅರವಿಂದ್ ಕೇಜ್ರಿವಾಲ್ : ಶೇ. 35
ಡಾ. ಹರ್ಷವರ್ಧನ್ : ಶೇ. 16
ಶೀಲಾ ದೀಕ್ಷಿತ್ : ಶೇ.9
ಅರವಿಂದರ್ ಸಿಂಗ್ : ಶೇ.8

ದೆಹಲಿಯ ಪ್ರಮುಖ ಸಮಸ್ಯೆಗಳು

ದೆಹಲಿಯ ಪ್ರಮುಖ ಸಮಸ್ಯೆಗಳು

ಇಂಡಿಯಾ ಟುಡೆ ಮತ್ತು CICERO ನಡೆಸಿದ ಸಮೀಕ್ಷೆ ಪ್ರಕಾರ ದೆಹಲಿ ಮತದಾರರ ಪ್ರಮುಖ ಸಮಸ್ಯೆಗಳು ಇಂತಿದೆ (ಶೇಕಡಾವಾರು)
ಭ್ರಷ್ಟಾಚಾರ - ಶೇ.20
ಮಹಿಳಾ ಸುರಕ್ಷತೆ - ಶೇ. 17
ನೀರಿನ ಸಮಸ್ಯೆ - ಶೇ.15
ಹಣದುಬ್ಬರ - ಶೇ.12
ವಿದ್ಯುತ್ - ಶೇ.10

ಕೇಂದ್ರ ಸರಕಾರದ ಆಡಳಿತದ ಬಗ್ಗೆ

ಕೇಂದ್ರ ಸರಕಾರದ ಆಡಳಿತದ ಬಗ್ಗೆ

ಪ್ರಧಾನಿ ನರೇಂದ್ರ ಮೋದಿ ಸರಕಾರದ ಕಾರ್ಯವೈಖರಿ ಬಿಜೆಪಿಗೆ ವರವಾಗಿ ಪರಿಣಮಿಸಲಿದೆ. ಶೇ. 22ರಷ್ಟು ಮಂದಿ ಮಾತ್ರ ಮೋದಿ ಸರಕಾರದ್ದು ಕಳಪೆ ಸಾಧನೆ ಎಂದಿದೆ. ಶೇ. 74ರಷ್ಟು ಜನ ಮೋದಿ ಒಬ್ಬ ಅತ್ಯುತ್ತಮ ಆಡಳಿತಗಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಚುನಾವಣೆಯ ಸಮಯದಲ್ಲಿ ನೀಡಿದ್ದ ವಾಗ್ದಾನವನ್ನು ಮೋದಿ ಒಂದೊಂದಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆಂದು ಸಮೀಕ್ಷೆಯಲ್ಲಿ ಜನಾಭಿಪ್ರಾಯ ಪಟ್ಟಿದ್ದಾರೆ.

English summary
India Today-CICERO poll: BJP may form govt in Delhi, but as per survey Arvind Kejriwal still a favorite for CM post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X